More

    ಡಬಲ್ ಇಂಜಿನ್‍ನಿಂದ ಸರ್ವಸ್ಪರ್ಶಿ ಆಡಳಿತ

    ಸಾಗರ: ಡಬಲ್ ಇಂಜಿನ್ ಸರ್ಕಾರವು ಕೇಂದ್ರ ಮತ್ತು ರಾಜ್ಯದಲ್ಲಿ ಅತ್ಯಂತ ವ್ಯವಸ್ಥಿತವಾಗಿ ಸರ್ಕಾರದ ಯೋಜನೆಗಳನ್ನು -Àಲಾನುಭವಿಗಳಿಗೆ ತಲುಪಿಸಿದೆ ಎಂದು ಶಾಸಕ ಹರತಾಳು ಹಾಲಪ್ಪ ಹೇಳಿದರು.
    ಸಾಗರ ಹೋಟೆಲ್ ವೃತ್ತದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಾಧನೆಯನ್ನು ಪ್ರಚುರಪಡಿಸುವ ಪ್ರಗತಿ ರಥಯಾತ್ರೆಗೆ ಶುಕ್ರವಾರ ಚಾಲನೆ ನೀಡಿ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ವಿಶ್ವದಲ್ಲಿಯೇ ಭಾರತ ಬಲಾಢ್ಯ ಆರ್ಥಿಕ ದೇಶವಾಗಿ ಹೊರಹೊಮ್ಮಿದೆ. ದೇಶ ಸರ್ವಾಂಗೀಣ ಪ್ರಗತಿಯನ್ನು ಸಾ„ಸಿದೆ. ಭಾರತ ಪ್ರಪಂಚದ ಮೂರನೇ ಆರ್ಥಿಕ ಮುಂದುವರಿದ ದೇಶವಾಗುವ ಸಾಲಿನಲ್ಲಿದೆ. ಪ್ರಗತಿಯನ್ನು ಜನರ ಮನೆಮನೆಗೆ ತಲುಪಿಸುವ ಕೆಲಸ ಮಾಡಬೇಕು. ಪ್ರತಿಯೊಬ್ಬರೂ ಅಭಿವೃದ್ಧಿಯ ಪಾಲು ಪಡೆಯಬೇಕು ಎಂದರು.
    ಅಭಿವೃದ್ದಿಯಲ್ಲಿ ಸಾಗರ ಸಹ ಮುಂಚೂಣಿ ಕಾಯ್ದುಕೊಂಡಿದೆ. ನಗರವನ್ನು ಸಂಪರ್ಕಿಸುವ ಎಲ್ಲ ರಸ್ತೆಗಳು ಚತುಷ್ಪಥ ರಸ್ತೆಯಾಗಿ ರೂಪುಗೊಳ್ಳುತ್ತಿದೆ. 450 ಕೋಟಿ ರೂ. ವೆಚ್ಚದಲ್ಲಿ ತುಮರಿ ಸೇತುವೆ ನಿರ್ಮಾಣ ಕಾರ್ಯ ಭರದಿಂದ ಸಾಗುತ್ತಿದೆ. 35 ಕೋಟಿ ರೂ. ವೆಚ್ಚದಲ್ಲಿ ನಗರೋತ್ಥಾನ ಯೋಜನೆಯಡಿ ನಗರವ್ಯಾಪ್ತಿಯಲ್ಲಿ ರಸ್ತೆ ಅಭಿವೃದ್ಧಿಗೊಳ್ಳುತ್ತಿದೆ. ಅಭಿವೃದ್ಧಿಯ ಭಾಗವಾಗಿ ಶಿವಮೊಗ್ಗದಲ್ಲಿ ವಿಮಾನ ನಿಲ್ದಾಣ ಪ್ರಾರಂಭವಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರ ಎಲ್ಲ ಕ್ಷೇತ್ರಗಳನ್ನೂ ಗಮನದಲ್ಲಿ ಇರಿಸಿಕೊಂಡು ಅಭಿವೃದ್ಧಿ ಪಡಿಸುತ್ತಿದೆ. ಕೇಂದ್ರ ಸರ್ಕಾರದ ಜಲಜೀವನ ಮಿಷನ್ ಮನೆಮನೆಗೆ ಗಂಗೆ ಯೋಜನೆ ಅತ್ಯಂತ ಸಮರ್ಥವಾಗಿ ಸಾಗರ ವಿಧಾನಸಭಾ ಕ್ಷೇತ್ರದಲ್ಲಿ ಅನುಷ್ಠಾನಗೊಂಡಿದ್ದು ಕುಡಿಯುವ ನೀರು ಮತ್ತು ಮೂಲ ಸೌಕರ್ಯಗಳಿಗೆ ಪ್ರಮುಖ ಆದ್ಯತೆ ನೀಡಲಾಗಿದೆ ಎಂದರು.
    ಬಿಜೆಪಿ ನಗರ ಘಟಕ ಅಧ್ಯಕ್ಷ ಕೆ.ಆರ್.ಗಣೇಶಪ್ರಸಾದ್, ನಗರಸಭೆ ಅಧ್ಯಕ್ಷೆ ಮಧುರಾ ಶಿವಾನಂದ್, ಉಪಾಧ್ಯಕ್ಷ ವಿ.ಮಹೇಶ್, ಸ್ಥಾಯಿ ಸಮಿತಿ ಅಧ್ಯಕ್ಷ ಅರವಿಂದ ರಾಯ್ಕರ್, ಪ್ರಮುಖರಾದ ಶ್ರೀನಿವಾಸ್ ಮೇಸಿ, ಭಾವನಾ ಸಂತೋಷ್, ಮೈತ್ರಿ ಪಟೇಲ್, ಸವಿತಾ ವಾಸು, ನಾಗರಾಜ್ ಪೈ, ಅರುಣ್ ಕುಗ್ವೆ, ಎಂ.ಆರ್.ಮಹೇಶ್, ರಾಜಣ್ಣ, ಜಾಹ್ನವಿ, ಸಂತೋಷ್ ಶೇಟ್, ಕೆ.ಸತೀಶ್, ಸರೋಜಮ್ಮ, ವಿನೋದ್ ರಾಜ್, ಆನಂದ್ ಜನ್ನೆಹಕ್ಲು, ಸುಧಾ ಉದಯ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts