More

    ಜೇವರ್ಗಿ ತಾಲೂಕಿನಲ್ಲಿ ಕರೊನಾ ಭೀತಿ


    ಜೇವರ್ಗಿ: ತಾಲೂಕಿನ ಮತ್ತೊಬ್ಬ ಗರ್ಭಿಣಿ ಯುವತಿಗೆ ಕರೊನಾ ಸೋಂಕು ತಗುಲಿದ್ದು ಯಾವುದೇ ನಿಯಮ ಪಾಲಿಸದೇ ಗರ್ಭಿಣಿಯರನ್ನು ಕ್ವಾರಂಟೈನ್ಗೆ ಕಳುಹಿಸುತ್ತಿರುವುದು ತಾಲೂಕಿನಲ್ಲಿ ಇದೀಗ ಚರ್ಚೆಗೆ ಕಾರಣವಾಗುತ್ತಿದೆ. ಈಗಾಗಲೇ ಕ್ವಾರಂಟೈನ್ ಕೇಂದ್ರದಲ್ಲಿದ್ದ ಒಬ್ಬ ಬಾಣಂತಿ ಮತ್ತು ಗರ್ಭಿಣಿ ಮಹಿಳೆಯರ ರಕ್ತ ಮತ್ತು ಕಫ ಪರೀಕ್ಷಿಸಿದ ನಂತರ ಇವರಿಬ್ಬರಿಗೂ ಸೋಂಕು ಇಲ್ಲವೆಂದು ದೃಢಪಟ್ಟ ನಂತರ ಅವರನ್ನು ಮನೆಗಳಿಗೆ ಕಳಿಸಲಾಯಿತು.
    ಈಗ ತಾಲೂಕಿನ ಯಾಳವಾರ ಕ್ರಾಸ್ ಹತ್ತಿರದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಕ್ವಾರಂಟೈನ್ದಲ್ಲಿದ್ದ ಗರ್ಭಿಣಿ ಯಾಳವಾರ ಗ್ರಾಮದವಳಾಗಿದ್ದು, ಈ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಯಾಳವಾರ ಗ್ರಾಮವನ್ನು ಕಂಟೇನ್ಮೆಂಟ್ ಜೋನ್ ಎಂದು ಗುರುತಿಸಿ ಅದನ್ನು ಸೀಲ್ಡೌನ್ ಮಾಡಲಾಗಿದೆ. ಜತೆಗೆ ಮೊರಾರ್ಜಿ ದೇಸಾಯಿ ಶಾಲೆಯನ್ನು ಕಂಟೇನ್ಮೆಂಟ್ ಜೋನ್ ಎಂದು ಗುರುತಿಸಲಾಗಿದೆ ಎಂದು ತಹಸೀಲ್ದಾರ್ ಸಿದ್ದರಾಯ ಭೋಸಗಿ ತಿಳಿಸಿದ್ದಾರೆ.
    ತಾಲೂಕಿನ ಯಾಳವಾರ ಕ್ರಾಸ್ ಹತ್ತಿರದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಕ್ವಾರಂಟೈನ್ನಲ್ಲಿದ್ದ 5 ಜನರಲ್ಲಿ ಕರೊನಾ ಪಾಸಿಟಿವ್ ದೃಢಪಟ್ಟಿದೆ. ಯಡ್ರಾಮಿ ತಾಲೂಕಿನ ಸುಂಬಡ ಗ್ರಾಮದ ಇಬ್ಬರು ಪುರುಷರು, ಹಂಗರಗಾ (ಕೆ) ಗ್ರಾಮದ ಒಬ್ಬ ಪುರುಷ, ಅರಳಗುಂಡಗಿ ಗ್ರಾಮದ ಒಬ್ಬ ಪುರುಷ ಹಾಗೂ ಯಾಳವಾರ ಗ್ರಾಮದ ಗರ್ಭಿಣಿ ಮಹಿಳೆ ಸೇರಿ ಒಟ್ಟು 5 ಜನರಿಗೆ ಸೋಂಕು ತಗುಲಿದೆ. ಐವರನ್ನು ಕೋವಿಡ್ ನಿಗದಿತ ಕಲಬುರಗಿ ನಗರದ ಜಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
    ತಹಸೀಲ್ದಾರ್ ಭೋಸಗಿ ಕೂಡಲೇ ಗ್ರಾಮದ ಕ್ವಾರಂಟೈನ್ ಕೇಂದ್ರಕ್ಕೆ ಭೇಟಿ ನೀಡಿ ಅಲ್ಲಿದ್ದ ಎಲ್ಲ 40 ಜನರನ್ನು ಪರೀಕ್ಷೆಗೆ ಒಳಪಡಿಸಿದ್ದಾರೆ. ಅಲ್ಲದೇ ಅವರ ರಕ್ತ ಮತ್ತು ಕಫವನ್ನು ಪರೀಕ್ಷೆಗೆ ಕಳಿಸಿಕೊಟ್ಟಿದ್ದಾರೆ. ಇವರೆಲ್ಲರ ವರದಿ ಬರುವ ತನಕ ತಾಲೂಕಿನಲ್ಲಿ ನಡುಕ ಶುರುವಾಗಿದೆ.
    ತಾಲೂಕು ಆರೋಗ್ಯಾಧಿಕಾರಿ ಡಾ.ಸಿದ್ದು ಪಾಟೀಲ, ಸರ್ಕಲ್ ಇನ್ಸಪೆಕ್ಟರ್ ರಮೇಶ ರೊಟ್ಟಿ, ಜೇವರ್ಗಿ ಠಾಣೆಯ ಸಬ್ ಇನ್ಸಪೆಕ್ಟರ್ ಮಂಜುನಾಥ ಹೂಗಾರ ಕ್ವಾರಂಟೈನ್ ಕೇಂದ್ರಗಳಿಗೆ ಭೇಟಿ ನೀಡಿದರು.

    ಕೋವಿಡ್ -19 ದೃಢಪಟ್ಟ ಐವರಿಗೆ ಪ್ರಾಥಮಿಕ ಸಂಪರ್ಕ ಹೊಂದಿದವರ ಗಂಟಲು ಕ ಸಂಗ್ರಹಿಸಿ ಪರೀಕ್ಷೆಗೆ ಜಿಮ್ಸ್ ಆಸ್ಪತ್ರೆಗೆ ಕಳುಹಿಸಲಾಗಿದೆ. ತಾಲೂಕಿನ 46 ಕ್ವಾರಂಟೈನ್ ಕೇಂದ್ರಗಳಲ್ಲಿ ಒಟ್ಟು 2008 ಜನರನ್ನು ಕ್ವಾರಂಟೈನ್ಗೆ ಒಳಪಡಿಸಲಾಗಿದೆ.
    ಡಾ.ಸಿದ್ದು ಪಾಟೀಲ ತಾಲೂಕು ಆರೋಗ್ಯಾಧಿಕಾರಿ
    ಜೇವ
    ರ್ಗಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts