More

    ನಿರ್ಮಲ ಭಕ್ತಿ ಸಮೃದ್ಧಿಯ ಸೋಪಾನ

    ಮಳಖೇಡ: ಜಪ, ತಪ, ಧ್ಯಾನದಿಂದ ಸಂಸಾರದ ಜಂಜಾಟಗಳೆಲ್ಲ ದೂರಾಗಿ ಸುಖದ ಮಾರ್ಗ ಪ್ರಾಪ್ತಿಯಾಗುತ್ತದೆ. ಜತೆಗೆ ನಿರ್ಮಲವಾದ ಭಕ್ತಿ ಮಾನವನ ಸಮೃದ್ಧಿಯ ಸೋಪಾನವಾಗಲಿದೆ ಎಂದು ಕಲಿಫತ್-ಉರ್-ರಹೇಮಾನ್ ದರ್ಗಾದ ಸೈಯದ್ ಶಹಾ ಮುಸ್ತಫಾ ಖಾದ್ರಿ ಹೇಳಿದರು.

    ನಿಜಲಿಂಗಪ್ಪ ಬಡಾವಣೆಯ ಶ್ರೀ ಬಸವೇಶ್ವರ ದೇವಸ್ಥಾನದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಪವಿತ್ರ ಶ್ರಾವಣ ಮಾಸದ ಸಮಾರೋಪ ಸಮಾರಂಭದಲ್ಲಿ ಆಶೀರ್ವಚನ ನೀಡಿದ ಅವರು, ದಿನಕ್ಕೆ ಒಂದು ಬಾರಿಯಾದರೂ ನಾವು ಭಗವಂತನ ಸ್ಮರಣೆ ಮಾಡಿದಾಗ ನಮಗೆ ಬಂದೊದಗುವ ಸಂಕಷ್ಟಗಳು ಸುಲಭವಾಗಿ ದೂರಾಗುತ್ತವೆ. ನಮ್ಮಲ್ಲಿನ ಕೆಟ್ಟ ವ್ಯಸನಗಳನ್ನು ದೂರವಿರಿಸಿ, ನಾವು ಒಂದು ಬಾರಿ ಸ್ಮರಿಸಿದರೇ ದೇವರು ನಮಗೆ ಸಾವಿರ ಬಾರಿ ಕಾಪಾಡುತ್ತಾನೆ ಎಂದರು.

    ಬೆಳಗ್ಗೆ ಗಂಗಾಸ್ನಾನ, ಪ್ರಸಾದ ವಿತರಣೆ ಹಾಗೂ ಶ್ರೀ ನುಲಿ ಚನ್ನಯ್ಯ ಭಜನಾ ಮಂಡಳಿ ಸದಸ್ಯರಿಂದ ಭಜನಾ ಕಾರ್ಯಕ್ರಮ ಜರುಗಿದವು. ಎಪಿಎಂಸಿ ಮಾಜಿ ಉಪಾಧ್ಯಕ್ಷ ಸುಂದರ ಮಂಗಾ, ಗ್ರಾಪಂ ಮಾಜಿ ಅಧ್ಯಕ್ಷ ನಾಗರಾಜ ನಂದೂರ, ಮಲ್ಲಿಕಾರ್ಜುನ ಲಂಗೋಟಿ, ಶಾಂತಪ್ಪ ನಂದೂರ, ರಮೇಶ ನಂದೂರ, ಕೇಶವ ಮಂಗಾ, ಹಣಮಂತ ನಂದೂರ, ಸಾಯಬಣ್ಣ ನಂದೂರ, ಹಣಮಂತ ಮಾಳಗಿ, ರಾಜಪ್ಪ ಮಂಗಾ, ಚಂದ್ರಪ್ಪ ಯಂಕರೆಡ್ಡಿ, ದೇವೇಂದ್ರ ಮಂಗಾ, ಕಾಶಪ್ಪ ನಂದೂರ, ಮೇಘರಾಜ ಮಾಳಗಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts