More

    ಜೈಲಿನಿಂದ ಮುರುಘಾ ಶರಣರ ಬಿಡುಗಡೆ,ದಾವಣಗೆರೆ ಕಡೆಗೆ ಪ್ರಯಾಣ

    ಚಿತ್ರದುರ್ಗ:ದೌರ್ಜನ್ಯ ಮತ್ತು ಮೊದಲ ಪೋಕ್ಸೋ ಪ್ರಕರಣದಲ್ಲಿ ಬಂಧಿತರಾಗಿ ನ್ಯಾಯಾಂಗ ಬಂಧನದಲ್ಲಿದ್ದ ಮುರುಘಾ ಸ್ವಾಮೀ ಜಿ ಗುರುವಾರ ಜೈಲಿನಿಂದ ಬಿಡುಗಡೆಯಾದರು. ಇದರಿಂದಾಗಿ ಮೊದಲ ಪ್ರಕರಣದಲ್ಲಿ ಬಂಧಿತರಾಗಿ ಸುದೀರ್ಘ ಒಂದು ವರ್ಷ, ಎರ ಡೂವರೆ ತಿಂಗಳ ಕಾಲ ಜೈಲಿನಲ್ಲಿದ್ದ ಶರಣರು,ಮಧ್ಯಾಹ್ನ 12.30ರ ಸಮಯದಲ್ಲಿ ಜೈಲಿನಿಂದ ಹೊರ ಬಂದರು.
    ಮೊದಲ ಪ್ರಕರಣದಲ್ಲಿ ಶರಣರಿಗೆ ಹೈಕೋರ್ಟ್ ನ.8ರಂದು ಷರತ್ತು ಬದ್ಧ ಜಾಮೀನು ನೀಡಿತ್ತು. ಶರಣರ ಪರ ವಕೀಲರು ನ.10 ರಂದು ಜಾಮೀನುದಾರರು ಸಲ್ಲಿಸಿದ್ದ ದಾಖಲೆ, ಶರಣರ ಪಾಸ್ ಪೋರ್ಟ್‌ನ್ನು ಶರಣರ ಪರ ವಕೀಲರು ನಗರದ 2ನೇ ಅಪರ ಜಿಲ್ಲಾ ನ್ಯಾಯಾಲಯಕ್ಕೆ ಸಲ್ಲಿಸಿದ್ದರು.
    ಈ ಸಂದರ್ಭದಲ್ಲಿ ಪ್ರಾಸಿಕ್ಯೂಷನ್ ವಕೀಲರು ಶರಣರ ವಿರುದ್ಧದ 2ನೇ ಪ್ರಕರಣದಲ್ಲಿರುವ ಬಾಡಿವಾರೆಂಟ್‌ನ್ನು ನ್ಯಾಯಾಂಗ ಬಂಧ ನವನ್ನಾಗಿ ಪರಿವರ್ತಿಸುವಂತೆ ಮನವಿ ಮಾಡಿದ್ದರು. ಅಂದು ನ್ಯಾಯಾಧೀಶರು ಪ್ರಾಸಿಕ್ಯೂಷನ್ ಅರ್ಜಿ ವಿಚಾರಣೆಯನ್ನು ಮುಂದೂಡಿ ದ್ದರು.
    ಬುಧವಾರ ನಡೆದ ವಿಚಾರಣೆ ವೇಳೆ ಒಂದನೇ ಪ್ರಕರಣದಲ್ಲಿ ನ್ಯಾಯಾಧೀಶೆ ಬಿ.ಕೆ.ಕೋಮಲಾ ಅವರು, ಜೈಲಿನಿಂದ ಶರಣರನ್ನು ಬಿ ಡುಗಡೆ ಮಾಡುವಂತೆ ಆದೇಶಿಸಿದ್ದರು. ಅದರಂತೆ ರಾತ್ರಿ ಆದೇಶ ಪ್ರತಿ ತಲುಪಿದ್ದರು, ಜೈಲಿನ ವೇಳೆ ಪೂರ್ಣಗೊಂಡಿದ್ದರಿಂದಾಗಿ ಅ ವರನ್ನು ಬೆಳಗ್ಗೆ 11.45ರ ಸಮಯದಲ್ಲಿ ಬಿಡುಗಡೆ ಮಾಡಲಾಯಿತಾದರೂ, ಶರಣರು ಜೈಲಿನಿಂದ ಹೊರಕ್ಕೆ ಬರುವ ವೇಳೆಗೆ ಮಧ್ಯಾಹ್ನ 12.30ರ ಸಮಯವಾಗಿತ್ತು. ಜೈಲಿನಿಂದ ಬಿಡುಗಡೆ ಆದ ಶರಣರು ದಾವಣಗೆರೆಗೆ ಕಡೆಗೆ ಪ್ರಯಾಣಿಸಿದರು.
    ಬಿಡುಗಡೆ ಆದೇಶದ ಪ್ರತಿ ತಲುಪಿದ ಮೇಲೆ ಬಾಡಿವಾರೆಂಟ್ ಇದ್ದರೂ ಅವರನ್ನು ನಾವು ಜೈಲಿನಲ್ಲಿ ಇಟ್ಟುಕೊಳ್ಳುವಂತಿಲ್ಲ. ಆದ್ದರಿಂದ ಅವರನ್ನು ಬಿಡುಗಡೆ ಮಾಡಲಾಗಿದೆ ಎಂದು ಜೈಲು ಅಧಿಕಾರಿಗಳು ತಿಳಿಸಿದರು.

    .

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts