More

    ಜೀವನೋಪಾಯಕ್ಕೆ ಎಡೆಮಾಡಿದ ನರೇಗಾ

    ಕಲಘಟಗಿ: ಒಂದೂವರೆ ತಿಂಗಳಿಂದ ಲಾಕ್​ಡೌನ್ ನಿಂದ ಕೆಲಸವಿಲ್ಲದೆ ಮನೆಯಲ್ಲೇ ಕುಳಿತಿದ್ದ ಕೂಲಿ ಕಾರ್ವಿುಕರಿಗೆ ನರೇಗಾ ಯೋಜನೆಯಡಿ ಕೆರೆ ಹೂಳೆತ್ತುವ ಕಾಮಗಾರಿ ಜೀವನೋಪಾಯಕ್ಕೆ ಎಡೆಮಾಡಿಕೊಟ್ಟಿದೆ.

    ಹುಬ್ಬಳ್ಳಿಯಲ್ಲಿ ಕೂಲಿ ಕೆಲಸವನ್ನೇ ನೆಚ್ಚಿದ್ದ ಕಾರ್ವಿುಕರ ಅನುಕೂಲಕ್ಕಾಗಿ ತಾಲೂಕಿನ ಗಲಗಿನಗಟ್ಟಿ ಗ್ರಾಮದಲ್ಲಿ ನರೇಗಾ ಯೋಜನೆಯಡಿ ಬಡಿಕಟ್ಟಿ ಕೆರೆ ಹೂಳೆತ್ತುವ ಕಾಮಗಾರಿ ಕೈಗೊಳ್ಳಲಾಗಿದೆ.

    ಕಾಮಗಾರಿ ವೀಕ್ಷಿಸಿ ಮಾತನಾಡಿದ ತಾಪಂ ಇಒ ಎಂ.ಎಸ್. ಮೇಟಿ, ಕೆರೆ ಹೂಳೆತ್ತುವುದು, ಕಾಲುವೆ ನಿರ್ವಣ, ಅರಣ್ಯೀಕರಣ, ಕೃಷಿ ಹೊಂಡ ನಿರ್ವಣ, ದನದ ಕೊಟ್ಟಿಗೆ ಸೇರಿ 6.91 ಲಕ್ಷ ಮಾನವ ದಿನಗಳ ಸೃಜಿಸಲು ಮಂಜೂರಾತಿ ದೊರೆತಿದೆ. ಈ ಪೈಕಿ ಈಗಾಗಲೇ 10 ಸಾವಿರ ಮಾನವ ದಿನಗಳನ್ನು ಸೃಜಿಸಲಾಗಿದೆ ಎಂದರು.

    ನರೇಗಾ ಸಹಾಯಕ ನಿರ್ದೇಶಕ ಚಂದ್ರು ಪೂಜಾರ ಮಾತನಾಡಿ, ತಾಲೂಕಿನ ದೇವಿಕೊಪ್ಪ, ಜಿನ್ನೂರ, ಗಳಗಿಹುಲಕೊಪ್ಪ, ಜಿ.ಬಸವನಕೊಪ್ಪ ಸೇರಿ ತಾಲೂಕಿನ ಗ್ರಾಪಂ ವ್ಯಾಪ್ತಿಯ ಗ್ರಾಮಗಳ ಸಾವಿರಾರು ಕೂಲಿ ಕಾರ್ವಿುಕರು ನರೇಗಾ ಯೋಜನೆಯ ವಿವಿಧ ಉದ್ಯೋಗದಲ್ಲಿ ನಿರತರಾಗಿದ್ದಾರೆ. ಒಬ್ಬರಿಗೆ ಒಂದು ಜಾಬ್ ಕಾರ್ಡ್​ಗೆ 100 ಮಾನವ ದಿನಗಳಿದ್ದು, ದಿನಕ್ಕೆ 275 ರೂ. ಕೂಲಿ, 10 ರೂ. ಸಾಮಗ್ರಿ ವೆಚ್ಚ ಸೇರಿ 285 ರೂ. ನೀಡಲಾಗುತ್ತದೆ. ಜನರು ತಮ್ಮ ಗ್ರಾಪಂಗೆ ಹೋಗಿ ಕೆಲಸ ಪಡೆಯಬಹುದು ಎಂದರು.

    ಪಿಡಿಒ ಚನ್ನಮಲ್ಲಪ್ಪ ಉಳ್ಳಾಗಡ್ಡಿ, ಗ್ರಾಪಂ ಅಧ್ಯಕ್ಷೆ ಚನ್ನವ್ವ ಆಲದಮರದ, ಉಪಾಧ್ಯಕ್ಷೆ ಈರವ್ವ ಬೇಗೂರ ಮುಂತಾದವರು ನರೇಗಾ ಯೋಜನೆಯಡಿ ವಿವಿಧ ಉದ್ಯೋಗದಲ್ಲಿ ಕಾರ್ಯನಿರತ ಕಾರ್ವಿುಕರಿಗೆಲ್ಲ ಉಚಿತವಾಗಿ ಮಾಸ್ಕ್​ಗಳನ್ನು ವಿತರಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts