More

    ಟೆಸ್ಟ್​ಗೆ ಹೋದ ಗರ್ಭಿಣಿಯರ ಪರದಾಟ

    ಧಾರವಾಡ: ಕೋವಿಡ್ ಟೆಸ್ಟ್ ಮಾಡಿಸಿಕೊಳ್ಳಲು ನಗರದ ಜಿಲ್ಲಾ ಆಸ್ಪತ್ರೆಗೆ ತೆರಳಿದ್ದ ಗರ್ಭಿಣಿಯರು ಮೂಲ ಸೌಕರ್ಯವಿಲ್ಲದೆ ಪರದಾಡಿದ ಘಟನೆ ಬುಧವಾರ ನಡೆಯಿತು.

    ಸೀಲ್​ಡೌನ್, ಕಂಟೇನ್ಮೆಂಟ್ ಪ್ರದೇಶ ಹಾಗೂ ಶಂಕಿತ ಹೊರರಾಜ್ಯಗಳಿಂದ ಬಂದವರಲ್ಲಿ ಗರ್ಭಿಣಿಯರಿದ್ದರೆ ಕೋವಿಡ್ ಪರೀಕ್ಷೆ ಕಡ್ಡಾಯ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಆಶಾ ಕಾರ್ಯಕರ್ತೆಯರು ಗರ್ಭಿಣಿಯರನ್ನು ಕರೆತಂದಿದ್ದರು. ಜಿಲ್ಲಾ ಆಸ್ಪತ್ರೆಯ ಸ್ವಾ್ಯಬ್ ಕಲೆಕ್ಷನ್ ಸೆಂಟರ್​ಗೆ ತೆರಳಿದ್ದ ಗರ್ಭಿಣಿಯರಿಗೆ ಕೂರಲು ಆಸನ ವ್ಯವಸ್ಥೆ ಇರಲಿಲ್ಲ. ಕೆಲವರು ಅಲ್ಲಲ್ಲಿ ಮರಗಳ ಅಡಿ ಕುಳಿತು ವಿಶ್ರಾಂತಿ ಪಡೆದರು. ಮತ್ತೆ ಕೆಲವರು ಪಕ್ಕದ ಕಟ್ಟಡದ ಮೆಟ್ಟಿಲುಗಳ ಮೇಲೆ ಕುಳಿತುಕೊಳ್ಳಬೇಕಾಯಿತು. ಗಂಟೆಗಟ್ಟಲೇ ಕಾದು ಕುಳಿತವರು ಕೇಂದ್ರದ ಸುತ್ತ ಜಮಾಯಿಸಿದ್ದರಿಂದ ಪರಸ್ಪರ ಅಂತರವನ್ನೂ ಕಾಪಾಡಲು ಸಾಧ್ಯವಾಗಲಿಲ್ಲ.

    ಇಲ್ಲಿನ ಅವ್ಯವಸ್ಥೆ ಬಗ್ಗೆ ತುಂಬು ಗರ್ಭಿಣಿಯರು ಅಸಮಾಧಾನ ಹೊರಹಾಕಿದರು. ಅಂತರ ಕಾಪಾಡಿ ಕುಳಿತುಕೊಳ್ಳಲು ಸರಿಯಾದ ವ್ಯವಸ್ಥೆ ಮಾಡುವಂತೆ ಆಗ್ರಹಿಸಿದರು. ಅಧಿಕಾರಿಗಳು ವ್ಯವಸ್ಥೆ ಸರಿಪಡಿಸುವುದಾಗಿ ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts