More

    ಜೆಜೆಎಂ ಸಮರ್ಪಕ ಜಾರಿಗೆ ಬದ್ಧ

    ನಾಗರಮುನ್ನೋಳಿ, ಬೆಳಗಾವಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಕನಸಿನ ಜಲಜೀವನ್ ಮಿಷನ್ ಯೋಜನೆಯನ್ನು ಸಮರ್ಪಕವಾಗಿ ಜಾರಿಗೆ ತರಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿದ್ದೇನೆ ಎಂದು ಶಾಸಕ ಡಿ.ಎಂ.ಐಹೊಳೆ ಹೇಳಿದರು.

    ಸಮೀಪದ ಕರಗಾಂವ ಗ್ರಾಮದ ಚನ್ನವೀರಡ್ಡಿ ಕೋಡಿಯಲ್ಲಿ ಜಲಜೀವನ್ ಮಿಷನ್‌ಯೋಜನೆಯಡಿಯಲ್ಲಿ 39 ಲಕ್ಷ ರೂ. ವೆಚ್ಚದ ಶುದ್ಧ ಕುಡಿಯುವ ನೀರು ಪೂರೈಕೆ ಕಾಮಗಾರಿಗೆ ಶುಕ್ರವಾರ ಚಾಲನೆ ನೀಡಿ ಮಾತನಾಡಿದ ಅವರು, ಶುದ್ಧ ಕುಡಿಯುವ ನೀರು ಪಡೆಯುವುದು ಪ್ರತಿಯೊಬ್ಬರ ಮೂಲಭೂತ ಹಕ್ಕು. ಜನರ ಆರೋಗ್ಯದ ಮೇಲೆ ಹೆಚ್ಚಿನ ಕಾಳಜಿ ಹೊಂದಿರುವ ಪ್ರಧಾನಿಗಳು ಯೋಜನೆ ತಂದಿದ್ದಾರೆ. ಕರಗಾಂವ ಏತ ನೀರಾವರಿ ಯೋಜನೆಯ ಕಾಮಗಾರಿಗೆ ಸದ್ಯದಲ್ಲೇ ಚಾಲನೆ ನೀಡಲಾಗುವುದು ಎಂದರು.

    ಜಿಪಂ ಮಾಜಿ ಸದಸ್ಯ ಪವನ ಕತ್ತಿ ಮಾತನಾಡಿ, ನಾಗರಮುನ್ನೋಳಿ ಭಾಗದ ರೈತರು ಬಹುದಿನಗಳಿಂದ ಕಾಯುತ್ತಿರುವ ಕರಗಾಂವ ಏತ ನೀರಾವರಿ ಯೋಜನೆಯ ಕನಸು ನನಸಾಗುತ್ತಿದೆ. ಇನ್ನೇನು ಕೆಲವೇ ದಿನಗಳಲ್ಲಿ ಯೋಜನೆ ಜಾರಿಯಾಗುತ್ತದೆ ಎಂದರು.

    ಹಿರಾ ಶುಗರ್ಸ್‌ ಸದಸ್ಯ ಸುರೇಶ ಬೆಲ್ಲದ, ಅಣ್ಣಾಸಾಹೇಬ ಖೇಮಲಾಪುರೆ, ಸದಾಶಿವ ಘೋರ್ಪಡೆ, ಮಹಾದೇವ ಜೂನಿ, ಭೀರಪ್ಪ ಮನ್ವಗೋಳ, ತಮ್ಮಣ್ಣ ಗಾಡಿವಡ್ಡರ, ಚಂದರ ಖೋತ, ರಾಮಪ್ಪ ಮಾಳಿಂಗೆ, ಮಹಾದೇವ ಖೋತ, ಶಂಕರ ಖೋತ, ಸಿದಾರ್ಥ ಮಾಳಗೆ ಭೀಮಪ್ಪ ಮಗಳಿ,ಮಲ್ಲಪ್ಪ ಶೇಡಬಾಳ,ಬಸಪ್ಪ ದಾನ್ನಗೋಲ, ಎಸ್.ಎಸ್. ಹೊಸಮನಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts