More

    ಡಬ್ಗುಳಿ ರಸ್ತೆ ಬದಿ ಮಣ್ಣು ಕುಸಿತ

    ಯಲ್ಲಾಪುರ: ತಾಲೂಕಿನಲ್ಲಿ ಗುರುವಾರ ಬೆಳಗ್ಗೆಯಿಂದ ನಿರಂತರವಾಗಿ ಮಳೆ ಸುರಿದಿದೆ. ಮಳೆಯ ಪರಿಣಾಮ ತಾಲೂಕಿನ ಇಡಗುಂದಿ ಗ್ರಾ.ಪಂ. ವ್ಯಾಪ್ತಿಯ ಡಬ್ಗುಳಿಯಲ್ಲಿ ರಸ್ತೆಯ ಎರಡೂ ಬದಿಯಲ್ಲಿ ಮಣ್ಣು ಕುಸಿಯುತ್ತಿದ್ದು, ರಸ್ತೆಯೆ ಕುಸಿಯುವ ಆತಂಕ ಉಂಟಾಗಿದೆ.

    ರಸ್ತೆಯ ಒಂದು ಬದಿಯಲ್ಲಿರುವ ಗುಡ್ಡದ ಮಣ್ಣು ರಸ್ತೆಯ ಮೇಲೆ ಬೀಳುತ್ತಿದ್ದು, ಸಂಚಾರಕ್ಕೆ ತೊಂದರೆ ಉಂಟಾಗಿದೆ. ಇನ್ನೊಂದು ಬದಿಯಲ್ಲಿ ರಸ್ತೆಯ ಕೆಳಭಾಗದ ಮಣ್ಣು ಕುಸಿದು ಪ್ರಪಾತ ಸೇರುತ್ತಿದ್ದು, ರಸ್ತೆಯೇ ಕುಸಿದು ಬೀಳುವ ಭೀತಿ ಗ್ರಾಮಸ್ಥರನ್ನು ಕಾಡುತ್ತಿದೆ. ರಸ್ತೆಯ ಪಕ್ಕದ ಕೆಳಭಾಗದಲ್ಲಿ ಗ್ರಾಮಸ್ಥರ ಅಡಕೆ ತೋಟವಿದ್ದು, ಅದಕ್ಕೆ ತಾಗಿ ಹಳ್ಳ ಹರಿಯುತ್ತಿದೆ. ರಸ್ತೆಯ ಕೆಳಭಾಗದ ಮಣ್ಣು ಕುಸಿದು ತೋಟದ ಪಕ್ಕದಲ್ಲಿರುವ ಹಳ್ಳ ಸೇರುತ್ತಿದೆ. ಹೆಚ್ಚಿನ ಪ್ರಮಾಣದಲ್ಲಿ ಮಣ್ಣು ಕುಸಿದರೆ ಹಳ್ಳದಲ್ಲಿ ಮಣ್ಣು ತುಂಬಿ, ನೀರು ತೋಟದತ್ತ ಹರಿಯುವ ಅಪಾಯವೂ ಇದೆ.

    ಗ್ರಾಮಸ್ಥರಾದ ವೆಂಕಟ್ರಮಣ ಭಟ್ಟ, ರಾಮಕೃಷ್ಣ ಹೆಗಡೆ, ನರಸಿಂಹ ಭಟ್ಟ, ಪರಮೇಶ್ವರ ಭಟ್ಟ, ವಿನಾಯಕ ಭಟ್ಟ, ಕೃಷ್ಣಮೂರ್ತಿ ಭಟ್ಟ ಕುಸಿದ ಮಣ್ಣನ್ನು ತೆರವುಗೊಳಿಸಿ ತಾತ್ಕಾಲಿಕ ಓಡಾಟಕ್ಕೆ ಅಗತ್ಯವಾದ ಕ್ರಮ ಕೈಗೊಂಡಿದ್ದಾರೆ. ನಂತರ ಗ್ರಾಮಸ್ಥರ ಆಗ್ರಹದ ಮೇರೆಗೆ ಜೆಸಿಬಿ ಮೂಲಕ ಮಣ್ಣು ತೆರವುಗೊಳಿಸಲು ಗ್ರಾ.ಪಂ. ಕ್ರಮ ಕೈಗೊಂಡಿದೆ.

    ಡಬ್ಗುಳಿಗೆ ಹೋಗುವ ರಸ್ತೆ ಬಂದ್ ಆಗಿರುವುದರಿಂದ ನಿತ್ಯವೂ ಅರಬೈಲ್​ಗೆ ಆನ್​ಲೈನ್ ತರಗತಿಗೆಂದು ಹೋಗುತ್ತಿದ್ದ ಈ ಭಾಗದ ವಿದ್ಯಾರ್ಥಿಗಳಿಗೆ ಓಡಾಡಲು ತೊಂದರೆ ಉಂಟಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts