More

    ಜಿಲ್ಲೆಯ ವಿವಿಧೆಡೆ ಗಾಳಿ ಮಳೆ

    ಹುಬ್ಬಳ್ಳಿ/ಧಾರವಾಡ: ವಾಡಿಕೆ ಮುಂಗಾರು ಆರಂಭಕ್ಕೆ ಇನ್ನೂ ಒಂದು ವಾರವಿರುವಾಗಲೇ ಭಾನುವಾರ ಸಂಜೆ ಧಾರವಾಡ ಜಿಲ್ಲೆಯ ವಿವಿಧೆಡೆ ಮಳೆ ಸುರಿಯಿತು.

    ಬೆಳಗ್ಗೆಯಿಂದ ಮೋಡ ಮುಸುಕಿದ ವಾತಾವರಣ ಇದ್ದು, ಮಳೆ ಬರುವುದು ನಿರೀಕ್ಷಿತವಾಗಿತ್ತು. ಆಗೊಮ್ಮೆ ಈಗೊಮ್ಮೆ ಎಂದು ಕೆಲವು ಗಂಟೆ ಕಾಲ ಮಳೆಯಾಗಿದೆ. ಮಿಂಚು, ಗುಡುಗು, ಮೋಡದ ವಾತಾವರಣ ಮುಂದುವರಿದಿದ್ದು, ಸೋಮವಾರವೂ ಮಳೆಯಾಗುವ ಸಾಧ್ಯತೆಯಿದೆ.

    ಅಲ್ಲಲ್ಲಿ ಗಾಳಿ ಬೀಸಿದ ಪರಿಣಾಮ ಮರದ ಟೊಂಗೆ ಮುರಿದುಬಿದ್ದು ಅಲ್ಪಸ್ವಲ್ಪ ಹಾನಿಯಾಗಿರುವ ಘಟನೆಗಳು ಸಂಭವಿಸಿದೆ. ಹುಬ್ಬಳ್ಳಿ ನವನಗರ ಭಾಗದಲ್ಲಿ ಜೋರಾಗಿ ಗಾಳಿ ಬೀಸಿದ್ದರಿಂದ ಐದಾರು ಮರದ ಟೊಂಗೆಗಳು ಮುರಿದುಬಿದ್ದು, ತಾತ್ಕಾಲಿಕವಾಗಿ ರಸ್ತೆ ಬಂದ್ ಆಗಿತ್ತು. ಧಾರವಾಡದಲ್ಲಿ ಜಿಟಜಿಟಿ ಮಳೆಯಿಂದ ಚರಂಡಿಗಳು ತುಂಬಿ ಹರಿದವಾದರೂ ಎಲ್ಲಿಯೂ ಗಂಭೀರ ಹಾನಿಯಾಗಿಲ್ಲ.

    ಗ್ರಾಮೀಣ ಪ್ರದೇಶದಲ್ಲೂ ಮಧ್ಯಾಹ್ನದಿಂದ ಮೋಡ ಮುಸುಕಿದ ವಾತಾವರಣವಿತ್ತು. ಮುಂಗಾರು ಬಿತ್ತನೆಗೆ ಜಮೀನುಗಳನ್ನು ಸಿದ್ಧ ಮಾಡಿಕೊಂಡು ಮಳೆಗಾಗಿ ಕಾದು ಕುಳಿತಿರುವ ರೈತರು ಉತ್ತಮ ಮಳೆಯ ನಿರೀಕ್ಷೆಯಲ್ಲಿದ್ದಾರೆ. ನಗರದಲ್ಲಿ ಮಳೆಯ ದರ್ಶನವಾಗಿರುವುದು ಉತ್ತಮ ಮುಂಗಾರಿನ ನಿರೀಕ್ಷೆ ಹೆಚ್ಚಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts