More

    ಜೀಜಾಮಾತಾ ಪ್ರೌಢಶಾಲೆ ಸಾಧನೆ

    ಬೀದರ್: ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಇಲ್ಲಿಯ ಜೀಜಾ ಮಾತಾ ಕನ್ಯಾ ಪ್ರೌಢಶಾಲೆ ಉತ್ತಮ ಸಾಧನೆ ಮಾಡಿದೆ.
    ಶಾಲೆಗೆ ಶೇ 89 ರಷ್ಟು ಫಲಿತಾಂಶ ಲಭಿಸಿದೆ. ಒಬ್ಬರು ವಿದ್ಯಾರ್ಥಿ ಅಗ್ರಶ್ರೇಣಿ, 12 ಪ್ರಥಮ ದರ್ಜೆ ಹಾಗೂ 13 ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ.
    ಶೇ 89 ರಷ್ಟು ಫಲಿತಾಂಶ ಗಳಿಸಿರುವ ಆರತಿ ನಿಂಗಪ್ಪ ಶಾಲೆಗೆ ಟಾಪರ್ ಆಗಿದ್ದಾರೆ. ಪೂಜಾ ಅಶೋಕ ಶೇ 84, ಸೃಷ್ಟಿ ಅಶೋಕ ಶೇ 80, ಶಿಲ್ಪಾ ವೆಂಕಟ ಶೇ 78, ಭವಾನಿ ಪಂಡಿತ ಶೇ 77 ರಷ್ಟು ಅಂಕ ಪಡೆದಿದ್ದಾರೆ.
    ಸಾಧಕ ವಿದ್ಯಾರ್ಥಿಗಳನ್ನು ಶಾಲೆಯಲ್ಲಿ ಸನ್ಮಾನಿಸಿ ಪ್ರೋತ್ಸಾಹಿಸಲಾಯಿತು. ವಿದ್ಯಾರ್ಥಿಗಳ ಸಾಧನೆಯನ್ನು ಸಂಸ್ಥೆಯ ಅಧ್ಯಕ್ಷ ಎಂ.ಜಿ. ಮುಳೆ, ಕಾರ್ಯದರ್ಶಿ ಸತೀಶ್ ಮುಳೆ ಕೊಂಡಾಡಿದರು.
    ಅಕ್ಷರ ದಾಸೋಹ ಯೋಜನೆಯ ಸಹಾಯಕ ನಿರ್ದೇಶಕಿ ಗೀತಾ ಗಡ್ಡಿ, ಮುಖ್ಯಶಿಕ್ಷಕರಾದ ಪರಮೇಶ್ವರ ಬಿರಾದಾರ, ರಮೇಶ ಬಿರಾದಾರ, ಸಹ ಶಿಕ್ಷಕರಾದ ರಾಜಕುಮಾರ ಗಾದಗೆ, ಪ್ರಭಣ್ಣ ಕಾಳಗೊಂಡ, ಆನಂದ ಜಾಧವ್, ಅನಿಲಕುಮಾರ ರಾಮರತನ್, ಬಸವರಾಜ ರಾಯಪಳ್ಳಿ, ಅರ್ಜುನ ಧೂಳೆ ಇದ್ದರು. ತಾನಾಜಿ ನಿರಗುಡೆ ನಿರೂಪಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts