More

    ಜಿಲ್ಲೆಯ ಜನತೆಗೆ ಕೊಂಚ ನಿರಾಳ

    ಗದಗ: ದೆಹಲಿಯ ಬಾಂಗ್ಲಾವಾಲೆ ತಬ್ಲೀಖ್ ಜಮಾತ್ ವತಿಯಿಂದ ಆಯೋಜಿಸಿದ್ದ ಧಾರ್ವಿುಕ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ನಗರದ ಆರು ಜನರ ವೈದ್ಯಕೀಯ ವರದಿ ನೆಗೆಟಿವ್ ಬಂದಿದ್ದು, ಇದರೊಂದಿಗೆ ಮುದ್ರಣ ಕಾಶಿಯ ಜನರು ನಿಟ್ಟುಸಿರು ಬಿಟ್ಟಿದ್ದಾರೆ.

    ಮಂಗಳವಾರ ಸಂಜೆ ನಗರದ ಆರು ಜನರು ದೆಹಲಿಯ ಧಾರ್ವಿುಕ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ಬೆಳಕಿಗೆ ಬಂದಿತ್ತು. ಮಾಹಿತಿ ಸಿಕ್ಕ ತಕ್ಷಣ ಆರು ಜನರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಅವರ ಗಂಟಲು ದ್ರವ ಮತ್ತು ರಕ್ತದ ಮಾದರಿಯನ್ನು ಪರೀಕ್ಷೆಗೆ ಕಳಿಸಲಾಗಿತ್ತು.

    ಈ ಆರು ಜನರು ಕಳೆದ 15 ದಿನಗಳಿಂದ ನಗರದಲ್ಲಿ ವಾಸಿಸುತ್ತಿದ್ದು, ಈ ಅವಧಿಯಲ್ಲಿ ಅವರ ಸಂಪರ್ಕಕ್ಕೆ ಎಷ್ಟು ಜನರು ಬಂದಿದ್ದಾರೆ. ಅವರ ಕುಟುಂಬದವರು ಸೇರಿ ನೆರೆಹೊರೆಯವರು, ಸ್ನೇಹಿತರು, ನೆಂಟರು ಹೀಗೆ ಎಷ್ಟು ಜನರನ್ನು ಇವರು ಸಂರ್ಪಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಬೇಕಿದೆ. ಈ ಕುರಿತು ಮಂಗಳವಾರ ರಾತ್ರಿಯಿಂದಲೇ ಜಿಲ್ಲಾಡಳಿತ ಕಾರ್ಯಾಚರಣೆ ಆರಂಭಿಸಿದೆ. ಸದ್ಯ ಆರು ಜನರನ್ನು ನಗರದ ಜಿಲ್ಲಾಸ್ಪತ್ರೆಯಲ್ಲಿ ದಾಖಲಿಸಲಾಗಿದೆ.

    ಇದಲ್ಲದೆ, ನರಗುಂದ ತಾಲೂಕಿನಲ್ಲಿ ಮೂವರು ದೆಹಲಿಯ ಧಾರ್ವಿುಕ ಕಾರ್ಯಕ್ರಮದಲ್ಲಿ ಭಾಗವಹಿಸಿ ಬಂದಿದ್ದಾರೆ. ಅದರೂ ಈ ಬಗ್ಗೆ ಯಾರಿಗೂ ಮಾಹಿತಿ ನೀಡಿಲ್ಲ. ಮಂಗಳವಾರ ರಾತ್ರಿ ಆ ಮೂವರನ್ನು ವಶಕ್ಕೆ ಪಡೆದು ಆರೋಗ್ಯ ತಪಾಸಣೆ ಮಾಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

    ನವದೆಹಲಿ ನಿಜಾಮುದ್ದೀನ್ ರೈಲ್ವೆ ನಿಲ್ದಾಣ ಪಕ್ಕದಲ್ಲಿರುವ ಐತಿಹಾಸಿಕ ಬಾಂಗ್ಲಾವಲಿ ಮಸೀದಿಯಲ್ಲಿ ನಡೆದಿದ್ದ ತಬ್ಲೀಖ್ ಜಮಾತ್​ನವರು ಮಾ.13, 14 ಮತ್ತು 15ರಂದು ಆಯೋಜಿಸಿದ್ದ ಇಸ್ತಿಮಾದಲ್ಲಿ ಇವರು ಪಾಲ್ಗೊಂಡಿದ್ದರು. ಗದಗ ಬೆಟಗೇರಿಯ ಆರು ಜನರು, ನರಗುಂದ ಪಟ್ಟಣ ಒಬ್ಬರು ಹಾಗೂ ಕೊಣ್ಣೂರಿನ ಒಬ್ಬರು ದೆಹಲಿಯ ಆಯೋಜಿಸಿದ್ದ ಧಾರ್ವಿುಕ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಇದರಲ್ಲಿ ಗದಗ ನಗರದ ಆರು ಜನರನ್ನು ಜಿಲ್ಲಾಡಳಿತ ಜಿಲ್ಲಾಸ್ಪತ್ರೆಗೆ ದಾಖಲಿಸಿದೆ. ಉಳಿದ ಮೂವರು ನರಗುಂದ ತಾಲೂಕಾಸ್ಪತ್ರೆಯಲ್ಲಿ ದಾಖಲಿಸಿ ಆರೋಗ್ಯ ಪರೀಕ್ಷೆ ನಡೆಸಿ ತೀವ್ರ ನಿಗಾದಲ್ಲಿ ಇರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ನರಗುಂದ ತಾಲೂಕಿನ ಮೂವರು ಫೆ. 29ಕ್ಕೆ ರೈಲು ಮೂಲಕ ದೆಹಲಿಗೆ ತೆರಳಿದ್ದರು. ಮಾ. 13ರ ವರೆಗೆ ದೆಹಲಿಯಲ್ಲಿದ್ದು ಧಾರ್ವಿುಕ ಕಾರ್ಯಕ್ರಮದಲ್ಲಿ ಭಾಗವಹಿಸಿದ ಮೇಲೆ ರೈಲಿನ ಮೂಲಕ ಮರಳಿ ಬೆಳಗಾವಿ, ಹುಬ್ಬಳ್ಳಿ ಮಾರ್ಗದಿಂದ ನರಗುಂದ ತಾಲೂಕಿಗೆ ಆಗಮಿಸಿದ್ದಾರೆ. ಹುಬ್ಬಳ್ಳಿಯಿಂದ ಗದಗ ಗೆ ಬಸ್​ನಲ್ಲಿ ನರಗುಂದ ತಾಲೂಕಿಗೆ ಆಗಮಿಸಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಗದಗ ನಗರದ ಸಹ ದೆಹಲಿಯಿಂದ ಹುಬ್ಬಳ್ಳಿವರೆಗೆ ರೈಲು ಮೂಲಕ ಆಗಮಿಸಿ ನಂತರ ಹುಬ್ಬಳ್ಳಿಯಿಂದ ಗದಗ ಬಸ್ ಬಂದಿದ್ದಾರೆ. ಈ ಎಲ್ಲರೂ ತಮ್ಮ ಸ್ವಗ್ರಾಮಗಳಿಗೆ ಆಗಮಿಸಿ 10 ದಿನಗಳ ಕಳೆದಿದ್ದು, ಕುಟುಂಬಸ್ಥರು, ನೆಂಟರು, ನೆರೆಹೊರೆಯವರು ಹಾಗೂ ಇತ್ಯಾದಿ ಸೇರಿ ನೂರಾರು ಜನರ ಸಂಪರ್ಕದಲ್ಲಿದ್ದಾರೆ. ಸದ್ಯ ಇವರೆಲ್ಲರ ಗಂಟಲ ದ್ರವ, ರಕ್ತದ ಮಾದರಿಯನ್ನು ಪರೀಕ್ಷೆಗಾಗಿ ಕಳುಹಿಸಲಾಗಿದೆ.

    ಜಿಲ್ಲೆಯಲ್ಲಿ ಕರೊನಾ ಸೋಂಕಿತರು: ಜಿಲ್ಲೆಯ ಕರೊನಾ ಪಿಡುಗು ಪ್ರಕರಣಗಳ ಕುರಿತಂತೆ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಅಂಕಿ ಅಂಶ ಬಿಡುಗಡೆ ಮಾಡಿದ್ದಾರೆ. ಇಲ್ಲಿಯವರೆಗೆ ಜಿಲ್ಲೆಯಲ್ಲಿ 205 ಜನರು ನಿಗಾಕ್ಕೆ ಒಳಗಾಗಿದ್ದಾರೆ. 13 ಜನರು 28 ದಿನಗಳ ನಿಗಾ ಅವಧಿ ಪೂರೈಸಿದ್ದಾರೆ. 179 ಜನರನ್ನು ಮನೆಯಲ್ಲಿಯೇ ಪ್ರತ್ಯೇಕ ನಿಗಾದಲ್ಲಿ ಇರಿಸಲಾಗಿದೆ. 13 ಜನರನ್ನು ವೈದ್ಯಕೀಯ ಸೌಲಭ್ಯದೊಂದಿಗೆ ಆಸ್ಪತ್ರೆಯಲ್ಲಿ ಪ್ರತ್ಯೇಕವಾಗಿ ಇರಿಸಲಾಗಿದೆ. ಪರೀಕ್ಷೆಗಾಗಿ 59 ಮಾದರಿಗಳನ್ನು ಸಂಗ್ರಹಿಸಲಾಗಿದ್ದು, ಇದರಲ್ಲಿ 56 ಮಾದರಿಗಳು ನಕಾರಾತ್ಮಕವಾಗಿವೆ. 3 ಮಾದರಿಗಳ ವರದಿ ಬರಬೇಕಿದೆ. ಜಿಲ್ಲೆಯಲ್ಲಿ ಸೋಂಕಿತರು ಇಲ್ಲ…

    22,360 ಮಕ್ಕಳಿಗೆ ಆಹಾರ ಧಾನ್ಯ ವಿತರಣೆ

    ಹೊಳೆಆಲೂರ: ತಾಲೂಕು ವ್ಯಾಪ್ತಿಯ 207 ಶಾಲೆಗಳ 1ರಿಂದ 9ನೇ ತರಗತಿಯ 22,360 ವಿದ್ಯಾರ್ಥಿಗಳಿಗೆ ಅಕ್ಷರ ದಾಸೋಹದ ಮಧ್ಯಾಹ್ನ ಬಿಸಿಯೂಟ ಯೋಜನೆ ಬದಲಾಗಿ ಆಹಾರ ಧಾನ್ಯ ವಿತರಿಸಲಾಯಿತು.

    ಬುಧವಾರ ಹೊಳೆಆಲೂರ ಹೋಬಳಿಯ ಯಚ್ಚರೇಶ್ವರ ಪ್ರಾಥಮಿಕ ಶಾಲೆಯಲ್ಲಿ ತಾಲೂಕು ಅಕ್ಷರ ದಾಸೋಹದ ಸಮಿತಿಯ ನಿರ್ದೇಶಕ ಬಸವರಾಜ ಅಂಗಡಿ ಮಕ್ಕಳಿಗೆ ಆಹಾರ ಧಾನ್ಯವಿತರಿಸಿ ಅವರು ಮಾತನಾಡಿದರು. ಏ. 10ವರೆಗೆ ಶಾಲಾ ತರಗತಿಗಳು ನಡೆದಿದ್ದರೆ ಮಕ್ಕಳಿಗೆ ಮಧ್ಯಾಹ್ನ ಬಿಸಿಯೂಟ ತಯಾರಿಸಬೇಕಾಗಿತ್ತು. ಆದರೆ, ಕರೊನಾ ಕಾರಣದಿಂದ ಎಲ್ಲೆಡೆ ಲಾಕ್​ಡೌನ್ ಆಗಿರುವುದರಿಂದ ಮಾ. 14ರಿಂದ ಏಪ್ರಿಲ್ 10 ರ ವರೆಗೆ ಮಕ್ಕಳಿಗೆ ವೆಚ್ಚ ಮಾಡಬೇಕಾದ 21 ದಿನಗಳ ಆಹಾರ ಧಾನ್ಯ ಹಾಗೆ ಉಳಿದಿದ್ದು, ಅದನ್ನು ಅವರಿಗೆ ಹಂಚಿಕೆ ಮಾಡಲು ಸರ್ಕಾರ ಆದೇಶ ಮಾಡಿದೆ. ಆರ್ಥಿಕವಾಗಿ ಹಿಂದುಳಿದಿರುವ ಮಕ್ಕಳ ಆರೋಗ್ಯ ಕಾಪಾಡುವುದು ಹಾಗೂ ಸಾಮಾಜಿಕ ಕಳಕಳಿಯ ಭಾಗವಾಗಿ ಸರ್ಕಾರ ಈ ಯೋಜನೆ ಅನುಷ್ಠಾನಗೊಳಿಸಿದ್ದು, ತಾಲೂಕಿನ ಎಲ್ಲ 207 ಶಾಲೆಗಳ ಮುಖ್ಯೋಪಾಧ್ಯಾಯರು ಎರಡ್ಮೂರು ದಿನಗಳಲ್ಲಿ ಪ್ರತಿಯೊಂದು ಮಕ್ಕಳ ಪಾಲಕರಿಗೆ ಮಾಹಿತಿ ನೀಡಿ ಪ್ರಾಮಾಣಿವಾಗಿ ಸ್ಪಂದಿಸಿ ಈ ಯೋಜನೆ ಯಶಸ್ವಿಗೊಳಿಸಬೇಕು. 1 ರಿಂದ 5ನೇ ತರಗತಿಯ 29 ಕಿರಿಯ ಪ್ರಾಥಮಿಕ ಶಾಲೆಯ 17,718 ಮಕ್ಕಳು, 1 ರಿಂದ 7ನೇ ತರಗತಿಯ 126 ಹಿರಿಯ ಪ್ರಾಥಮಿಕ ಶಾಲೆಯ 10,562 ಮಕ್ಕಳು, 8 ರಿಂದ 10ನೇ ತರಗತಿಯ 52 ಪ್ರೌಢ ಶಾಲೆಯ 680 ಮಕ್ಕಳಿಗೆ ಆಹಾರ ಧಾನ್ಯವನ್ನು ತ್ವರಿತವಾಗಿ ವಿತರಿಸಬೇಕು ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts