More

    ಜಿಲ್ಲೆಯ ಅಭಿವೃದ್ಧಿಗೆ ಆದ್ಯತೆ

    ಚನ್ನರಾಯಪಟ್ಟಣ: ಜಿಲ್ಲೆಯಲ್ಲಿ ನೀರಾವರಿ, ರೈತರ ಬೆಳೆಗಳಿಗೆ ಬೆಂಬಲ ಬೆಲೆ ಒದಗಿಸುವುದು ಸೇರಿದಂತೆ ಅಭಿವೃದ್ಧಿಗೆ ಆದ್ಯತೆ ನೀಡುವುದಾಗಿ ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಭರವಸೆ ನೀಡಿದರು.

    ಪಟ್ಟಣದಲ್ಲಿ ನೂತನವಾಗಿ ಪ್ರಾರಂಭಗೊಂಡಿರುವ ಶ್ರೀ ಲಕ್ಷ್ಮೀನಾರಾಯಣ ಪೆಟ್ರೋಲ್ ಬಂಕ್‌ಗೆ ಬುಧವಾರ ಚಾಲನೆ ನೀಡಿ, ಉತ್ತಮ ದಾರಿ ಆಯ್ಕೆ ಮಾಡಿಕೊಂಡಲ್ಲಿ ಮಾತ್ರ ಸಾಧನೆಯ ಉತ್ತುಂಗ ಸೇರಲು ಸಾಧ್ಯವಾಗುತ್ತದೆ ಎಂದರು.

    ಜೀವನದಲ್ಲಿ ಏನನ್ನಾದರೂ ಸಾಧಿಸಬೇಕೆಂದರೆ ಛಲದ ಜತೆಗೆ ತಾಳ್ಮೆ ಧೈರ್ಯ ಇರಬೇಕು. ಚನ್ನರಾಯಪಟ್ಟಣ ಹೃದಯ ಶ್ರೀಮಂತಿಕೆಯ ತಾಲೂಕು. ಜಿಲ್ಲೆಯಲ್ಲಿಯೇ ಒಂದು ವೈಶಿಷ್ಟೃತೆಯ ಭಾಗವಾಗಿ ಬೆಳೆಯುತ್ತಿದೆ. ನಾವು ಎಷ್ಟೇ ಅಭಿವೃದ್ಧಿಪಡಿಸಿದರೂ ಇನ್ನೂ ಜನತೆಯ ಬಯಕೆ ಬಹಳಷ್ಟಿದೆ. ನೀರಾವರಿ, ಬೆಳೆಗಳಿಗೆ ಬೆಂಬಲ ಬೆಲೆ ಹಾಗೂ ಅಗತ್ಯ ಮೂಲ ಸೌಕರ್ಯಗಳನ್ನು ಕಲ್ಪಿಸುವಲ್ಲಿ ಹೆಚ್ಚು ಆದ್ಯತೆ ನೀಡಲಾಗುವುದು ಎಂದು ಭರವಸೆ ನೀಡಿದರು.

    ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ಶ್ರೀರಾಮುಲು ಮಾತನಾಡಿ, ನಮ್ಮ ಸನಾತನ ಧರ್ಮ-ಸಂಸ್ಕೃತಿಯಲ್ಲಿ ತಂದೆ-ತಾಯಿ ಹಾಗೂ ಗುರು-ಹಿರಿಯರಿಗೆ ವಿಶೇಷ ಸ್ಥಾನಮಾನ ನೀಡಲಾಗಿದೆ. ಅವರನ್ನು ಗೌರವಿಸದೆ ಬದುಕನ್ನು ಸಾರ್ಥಕ ಪಡಿಸಿಕೊಳ್ಳಲು ಸಾಧ್ಯವಿಲ್ಲ ಎಂದರು.

    ಶಾಸಕ ಸಿ.ಎನ್.ಬಾಲಕೃಷ್ಣ ಮಾತನಾಡಿ, ತಾಲೂಕಿನ ಸರ್ವತೋಮುಖ ಅಭಿವೃದ್ಧಿಗೆ ಇನ್ನೂ ಹೆಚ್ಚಿನ ಅನುದಾನದ ಅಗತ್ಯವಿದ್ದು, ಡಿಸಿಎಂ ಹಾಗೂ ಸಚಿವರು ಇತ್ತ ಗಮನಹರಿಸಬೇಕು. ಜಿಲ್ಲೆಯಲ್ಲಿ ಕೈಗೊಂಡಿರುವ ತಾಲೂಕಿನ ನೀರಾವರಿ ಯೋಜನೆಗಳಿಗೆ ಸಹಕಾರ ನೀಡಿದರೆ ರೈತರ ಬದುಕು ಹಸನಾಗಲಿದೆ. ಪಟ್ಟಣದ ಸಾರ್ವಜನಿಕ ಆಸ್ಪತ್ರೆಯನ್ನು ಮೇಲ್ದರ್ಜೆಗೆ ಏರಿಸಬೇಕು, ಕಟ್ಟಡ ವಿಸ್ತರಣೆ ಹಾಗೂ ಅಗತ್ಯ ಸೌಕರ್ಯಗಳನ್ನು ಕಲ್ಪಿಸಬೇಕು ಎಂದು ಮನವಿ ಮಾಡಿದರು.

    ಕಾಶಿಯ ಶ್ರೀ ದತ್ತಾತ್ರೆಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಎಂಎಲ್ಸಿ ಎಂ.ಎ.ಗೋಪಾಲಸ್ವಾಮಿ, ಎಪಿಎಂಸಿ ನಿರ್ದೇಶಕ ಎಂ.ಶಂಕರ್, ಜೆಡಿಎಸ್ ಮುಖಂಡ ಸೂರಜ್ ರೇವಣ್ಣ, ಆಂಧ್ರ ಪ್ರದೇಶ ಎಂಎಲ್‌ಸಿ ಗಜೇಂದ್ರರೆಡ್ಡಿ, ಶ್ರೀ ಸಾಯಿಬಾಬ ಮಂದಿರದ ಶ್ರೀ ಗುರುಮೂರ್ತಿ ಗುರೂಜಿ, ಬಂಕ್ ಮಾಲೀಕ ನಾಗರತ್ನ ಶೇಖರ್ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts