More

    ಜೇವರ್ಗಿಯಲ್ಲಿ ಧಾರಾಕಾರ ಮಳೆ


    ಜೇವರ್ಗಿ: ಸೋಮವಾರ ಸಂಜೆ ಸುರಿದ ಧಾರಾಕಾರ ಮಳೆಗೆ ಪಟ್ಟಣ ಸೇರಿ ತಾಲೂಕಿನಾದ್ಯಂತ ಜನಜೀವನ ಅಸ್ತವ್ಯಸ್ತಗೊಂಡಿದೆ. ಅಪಾರ ಪ್ರಮಾಣದ ಜಮೀನಿಗೆ ನೀರು ನುಗ್ಗಿದ್ದು, ಬೆಳೆ ಹಾನಿ ಸಂಭವಿಸಿದೆ.
    ಪಟ್ಟಣದ ಶಾಸ್ತ್ರಿ ಚೌಕ್, ಬಸವೇಶ್ವರ ನಗರ ಸೇರಿ ಹಲವಾರು ಬಡಾವಣೆಗಳಲ್ಲಿ ಸುಮಾರು 15-20 ಮನೆಗಳಿಗೆ ನೀರು ನುಗ್ಗಿವೆ. ಅಲ್ಲದೆ ರಸ್ತೆಗಳು ಜಲಾವೃತವಾಗಿದ್ದು, ಸಂಚಾರಕ್ಕೆ ತೊಂದರೆ ಅನುಭವಿಸುವಂತಾಯಿತು. ವಿಜಯಪುರ ರಸ್ತೆಯ ಬಸವೇಶ್ವರ ಸರ್ಕಲ್ ಬಳಿಯ ಚರಂಡಿಯಲ್ಲಿ ಹೂಳು ತುಂಬಿದ್ದರಿಂದ ಮಳೆ ನೀರು ಸರಾಗವಾಗಿ ಹರಿಯದೇ ರಸ್ತೆ ಮೇಲೆ ಬಂದವು. ಕೊಳಚೆ ನೀರು ಮಿಶ್ರಣಗೊಂಡಿದ್ದು, ಇಡೀ ರಸ್ತೆಯೇ ಕೆಸರು ಮಯವಾಯಿತು. ಸತತ ಮಳೆಯಿಂದ ಮಿನಿ ವಿಧಾನಸೌಧ ಆವರಣದಲ್ಲಿ ಸಾಕಷ್ಟು ನೀರು ಸೇರಿಕೊಂಡಿದ್ದು, ಅಕ್ಷರಶಃ ಕೆರೆಯಂತೆ ಗೋಚರವಾಯಿತು. ಶಾಂತನಗರ, ದತ್ತ ನಗರಗಳಲ್ಲಿ ರಸ್ತೆಗಳೆಲ್ಲ ಜಲಾವೃತವಾಗಿದ್ದವು. ಆದರೆ ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.


    ಜೇವರ್ಗಿಯಲ್ಲಿ ಮಳೆಯಿಂದ ಆದ ಅವಘಡವನ್ನು ಪರಿಶೀಲಿಸಲು ಕಂದಾಯ ನಿರೀಕ್ಷಕರು ಹಾಗೂ ಗ್ರಾಮ ಲೆಕ್ಕಿಗರನ್ನು ಕಳುಹಿಸಲಾಗಿದೆ. ಸಮಗ್ರ ವರದಿ ಪಡೆದ ನಂತರ ರಾಜ್ಯ ಸಕರ್ಾರಕ್ಕೆ ಸಲ್ಲಿಸಿ, ಪರಿಹಾರ ಕಲ್ಪಿಸಲು ಪ್ರಮಾಣಿಕವಾಗಿ ಶ್ರಮಿಸಲಾಗುವುದು.
    | ಸಿದ್ದರಾಯ ಭೋಸಗಿ, ತಹಶೀಲ್ದಾರ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts