More

    ಠಾಣೆಯಲ್ಲಿ ಶಾಸ್ತ್ರೋಕ್ತ ಮದುವೆ!

    ಡಂಬಳ: ಪ್ರೇಮಿಗಳಿಬ್ಬರು ಗ್ರಾಮದ ಪೊಲೀಸರ ಸಮ್ಮುಖದಲ್ಲಿ ಮಂಗಳವಾರ ದಾಂಪತ್ಯಕ್ಕೆ ಕಾಲಿಟ್ಟರು. ಜಂತ್ಲಿ ಶಿರೂರ ಗ್ರಾಮದ ಹಿಂದು ಮರಾಠಿ ಸಮುದಾಯದ ಹನುಮಂತಪ್ಪ ಬಾಪುಗೋಳಿ ಮತ್ತು ಪೇಠಾಲೂರಿನ ಹಿಂದು ಹೂಗಾರ ಸಮುದಾಯದ ಪ್ರತಿಭಾ ದಾಟನಾಳ ಎರಡು ವರ್ಷಗಳಿಂದ ಪ್ರೀತಿಸುತ್ತಿದ್ದರು. ಆದರೆ, ಎರಡು ಕುಟುಂಬದವರು ಮದುವೆಗೆ ಒಪ್ಪದ ಕಾರಣ ಇಬ್ಬರೂ ಪ್ರೇಮಿಗಳು ಸೋಮವಾರ ಮುಂಡರಗಿಯ ನೋಂದಣಾಧಿಕಾರಿ ಕಚೇರಿಯಲ್ಲಿ ರಿಜಿಸ್ಟರ್ ಮ್ಯಾರೇಜ್ ಮಾಡಿಕೊಂಡರು.

    ನಂತರ ಡಂಬಳ ಹೊರ ಠಾಣೆಯ ಎಎಸ್​ಐ ಮಾರುತಿ ಜೋಗದಂಡಕರ ಅವರು ಹಿರಿಯ ಅಧಿಕಾರಿಗಳ ಸಲಹೆ ಮೇರೆಗೆ ಠಾಣೆಯಲ್ಲಿ ಎರಡು ಗ್ರಾಮದ ಹಿರಿಯರು ಮತ್ತು ತಂದೆ-ತಾಯಿ ಹಾಗೂ ಬಂಧುಗಳ ಸಮ್ಮುಖದಲ್ಲಿ ಮಂಗಳವಾರ ಶಾಸ್ತ್ರೋಕ್ತವಾಗಿ ಮದುವೆ ಮಾಡಿಸಿದರು. ಎಎಎಸ್​ಐ ಮಾರುತಿ ಜೋಗದಂಡಕರ ಮಾತನಾಡಿ, ಪೊಲೀಸ್ ಇಲಾಖೆಯು ಸದಾಕಾಲ ನ್ಯಾಯ ಪಾಲನೆ ಮತ್ತು ಜನರ ಒಳಿತನ್ನು ಬಯಸುತ್ತದೆ ಎಂದರು.

    ಪೋಲಿಸ್ ಸಿಬ್ಬಂದಿ ಆನಂದ ಎಂ. ಹೊನ್ನೆನಾಯಕರ, ಎರಡು ಗ್ರಾಮದ ಹಿರಿಯರಾದ ಶಿವಪ್ಪ ಕಬ್ಬೇರಳ್ಳಿ, ಹಾಲಪ್ಪ ಕಬ್ಬೆರಳ್ಳಿ, ಹಾಲಪ್ಪ ಗುಬ್ಬೆಕೊಪ್ಪ, ಸಮಾಜ ಸೇವಕ ವಿಶ್ವನಾಥ ಪಾಟೀಲ, ಲಕ್ಷ್ಮಪ್ಪಯ್ಯ ದೇಸಾಯಿ, ಅಂದಪ್ಪ ಕಲಕೇರಿ, ಬಸವರಾಜ ಕೋಳೆಕರ, ಬಸಪ್ಪ ದಾಟನಾಳ, ಪೇಠಾ ಅಲೂರ, ಜಂತ್ಲಿ ಶಿರೂರ ಗ್ರಾಮದ ಹಿರಿಯರು ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts