More

    ಜೀವನದಲ್ಲಿ ನಿಯಮವಿದ್ದರೆ ಯಶಸ್ಸು

     ಬಾಳೆಹೊನ್ನೂರು: ಸಂಬಂಧಗಳೆಂದರೆ ಬೇಕಾದಾಗ ಆಡಿ, ಬೇಡವಾದಾಗ ಬಿಡುವ ಆಟವಲ್ಲ. ದೀರ್ಘ ಬಾಳಿಕೆಗೆ ಅನುಕೂಲವಾಗುವ ನೀತಿ ನಿಯಮಗಳನ್ನು ಅನುಸರಿಸಿ ಬಾಳಿದಾಗ ಜೀವನದಲ್ಲಿ ಶ್ರೇಯಸ್ಸು ಕಾಣಲು ಸಾಧ್ಯವಾಗುವುದೆಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.

    ಶ್ರೀ ರಂಭಾಪುರಿ ಪೀಠದಲ್ಲಿ ಕೈಗೊಂಡ ಶ್ರಾವಣ ತಪೋನುಷ್ಠಾನ ಹಾಗೂ ಪುರಾಣ ಪ್ರವಚನ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಆತ್ಮ ವಿಶ್ವಾಸ ಕಳೆದುಕೊಳ್ಳದೆ ನಿರಂತರ ಸಾಧನಾ ಪಥದಲ್ಲಿ ಹೆಜ್ಜೆ ಹಾಕುವ ಮನುಷ್ಯ ವಿಜಯಶಾಲಿ ಆಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಯಾರು ಎಷ್ಟೇ ತುಳಿದರೂ ಮತ್ತೆ ಚಿಗುರಬೇಕೆಂಬ ಧೈರ್ಯ ಹುಮ್ಮಸ್ಸು ಇರಬೇಕು. ನಿಜ ಶತ್ರು ಸೋಮಾರಿತನವಾದರೆ ನಿಜಬಂಧು ಕ್ರಿಯಾಶೀಲತೆಯಾಗಿದೆ ಎಂದು ನುಡಿದರು.

    ಶ್ರೀ ಜಗದ್ಗುರು ರೇಣುಕ ವಿಜಯ ಪುರಾಣ ಪ್ರವಚನದಲ್ಲಿ ಗಂವ್ಹಾರ ಹಿರೇಮಠದ ವಿರೂಪಾಕ್ಷೇಶ್ವರ ಶ್ರೀಗಳು ಮಾತನಾಡಿ, ಮನುಷ್ಯ ಬಾಳಲು ನೀರು, ಅನ್ನ, ಗಾಳಿ ಎಷ್ಟು ಮುಖ್ಯವೋ ಅಷ್ಟೇ ಸತ್ಯ, ಸಜ್ಜನರ ಒಡನಾಟ ಮುಖ್ಯ ಎಂದು ಹೇಳಿದರು.</p><p>ದಾರಿ ತಪ್ಪಿಸುವವರು ಬಹಳ ಜನ ಇದ್ದಾರೆ. ದಾರಿ ತೋರಿ ಬೆಳಕು ಮೂಡಿಸುವ ಮಹಾತ್ಮರು ಕೆಲವರು ಇದ್ದಾರೆ. ಈ ಅಗ್ರ ಪಂಕ್ತಿಯಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯರ ವಿಶ್ವಪಥ ಸಕಲರ ಬಾಳಿಗೆ ಬೆಳಕು ಮೂಡಿಸುತ್ತದೆ ಎಂದು ನುಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts