More

    ಟೆಂಟ್‌ನಲ್ಲಿಯೇ ಶಾಲಾ ಪ್ರಾರಂಭೋತ್ಸವ!

    ರಾಮದುರ್ಗ: ರಾಜ್ಯಾದ್ಯಂತ ಶಾಲೆಗಳನ್ನು ತಳಿರು-ತೋರಣ, ಹೂಗಳಿಂದ ಸಿಂಗರಿಸಿ ಪ್ರಾರಂಭೋತ್ಸವ ಆಚರಿಸಲಾಗುತ್ತಿದೆ. ಆದರೆ, ಶಾಲಾ ಆವರಣದಲ್ಲಿ ಡೊಡ್ಡ
    ಪ್ರಮಾಣದ ಟೆಂಟ್ ಹಾಕಿ, ಮಕ್ಕಳನ್ನು ಬಯಲಿನಲ್ಲಿ ಕೂಡ್ರಿಸಿ ಶಾಲಾ ಆರಂಭೋತ್ಸವ ಮಾಡಿರುವ ಘಟನೆ ರಾಮದುರ್ಗ ತಾಲೂಕಿನ ಮೂದೇನೂರ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ನಡೆದಿದೆ.

    ಈ ಶಾಲೆಯಲ್ಲಿ ಶಾಲಾ ಆರಂಭೋತ್ಸವವನ್ನು ವಿಶೇಷ ವಾಗಿ ಆಚರಣೆ ಮಾಡಿಲ್ಲ. ಶಿಥಿಲಾವಸ್ಥೆಯಲ್ಲಿರುವ ಶಾಲಾ ಕಟ್ಟಡದಲ್ಲಿ ಕೊಠಡಿಗಳು ಕುಳಿತು ಕೊಳ್ಳುವುದಕ್ಕೆ ಯೋಗ್ಯವಾಗಿಲ್ಲ. ಗ್ರಾಮಸ್ಥರು ಹಾಗೂ ಎಸ್‌ಡಿಎಂಸಿ ಸದಸ್ಯರು ಶಾಲಾ ಆವರಣದಲ್ಲಿ ಟೆಂಟ್ ಹಾಕಿ, ಮಕ್ಕಳನ್ನು ಬಯಲಿನಲ್ಲಿ ಕೂಡ್ರಿಸಿ ಆರಂಭೋತ್ಸವ ಮಾಡಿದ್ದಾರೆ. ಶಾಲಾ ಆವರಣದಲ್ಲಿ ಹಾಕಿರುವ ಟೆಂಟ್ ನೋಡಿದರೆ ಯಾವುದೋ ವಸ್ತು ಪ್ರದರ್ಶನಕ್ಕೆ ಮಳಿಗೆ ಹಾಕಿದಂತೆ ಗೋಚರಿಸುತ್ತಿತ್ತು. ಇನ್ನೊಂದು ಸಂಗತಿ ಎಂದರೆ ಶಾಲಾ ಆರಂಭೋತ್ಸವ ಕಾರ್ಯಕ್ರಮದಲ್ಲಿ ಮಕ್ಕಳು ಕುಳಿತುಕೊಳ್ಳುವುದಕ್ಕೆ ಕೊಠಡಿ ವ್ಯವಸ್ಥೆ ಮಾಡಿಕೊಡಿ, ಇತರೆ ಸೌಲಭ್ಯ ಕಲ್ಪಿಸಿ ಎಂದು ಭಾಷಣ ಮಾಡುವ ಮೂಲಕ ಜನಪ್ರತಿನಿಧಿಗಳಿಗೆ ಅಧಿಕಾರಿಗಳಿಗೆ ಜನರು ಛಾಟಿ ಬೀಸಿದರು.

    ಶಾಲೆಗಿದೆ 100 ವರ್ಷ ಇತಿಹಾಸ: ಶತಮಾನ ಕಂಡ ಶಿಥಿಲಾವಸ್ಥೆಯಲ್ಲಿರುವ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಗ್ರಾಮಸ್ಥರು ದೊಡ್ಡ ಪ್ರಮಾಣ ಟೆಂಟ್ ಹಾಕಿ ಶಾಲಾ ಪ್ರಾರಂಭೋತ್ಸವ ಮಾಡಿದರು. ಕೊಠಡಿಗಳಿಲ್ಲದ್ದರಿಂದ ಟೆಂಟ್‌ನಲ್ಲೇ ಮಕ್ಕಳು ಕುಳಿತುಕೊಂಡಿದ್ದರು. 100 ವರ್ಷಗಳ ಇತಿಹಾಸ ಹೊಂದಿರುವ ಈ ಶಾಲೆಯಲ್ಲಿ ಸಾವಿರಾರು ವಿದ್ಯಾರ್ಥಿಗಳು ಕಲಿತು ಹೋಗಿದ್ದಾರೆ. 11 ಕೊಠಡಿಗಳ ಪೈಕಿ 2 ಕೊಠಡಿಗಳು ತಕ್ಕ ಮಟ್ಟಿಗೆ ಚೆನ್ನಾಗಿವೆ. 315 ಮಕ್ಕಳು ಸದ್ಯ ಇಲ್ಲಿ ವಿದ್ಯಾರ್ಜನೆ ಮಾಡುತ್ತಿದ್ದಾರೆ. ಕಟ್ಟಡ ಕುಸಿಯುವ ಹಂತದಲ್ಲಿದ್ದರೂ ಸಂಬಂಧಿಸಿದ ಜನಪ್ರತಿನಿಧಿಗಳಾಗಲಿ, ಅಧಿಕಾರಿಗಳಾಗಲಿ ತಿರುಗಿ ನೋಡಿಲ್ಲ. ಗ್ರಾಮದ ಈ ಸರ್ಕಾರಿ ಶಾಲೆ ದುಸ್ಥಿತಿ ಬಗ್ಗೆ ಹಲವು ಬಾರಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಶಿಥಿಲಾವಸ್ಥೆಯಲ್ಲಿರುವ ಶಾಲೆಯಲ್ಲಿ ಪ್ರಸಕ್ತ ವರ್ಷ, ಶಾಲಾ ಆವರಣದಲ್ಲೇ ಪಾಠ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts