More

    ಟಿಪ್ಪರ್ ಡಿಕ್ಕಿಯಾಗಿ ಬೈಕ್ ಸವಾರ ಸಾವು

    ಶ್ರೀರಂಗಪಟ್ಟಣ: ಬೈಕ್ ಹಾಗೂ ಟಿಪ್ಪರ್ ಲಾರಿ ಮುಖಾಮುಖಿ ಡಿಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದು, ಅಪಘಾತಕ್ಕೆ ಆಕ್ರೋಶ ವ್ಯಕ್ತಪಡಿಸಿ ಗ್ರಾಮಸ್ಥರು ರಸ್ತೆ ಸಂಚಾರ ತಡೆದು ಪ್ರತಿಭಟನೆ ನಡೆಸಿದ್ದಾರೆ.
    ತಾಲೂಕಿನ ಶ್ರೀರಂಗಪಟ್ಟಣ – ಪಂಪ್‌ಹೌಸ್ ರಸ್ತೆಯಲ್ಲಿ ಶುಕ್ರವಾರ ತಡರಾತ್ರಿ ಈ ಅಪಘಾತ ಉಂಟಾಗಿದ್ದು, ಪಾಲಹಳ್ಳಿ ಗ್ರಾಮದ ಗ್ರಾಮಸ್ಥ ಕಾಂತರಾಜು (37) ಮೃತಪಟ್ಟ ಬೈಕ್ ಸವಾರ.
    ಮರಗೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಕಾಂತರಾಜು ಶುಕ್ರವಾರ ತಡರಾತ್ರಿ ಕೆಲಸ ಮುಗಿಸಿ ಹೊಸಹಳ್ಳಿ ಕಡೆಯಿಂದ ಸ್ವಗ್ರಾಮ ಪಾಲಹಳ್ಳಿಗೆ ಬೈಕಿನಲ್ಲಿ ಆಗಮಿಸುತ್ತಿದ್ದ ವೇಳೆ ಪಾಲಹಳ್ಳಿ ಗ್ರಾಮದ ಹೊರವಲಯದ ಏಚೀ ತೋಪು ಬಳಿ ಶ್ರೀರಂಗಪಟ್ಟಣ ಕಡೆಯಿಂದ ಗಣಿ ಸಾಮಾಗ್ರಿ ತುಂಬಿಕೊಂಡು ಮೈಸೂರು ಕಡೆಗೆ ವೇಗವಾಗಿ ತೆರಳುತ್ತಿದ್ದ ಟಿಪ್ಪರ್ ಡಿಕ್ಕಿ ಹೊಡೆದಿದೆ. ಪರಿಣಾಮ ಕೆಳಗೆ ಬಿದ್ದ ಸವಾರನನ್ನು ಬೈಕ್ ಸಮೇತ 100 ಮೀಟರ್ ವರೆಗೆ ಎಳೆದೊಯ್ದಿದೆ. ಘಟನೆ ಬಳಿಕ ಲಾರಿ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ.

    ಟಿಪ್ಪರ್ ಡಿಕ್ಕಿಯಾಗಿ ಬೈಕ್ ಸವಾರ ಸಾವು
    ಮೃತ ಕಾಂತಾರಜು

    ಅಪಘಾತದ ವಿಷಯ ತಿಳಿಯುತ್ತಿದ್ದ ತಡರಾತ್ರಿಯೇ ಘಟನಾ ಸ್ಥಳದಲ್ಲಿ ಜಮಾವಣೆಗೊಂಡ ಪಾಲಹಳ್ಳಿ ಗ್ರಾಮಸ್ಥರು ಶ್ರೀರಂಗಪಟ್ಟಣ-ಮೈಸೂರು-ಕೆ.ಆರ್.ಎಸ್ ರಸ್ತೆ ಸಂಚಾರ ತಡೆದು ಪ್ರತಿಭಟಿಸಿದರು. ಕೂಡಲೇ ಟಿಪ್ಪರ್ ಲಾರಿಗಳ ಸಂಚಾರಕ್ಕೆ ನಿಷೇಧ ಹೇರುವಂತೆ ಒತ್ತಾಯಿಸಿದರು. ಬಳಿಕ ಸ್ಥಳಕ್ಕೆ ಶ್ರೀರಂಗಪಟ್ಟಣ ಟೌನ್ ಠಾಣೆಯ ಪೊಲೀಸರು ಆಗಮಿಸಿ ಪ್ರತಿಭಟನಕಾರರ ಮನವಿ ಆಲಿಸಿ ಓಲೈಸಿದ್ದು, ಈ ಬಗ್ಗೆ ಕ್ರಮ ವಹಿಸುವ ಭರವಸೆ ನೀಡಿದ ಹಿನ್ನೆಲೆಯಲ್ಲಿ ಪ್ರತಿಭಟನೆ ಹಿಂಪಡೆದು ಮೃತದೇಹವನ್ನು ತಾಲೂಕು ಸಾರ್ವಜನಿಕ ಆಸ್ಪತ್ರೆಗೆ ರವಾನಿಸಲಾಯಿತು. ಈ ಸಂಬಂಧ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts