More

    ಜೆಜೆಎಂ ಕಾಮಗಾರಿ ಕಳಪೆಯಾಗದಂತೆ ಕ್ರಮ ವಹಿಸಿ

    ಯಾದಗಿರಿ: ಕೇಂದ್ರ ಹಾಗೂ ರಾಜ್ಯ ಪುರಸ್ಕೃತ ಯೋಜನೆಗಳ ಅನುದಾನ ಸಮರ್ಪಕವಾಗಿ ಬಳಸಿಕೊಂಡು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಅಕಾರಿಗಳು ವಿಶೇಷ ಗಮನ ನೀಡುವಂತೆ ರಾಯಚೂರು ಸಂಸದ ರಾಜಾ ಅಮರೇಶ್ವರ ನಾಯಕ ಸೂಚನೆ ನೀಡಿದರು.

    ಇಲ್ಲಿನ ಜಿಪಂ ಕಚೇರಿ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಮೇಲ್ವಿಚಾರಣಾ ಸಮಿತಿ (ದಿಶಾ) ಮೊದಲ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ಮಹತ್ವಕಾಂಕ್ಷಿ ಜಿಲ್ಲೆಗಳ ಅಭಿವೃದ್ಧಿಯಲ್ಲಿ ಯಾದಗಿರಿ ಸ್ಥಾನ ಗಳಿಸಿದೆ. ಹೀಗಾಗಿ ನಿರೀಕ್ಷೆ ಹೆಚ್ಚಾಗಿರುತ್ತವೆ. ಜವಾಬ್ದಾರಿಯಿಂದ ಅಕಾರಿಗಳು ಕೆಲಸ ಮಾಡಬೇಕು ಎಂದು ತಾಕೀತು ಮಾಡಿದರು.

    ಅಚ್ಚುಕಟ್ಟು ಪ್ರದೇಶದ ಎಲ್ಲ ರೈತರ ಜಮೀನುಗಳಿಗೆ ಸಮಾನ ಪ್ರಮಾಣದಲ್ಲಿ ನೀರು ಹರಿಸುವ ಮೇಲ್ವಿಚಾರಣ ಮತ್ತು ಡೇಟಾ ಸ್ವಾನ ರಿಮೋಟ್ ತಂತ್ರಜ್ಞಾನದ ಮೂಲಕ ಜಲಾಶಯದ ನೀರನ್ನು ಕಾಲುವೆಗಳಿಗೆ ಹರಿಸಬೇಕು. ಪ್ರಾಯೋಗಿಕವಾಗಿ ಎಡದಂಡೆ ಕಾಲುವೆಯಲ್ಲಿ ಈ ಯೋಜನೆ ಜಾರಿಯಾಗಿದೆ. ನಿಗಮದ ಅಕಾರಿಗಳು ಈ ಕುರಿತು ವಿಶೇಷ ಗಮನ ನೀಡಬೇಕು ಎಂದರು.

    ಇದು ಮಹತ್ವದ ಯೋಜನೆಯಾಗಿರುವುದರಿಂದ ನಿರ್ಲಕ್ಷ್ಯ ತೋರಬಾರದು. ಅದರಂತೆ ಜಿಲ್ಲೆಯಲ್ಲಿ ಜಲಜೀವನ್ ಮಿಷನ್ ಯೋಜನೆ ಪ್ರಗತಿಯಲ್ಲಿದೆ. ಪ್ರತಿ ಹಳ್ಳಿಯಲ್ಲಿ ಕಾಮಗಾರಿ ಕಳಪೆಯಾಗದಂತೆ ನೋಡಿಕೊಳ್ಳಬೇಕು. ಇನ್ನೂ ಜಲಧಾರೆ ಯೋಜನೆ ಶೀಘ್ರದಲ್ಲೇ ಆರಂಭಗೊಳ್ಳುವ ಕಾರಣ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸಲಹೆ ನೀಡಿದರು.
    ಶಾಸಕ ವೆಂಕಟರಡ್ಡಿ ಮುದ್ನಾಳ್, ಜಿಲ್ಲಾಕಾರಿ ಸ್ನೇಹಲ್ ಆರ್., ಜಿಪಂ ಸಿಇಒ ಅಮರೇಶ ನಾಯ್ಕ್, ನಗರಸಭೆ ಅಧ್ಯಕ್ಷ ಸುರೇಶ ಅಂಬಿಗೇರ, ದಿಶಾ ಸಮಿತಿ ಸದಸ್ಯರಾದ ಮಲ್ಲನಗೌಡ ಪಾಟೀಲ್, ಸಿದ್ದನಗೌಡ, ಹಣಮಂತ್ರಾಯಗೌಡ ಪಾಟೀಲ್, ಹೀರಾಸಿಂಗ್ ಜೈರಾಮ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts