More

    ಜಿಲ್ಲೆ 1048 ಮಕ್ಕಳಿಗೆ ಪ್ರವಾಸ ಭಾಗ್ಯ

    ಕಲಬುರಗಿ: ಹೊಸ ವರ್ಷದ ಸಂಭ್ರಮಾಚರಣೆಯಲ್ಲಿದ್ದ ಜಿಲ್ಲೆಯ ಸರ್ಕಾರಿ ಶಾಲಾ ಮಕ್ಕಳಿಗೆ ಬುಧವಾರದಿಂದ ನಾಲ್ಕು ದಿನ ಕರ್ನಾಟಕ ದರ್ಶನ ಶೈಕ್ಷಣಿಕ ಪ್ರವಾಸ ಏರ್ಪಡಿಸಿರುವುದು ಸಂತೋಷ ಇಮ್ಮಡಿಗೊಳಿಸಿದೆ.
    ಕರ್ನಾಟಕ ಪ್ರವಾಸೋದ್ಯಮ ಅಭಿವೃದ್ಧಿ ನಿಗಮವು ಜಿಲ್ಲಾಡಳಿತ, ಪ್ರವಾಸೋದ್ಯಮ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆ ಸಹಯೋಗದೊಂದಿಗೆ ಕಲಬುರಗಿ ದಕ್ಷಿಣ ಮತ್ತು ಉತ್ತರ ಕ್ಷೇತ್ರ ತಾಲೂಕಿನ 8ನೇ ತರಗತಿ ಅಭ್ಯಸಿಸುತ್ತಿರುವ 200 ಮಕ್ಕಳಿಗೆ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಸುವರ್ಣ ಮಲಾಜಿ ಬುಧವಾರ ಬೆಳಗ್ಗೆ ಐವಾನ್-ಎ-ಶಾಹಿ ಅತಿಥಿ ಗೃಹದಲ್ಲಿ ಟಿ-ಶರ್ಟ , ಕ್ಯಾಪ್, ಬ್ಯಾಗ್, ನೋಟ್ಬುಕ್, ಪೆನ್ ಹಾಗೂ ಕರ್ನಾಟಕ ಮ್ಯಾಪ್ ಒಳಗೊಂಡ ಕಿಟ್ ನೀಡಿ ಶೈಕ್ಷಣಿಕ ಪ್ರವಾಸಕ್ಕೆ ಚಾಲನೆ ನೀಡಿದರು.
    ದೇಶ ಸುತ್ತು ಕೋಶ ಓದು ಎಂಬ ನಾಣ್ಣುಡಿಯಂತೆ ಶೈಕ್ಷಣಿಕ ಪ್ರವಾಸ ಜ್ಞಾನಾರ್ಜನೆಗೆ ಪೂರಕವಾಗುತ್ತದೆ. ಮಕ್ಕಳು ಐತಿಹಾಸಿಕ ಮತ್ತು ಪ್ರವಾಸಿ ಸ್ಥಳಗಳಿಗೆ ಭೇಟಿ ನೀಡಿದಾಗ ಅಲ್ಲಿನ ಮಹತ್ವ ಮತ್ತು ಇತಿಹಾಸದ ಹಿನ್ನೆಲೆ ಅರಿತುಕೊಳ್ಳಬೇಕು. ಶಿಕ್ಷಕರು ಮಕ್ಕಳ ಬಗ್ಗೆ ಕಾಳಜಿ ವಹಿಸಬೇಕು ಹಾಗೂ ಸುರಕ್ಷತೆಯಿಂದ ವಾಹನ ಚಾಲನೆ ಮಾಡುವಂತೆ ಮಲಾಜಿ ಬಸ್ ಚಾಲಕರಿಗೆ ಸಲಹೆ ನೀಡಿದರು.
    ಜಿಪಂ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ದಾಮೋಧರರೆಡ್ಡಿ ಪಾಟೀಲ್, ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕ ರಫೀಕ್ ಲಾಡ್ಜಿ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ  ಶಾಂತಗೌಡ ಪಾಟೀಲ್, ಕೆಎಸ್ಟಿಡಿಸಿ ಪ್ರವಾಸ ಸಂಯೋಜಕ ಯಶವಂತ ಶಿವಕೇರಿ, ದಕ್ಷಿಣ ವಲಯ ಬಿಇಒ


    ಎಲ್ಲೆಲ್ಲಿ ಪ್ರವಾಸ?
    ಬುಧವಾರ ವಿಜಯಪುರದಲ್ಲಿ ಪ್ರೇಕ್ಷಣೀಯ ಹಾಗೂ ಐತಿಹಾಸಿಕ ಸ್ಥಳಗಳನ್ನು ವೀಕ್ಷಿಸಿ ವಾಸ್ತವ್ಯ. ಗುರುವಾರ ಬಾದಾಮಿ, ಐಹೊಳೆ, ಪಟ್ಟದಕಲ್ಲು, ಶಿವಯೋಗ ಮಂದಿರ, ತುಂಗಭದ್ರಾ ಡ್ಯಾಂ ವೀಕ್ಷಿಸಿ ತುಂಗೆ ದಡದಲ್ಲಿ ವಾಸ್ತವ್ಯ. ಶುಕ್ರವಾರ ವಿಜಯನಗರ ಸಾಮ್ರಾಜ್ಯದ ಐತಿಹಾಸಿಕ ಹಂಪಿ, ವಿರುಪಾಕ್ಷ ದೇವಸ್ಥಾನ, ವಿಜಯ ವಿಠ್ಠಲ ದೇವಸ್ಥಾನ ವೀಕ್ಷಿಸಿದ ಬಳಿಕ ಬಸವಣ್ಣನ ಐಕ್ಯಸ್ಥಳ ಕೂಡಲಸಂಗಮದಲ್ಲಿ ವಾಸ್ತವ್ಯ. ಕೊನೇ ದಿನ ಶನಿವಾರ ಕೂಡಲಸಂಗಮ ವೀಕ್ಷಿಸಿದ ಬಳಿಕ ಜಿಲ್ಲಾ ಕೇಂದ್ರ ಕಲಬುರಗಿಗೆ ತಂಡ ಮರಳಲಿದೆ.

    ಕರ್ನಾಟಕ ದರ್ಶನ ಯೋಜನೆಯಡಿ ಜಿಲ್ಲೆಯಿಂದ ಸರ್ಕಾರಿ ಮತ್ತು ಮುರಾರ್ಜಿ  ದೇಸಾಯಿ ವಸತಿ ಶಾಲೆಯ 8ನೇ ತರಗತಿ 1048 ಮಕ್ಕಳಿಗೆ ಪ್ರವಾಸ ಏರ್ಪಡಿಸಲಾಗಿದೆ. 2ರಂದು ಆಳಂದ, 3ಕ್ಕೆ ಚಿತ್ತಾಪುರ, 4ಕ್ಕೆ ಜೇವಗರ್ಿ, 6ಕ್ಕೆ ಚಿಂಚೋಳಿ, 7ಕ್ಕೆ ಸೇಡಂ ಹಾಗೂ 8ರಂದು ಅಫಜಲಪುರ ತಾಲೂಕಿನ ವಿದ್ಯಾಥರ್ಿಗಳು ತಾಲೂಕು ಕೇಂದ್ರಗಳಿಂದ ಪ್ರವಾಸ ಆರಂಭಿಸಲಿದ್ದಾರೆ.
    | ಶಾಂತಗೌಡ ಪಾಟೀಲ್ ಡಿಡಿಪಿಐ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts