More

    ಜಿ.ಹೊಸಳ್ಳಿಯಲ್ಲಿ ಕಾಫಿ ತೋಟ ಧ್ವಂಸಗೊಳಿಸಿದ ಕಾಡಾನೆ

    ಮೂಡಿಗೆರೆ: ಬೇಲೂರು ಭಾಗದಿಂದ ಭಾನುವಾರ ಬಂದಿರುವ ಕಾಡಾನೆ ಜಿ.ಹೊಸಳ್ಳಿ ಗ್ರಾಮದ ಕಾಫಿ ತೋಟವನ್ನು ಧ್ವಂಸಗೊಳಿಸಿದೆ.
    ಗ್ರಾಮದ ಕಾಫಿ ಎಸ್ಟೇಟ್, ಕಮಲಮ್ಮ, ಪ್ರಕಾಶ, ಹನುಮನಹಳ್ಳಿ ಪ್ರೀತಂ ಎಂಬುವವರ ತೋಟಕ್ಕೆ ದಾಳಿ ನಡೆಸಿ ಕಾಫಿ, ಕಾಳುಮೆಣಸು, ಅಡಕೆ ಮತ್ತಿತರೆ ಗಿಡಗಳನ್ನು ನಾಶಪಡಿಸಿದೆ. ಸೋಮವಾರ ಸಂಜೆ ಜಿ.ಹೊಸಳ್ಳಿ ರಸ್ತೆ ಬದಿ ಮರದ ಕೊಂಬೆ ಕಾಡಾನೆ ಮುರಿಯುತ್ತಿದ್ದಾಗ ವಿದ್ಯುತ್ ತಂತಿ ಮೇಲೆ ಬಿದ್ದು ತಂತಿ ತುಂಡಾಗಿದೆ.ಗ್ರಾಮದ ಜನವಸತಿ ಪ್ರದೇಶದಲ್ಲಿ ಮಂಗಳವಾರ ಬೆಳಗ್ಗೆಯಿಂದಲೇ ಸಂಚರಿಸಿದ್ದು ಸಾರ್ವಜನಿಕರು ದಿಕ್ಕಾಪಾಲಾಗಿ ಓಡಿದ್ದಾರೆ. ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪಟಾಕಿ ಸಿಡಿಸಿ ಕಾಡಿಗೆ ಅಟ್ಟಲು ಪ್ರಯತ್ನಿಸಿದರೂ ಮಧ್ಯಾಹ್ನದವರೆಗೂ ಫಲಿಸಲಿಲ್ಲ. ಪಟಾಕಿ ಸಿಡಿಸಿದೊಡನೆ ಅರಣ್ಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಹಾಗೂ ಸಾರ್ವಜನಿಕರಿದ್ದ ಕಡೆ ಕಾಡಾನೆ ನುಗ್ಗಿಬರುತ್ತಿತ್ತು. ಸಂಜೆ ಜಿ.ಹೊಸಳ್ಳಿ ಗ್ರಾಮದ ವಿನಾಯಕ ಎಸ್ಟೇಟ್ ಸಮೀಪದ ಕಾಡಿಗೆ ಅಟ್ಟಿದರು.
    ಎಸಿಎಫ್ ರಾಜೇಶ್ ನಾಯಕ್, ಆರ್​ಎಫ್​ಒ ಮೋಹನ್​ಕುಮಾರ್, ಎಆರ್​ಎಫ್​ಒ ಶಿವಕುಮಾರ್ ಮತ್ತು ಸಿಬ್ಬಂದಿ ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದಾರೆ.
    ಬಣಕಲ್ ಹೋಬಳಿ ಮೂಲರಹಳ್ಳಿ ಭಾಗದಲ್ಲೂ 3 ಕಾಡಾನೆಗಳು ಗ್ರಾಮದ ತೋಟಕ್ಕೆ ನುಗ್ಗಿ ಗಿಡಗಳನ್ನು ನಾಶಪಡಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts