More

    ಡಬ್ಬಲ್ ಇಂಜಿನ್ ಸರ್ಕಾರದಲ್ಲಿ ಅನ್ಯಾಯ, ಅನುದಾನ ತಾರತಮ್ಯ, ಶಾಸಕ ಡಾ.ದೇವಾನಂದ ಚವಾಣ್ ಅಸಮಾಧಾನ

    ವಿಜಯಪುರ: ಡಬ್ಬಲ್ ಇಂಜಿನ್ ಸರ್ಕಾರದಲ್ಲಿ ನಾಗಠಾಣ ಕ್ಷೇತ್ರಕ್ಕೆ ಅನುದಾನ ಹಂಚಿಕೆಯಲ್ಲಿ ಸಾಕಷ್ಟು ತಾರತಮ್ಯವಾಗಿದೆ ಎಂದು ಶಾಸಕ ಡಾ.ದೇವಾನಂದ ಚವಾಣ್ ಅಸಮಾಧಾನ ಹೊರಹಾಕಿದರು.

    ವಿಜಯಪುರ ಮಹಾನಗರ ಪಾಲಿಕೆ ವ್ಯಾಪ್ತಿಯ ನಾಗಠಾಣ ಕ್ಷೇತ್ರದ ವಾರ್ಡ್ ಗಳಲ್ಲಿ ಅಭಿವೃದ್ಧಿ ಗೆ ಹಿನ್ನಡೆಯಾಗಿದೆ.
    ಅನುದಾನ ಹಂಚಿಕೆಯಲ್ಲಿ ತಾರತಮ್ಯವಾಗಿದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.

    ಮಹಾನಗರ ಪಾಲಿಕೆ ಚುನಾವಣೆ ಮೂರು ವರ್ಷಗಳಿಂದ ಆಗಲಿಲ್ಲ. ಇದರಿಂದ ಅಭಿವೃದ್ಧಿ ಮರೀಚಿಕೆಯಾಯಿತು. ಆದರೂ ಸ್ವಪ್ರಯತ್ನದಿಂದ ಜನರ ಆಶೋತ್ತರಗಳಿಗೆ ಸ್ಪಂದಿಸುತ್ತಿರುವುದಾಗಿ ತಿಳಿಸಿದರು.

    ರಸ್ತೆ ಕಾಮಗಾರಿಗೆ ಹಿನ್ನೆಡೆ: ಕಾಂಗ್ರೆಸ್ ಸರ್ಕಾರ ಇದ್ದಾಗ ರೈಲ್ವೆ ಸ್ಟೇಶನ್ ರಸ್ತೆ ಕಾಮಗಾರಿಗೆ 1.40 ಕೋಟಿ ರೂ. ಮಂಜೂರಿಯಾಯಿತು. ಭೂಮಿ ಪೂಜೆ ಕೂಡ ಮಾಡಿದೆ. ಆದರೆ ಈವರೆಗೂ ಕಾಮಗಾರಿ ಮಾಡಲಾಗುತ್ತಿಲ್ಲ. ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದೆ. ಮಹಾನಗರ ಅಲಿಕೆ ಆಯುಕ್ತರನ್ನು ಕರೆದುಕೊಂಡು ಹೋಗಿ ತೋರಿಸಿದೆ. ಕೆಆರ್ ಐಡಿಎಲ್ ಸಿಬ್ಬಂದಿ ಜೊತೆ ಸಾಕಷ್ಟು ಸಭೆ ನಡೆಸಿದೆ. ಆದರೂ ಕಾಮಗಾರಿ ಆರಂಭಗೊಂಡಿಲ್ಲ. ಇದರಿಂದ ನನ್ನ ಕ್ಷೇತ್ರಕ್ಕೆಅನ್ಯಾಯವಾಗುತ್ತಿದೆ. ಕೆಲವು ರಾಜಕಾರಣಿಗಳು ಅಡ್ಡಿಯಾಗಿದ್ದು ಖಂಡನೀಯ ಎಂದರು.

    ವಿದ್ಯುತ್ ನವೀಕರಣ: ಎರಡು ವರ್ಷದ ಹಿಂದೆಯೇ ವಿದ್ಯುತ್ ನವೀಕರಣಕ್ಕೆ ಟೆಂಡರ್ ಆದರೂ ಈವರೆಗೂ ನವೀಕರಣ ಆಗಿಲ್ಲ. ಇದರ ಹಿಂದೆ ಕಾಣದ ಕೈಗಳ ಕೈವಾಡ ಇದೆ ಎಂದು ಆರೋಪಿಸಿದರು.

    ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ವಿಜಯಪುರ ಮಹಾನಗರ ಪಾಲಿಕೆಗೆ ಹೆಚ್ಚುವರಿಯಾಗಿ 125 ಕೋಟಿ ರೂ.ಅನುದಾನ ತಂದಿದ್ದೆ.‌ ನಂತರ ಬಂದ ಸರ್ಕಾರ ಅದನ್ನೂ ವಾಪಸ್ ಪಡೆಯಿತು. ನಗರ ಶಾಸಕರ ತಗಾದೆ ತೆಗೆದ ಕಾರಣ ಅದನ್ನು ಮರಳಿ ನಗರಕ್ಕೆ ನೀಡಲಾಯಿತು. ಇದರಲ್ಲಿ ನಾಗಠಾಣ ಕ್ಷೇತ್ರಕ್ಕೆ ಸುಮಾರು 10 ಕೋಟಿ ರೂ. ಸಿಕ್ಕಿತು. ಅದಾದ ಬಳಿಕ ಯಾವುದೇ ಅನುದಾನ ಸಿಕ್ಕಿಲ್ಲ ಎಂದರು.
    ಜೆಡಿಎಸ್ ಮುಖಂಡ ಗುಲಾಬ್ ಚವಾಣ್ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts