More

    ಟಿಎಂಎಸ್​ನಲ್ಲಿ ಅಡಕೆ ವ್ಯಾಪಾರ 21ರಿಂದ

    ಸಿದ್ದಾಪುರ:ಲಾಕ್​ಡೌನ್​ನಿಂದ ಸ್ಥಗಿತಗೊಂಡಿದ್ದ ಅಡಕೆ ವ್ಯಾಪಾರವನ್ನು ಏ.21ರಿಂದ ತಾಲೂಕು ವ್ಯವಸಾಯ ಹುಟ್ಟುವಳಿ ಸಹಕಾರಿ ಮಾರಾಟ ಸಂಘದಲ್ಲಿ (ಟಿಎಂಎಸ್) ಪ್ರಾರಂಭಿಸಲಾಗುವುದು ಎಂದು ಸಂಘದ ಅಧ್ಯಕ್ಷ ಆರ್.ಎಂ. ಹೆಗಡೆ ಬಾಳೇಸರ ತಿಳಿಸಿದ್ದಾರೆ.

    ಪಟ್ಟಣದ ಟಿಎಂಎಸ್​ನಲ್ಲಿ ತಾಲೂಕು ಅಡಕೆ ವರ್ತಕರ ಹಾಗೂ ಎಪಿಎಂಸಿ ಅಧ್ಯಕ್ಷರೊಂದಿಗೆ ಶುಕ್ರವಾರ ಸಭೆ ನಡೆಸಿ ಅಡಕೆ ವ್ಯಾಪಾರ ಮಾಡುವುದಕ್ಕೆ ತೀರ್ವನಿಸಲಾಗಿದೆ.

    ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸೂಚನೆಯಂತೆ ಸಾಮಾಜಿಕ ಅಂತರದೊಂದಿಗೆ ಅಡಕೆ ವ್ಯಾಪಾರ ಮಾಡುವುದಕ್ಕೆ, ನಿತ್ಯ 30 ಸದಸ್ಯರ ಮಹಸೂಲ ಅನ್ನು ಟೆಂಡರ್ ಮೂಲಕ ಖರೀದಿಸಲಾಗುವುದು. ಮಾರಾಟ ಮಾಡಲು ಬಯಸುವ ಸದಸ್ಯರು ಸಿದ್ದಾಪುರ ಟಿಎಂಎಸ್​ಗೆ (9481952918) ಕರೆ ಮಾಡಿ ತಮ್ಮ ಹೆಸರನ್ನು ನೋಂದಾಯಿಸಿ ಅನುಮತಿ ಪಡೆದು ಅಡಕೆ ತಂದು ವಿಕ್ರಿ ಮಾಡಬಹುದು ಅಥವಾ ದಾಸ್ತಾನು ಮಾಡಬಹುದಾಗಿದೆ. ಇದು ಕಾನಸೂರು ಶಾಖೆಗೂ ಅನ್ವಯವಾಗಲಿದೆ ಎಂದು ಆರ್.ಎಂ. ಹೆಗಡೆ ತಿಳಿಸಿದ್ದಾರೆ.

    ಸಭೆಯಲ್ಲಿ ಎಪಿಎಂಸಿ ಅಧ್ಯಕ್ಷ ಕೆ.ಜಿ. ನಾಗರಾಜ, ತಾಲೂಕು ಅಡಕೆ ವರ್ತಕರ ಸಂಘದ ಅಧ್ಯಕ್ಷ ಪ್ರಕಾಶ ಎಂ. ಹೆಗಡೆ, ಕಾರ್ಯದರ್ಶಿ ಜಿ.ಎಸ್. ಭಟ್ಟ ಕಲ್ಲಾಳ, ವರ್ತಕರ ಸಂಘದ ಸದಸ್ಯರು, ಅರೆಕಾನಟ್ ಚೇಂಬರ್ಸ್ ಆಫ್ ಕಾಮರ್ಸ್ ಅಧ್ಯಕ್ಷ ಆರ್. ಎಸ್. ಹೆಗಡೆ ಹರಗಿ, ಸಂಘದ ವ್ಯವಸ್ಥಾಪಕ ಸತೀಶ ಎಸ್. ಹೆಗಡೆ ಹೆಗ್ಗಾರಕೈ, ಎಪಿಎಂಸಿ ಕಾರ್ಯದರ್ಶಿ ಎಂ .ಜಿ. ನಾಯ್ಕ ಇದ್ದರು.

    ಪರಿಹಾರ ನಿಧಿಗೆ ಮೂರು ಲಕ್ಷ ರೂ.: ಟಿಎಂಎಸ್​ದಿಂದ ಕೋವಿಡ್ 19 ಮುಖ್ಯಮಂತ್ರಿ ಪರಿಹಾರ ನಿಧಿಗೆ ಮೂರು ಲಕ್ಷ ರೂ.ಗಳ ಚೆಕ್ ಅನ್ನು ಸಂಘದ ಅಧ್ಯಕ್ಷ ಆರ್.ಎಂ. ಹೆಗಡೆ ಬಾಳೇಸರ ಅವರು ತಹಸೀಲ್ದಾರ್ ಮಂಜುಳಾ ಭಜಂತ್ರಿ ಅವರಿಗೆ ಶನಿವಾರ ನೀಡಿದರು. ಸಂಘದ ವ್ಯವಸ್ಥಾಪಕ ಸತೀಶ ಹೆಗಡೆ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts