More

    ಟಿ.ವಿ., ಮೊಬೈಲ್​ಫೋನ್​ನಿಂದ ದೂರವಿರಿ

    ಶಿರಸಿ: ಎಸ್ಸೆಸ್ಸೆಲ್ಸಿ ಪರೀಕ್ಷೆಯನ್ನು ವಿದ್ಯಾರ್ಥಿಗಳಿಗೆ ಭಯ ಮುಕ್ತಗೊಳಿಸಲು ಸ್ವತಃ ಶಿಕ್ಷಣ ಸಚಿವರು ವಿಧಾನಸಭಾಧ್ಯಕ್ಷರ ಸಮಕ್ಷಮ ಪಾಠ ಮಾಡಿ ಗಮನ ಸೆಳೆದರು. ಶನಿವಾರ ಶಿರಸಿಯ ಮಾರಿಕಾಂಬಾ ಸರ್ಕಾರಿ ಪ್ರೌಢಶಾಲೆಗೆ ಆಗಮಿಸಿದ್ದ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಸುರೇಶಕುಮಾರ ಅವರು ವಿದ್ಯಾರ್ಥಿಗಳಿಗೆ ಪಾಠ ಮಾಡಿದರು. ಈ ವೇಳೆ ಪರೀಕ್ಷಾ ಭಯವನ್ನು ಮೀರುವ ಉಪಾಯಗಳನ್ನು ವಿದ್ಯಾರ್ಥಿಗಳಿಗೆ ನೀಡಿದರು. ಪರೀಕ್ಷೆಗೆ ಇನ್ನಿರುವ ದಿನಗಳನ್ನು ತಪಸ್ಸಿನಂತೆ ಕಳೆಯಬೇಕು. ಎಲ್ಲ ವಿಷಯಗಳನ್ನು ತಲೆಗೆ ಹಾಕಿಕೊಂಡು ಗೊಂದಲ ಸೃಷ್ಟಿಸಿಕೊಳ್ಳುವ ಬದಲು ವಿಷಯಾಧಾರಿತವಾಗಿ ಯೋಚಿಸಬೇಕು. ಪರೀಕ್ಷೆ ಮುಕ್ತಾಯದವರೆಗೆ ಟಿ.ವಿ., ಮೊಬೈಲ್ ಬಳಕೆಯಿಂದ ದೂರವಿದ್ದರೆ ಜ್ಞಾಪಕ ಶಕ್ತಿ ವೃದ್ಧಿಸುತ್ತದೆ. ಇವುಗಳ ಜತೆಗೆ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದರು. ಈ ವೇಳೆ ಹಿರಿಯ ಪತ್ರಕರ್ತ ರವೀಂದ್ರ ಭಟ್ಟ ಇದ್ದರು.

    ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಪಡೆಯುವುದಷ್ಟೆ ಉದ್ದೇಶವಲ್ಲ. ಬದಲಾಗಿ ಗುಣಮಟ್ಟದ ಶಿಕ್ಷಣ ವಿದ್ಯಾರ್ಥಿಗಳಿಗೆ ಸಿಗಬೇಕು. ಈ ನಿಟ್ಟಿನಲ್ಲಿ ಸಾಕಷ್ಟು ಹೊಸ ಹೊಸ ಪ್ರಯೋಗಗಳನ್ನು ಶಾಲಾ ಹಂತದಲ್ಲಿ ಅನುಷ್ಠಾನ ಮಾಡಲಾಗಿದೆ. ಈ ಪ್ರಯೋಗದಿಂದ ಕೇವಲ ವಿದ್ಯಾರ್ಥಿಗಳಿಗಷ್ಟೆ ಅಲ್ಲದೆ ಶಾಲಾ ಶಿಕ್ಷಕರಿಗೂ ಅನುಕೂಲ ಆಗುತ್ತಿದೆ.

    | ಸುರೇಶಕುಮಾರ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts