More

    ಜಿಲ್ಲೆಯಲ್ಲಿ 96 ಜನರಿಗೆ ಪಾಸಿಟಿವ್

    ಹಾವೇರಿ: ಜಿಲ್ಲೆಯಲ್ಲಿ ಅಂಚೆ, ರೈಲ್ವೆ, ಅರಣ್ಯ, ಕೆಎಸ್​ಆರ್​ಟಿಸಿ ನೌಕರರು ಸೇರಿ 96 ಜನರಿಗೆ ಗುರುವಾರ ಕರೊನಾ ದೃಢಪಟ್ಟಿದೆ. 195 ಜನರು ಗುಣವಾಗಿದ್ದು, ಮೂವರು ಮೃತಪಟ್ಟಿದ್ದಾರೆ ಎಂದು ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣನವರ ತಿಳಿಸಿದ್ದಾರೆ.

    ಜಿಲ್ಲೆಯಲ್ಲಿ ಈವರೆಗೆ 2,153 ಪಾಸಿಟಿವ್ ಪ್ರಕರಣಗಳು ದೃಢಪಟ್ಟಿವೆ. ಇಂದಿನವರೆಗೆ 1,474 ಜನರು ಸೋಂಕಿನಿಂದ ಗುಣವಾಗಿ ಬಿಡುಗಡೆ ಹೊಂದಿದ್ದಾರೆ. 46 ಜನರು ಕೋವಿಡ್​ನಿಂದ ಮೃತಪಟ್ಟಿದ್ದಾರೆ. ಒಟ್ಟು 633 ಸಕ್ರಿಯ ಪ್ರಕರಣಗಳಿದ್ದು, ಅದರಲ್ಲಿ 290 ಸೋಂಕಿತರು ಹೋಂ ಐಸೋಲೇಷನ್​ನಲ್ಲಿ, 343 ಸೋಂಕಿತರು ಕೋವಿಡ್ ಕೇರ್ ಆಸ್ಪತ್ರೆ, ಕೋವಿಡ್ ಕೇರ್​ಹೆಲ್ತ್ ಸೆಂಟರ್, ಕೋವಿಡ್ ಕೇರ್ ಸೆಂಟರ್​ಗಳಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ.

    ಗುರುವಾರ ಹಿರೇಕೆರೂರ ತಾಲೂಕಿನ 63, ಹಾವೇರಿ ತಾಲೂಕಿನ 44, ಹಾನಗಲ್ಲ ಹಾಗೂ ಶಿಗ್ಗಾಂವಿ ತಾಲೂಕಿನ ತಲಾ 27, ಸವಣೂರ ತಾಲೂಕಿನ 15, ರಾಣೆಬೆನ್ನೂರ ತಾಲೂಕಿನ 10, ಬ್ಯಾಡಗಿ ತಾಲೂಕಿನ 9 ಜನರು ಗುಣವಾಗಿ ಬಿಡುಗಡೆ ಹೊಂದಿದ್ದಾರೆ.

    ಸೋಂಕಿತರ ವಿವರ: ಹಾವೇರಿ ನಗರದ ವಿವಿಧ ಬಡಾವಣೆಯಲ್ಲಿ 17, ಕನವಳ್ಳಿ 8, ಬೂದಗಟ್ಟಿ 4, ಅಗಡಿ 3, ಯಲಗಚ್ಚ, ಸಂಗೂರ, ಬಸವನಕಟ್ಟಿ, ತಿಮ್ಮಾಪುರ, ಮನ್ನಂಗಿ, ಕೆಸರಳ್ಳಿ, ದೇವಗಿರಿ ಗ್ರಾಮದ ತಲಾ ಒಬ್ಬರಿಗೆ, ರಾಣೆಬೆನ್ನೂರ ನಗರದ 16, ಅರೇಮಲ್ಲಾಪುರ 3, ಇಟಗಿ ಹಾಗೂ ಚಿಕ್ಕಕುರುವತ್ತಿಯಲ್ಲಿ ಒಬ್ಬರಿಗೆ, ಸವಣೂರ ಪಟ್ಟಣದ 5, ತಳ್ಳಿಹಾಳ, ಯಲವಿಗಿತಾಂಡಾ, ತೊಂಡೂರ, ಹುರಳಿಕುಪ್ಪಿಯಲ್ಲಿ ತಲಾ ಒಬ್ಬರಿಗೆ, ಹಿರೇಕೆರೂರ ತಾಲೂಕಿನ ಮೇದೂರು 3, ರಟ್ಟಿಹಳ್ಳಿ, ಸುತ್ತಕೋಟೆ, ಅಣಜಿ, ಮೊಗಹಳ್ಳಿ, ಕಣವಿಸಿದ್ದಗೇರಿ, ಹಿರೇಕೆರೂರ ಪಟ್ಟಣದಲ್ಲಿ ತಲಾ ಒಬ್ಬರಿಗೆ, ಬ್ಯಾಡಗಿ ಪಟ್ಟಣದ 5, ಚಿಕ್ಕಬಾಸೂರ, ಅಗಸನಹಳ್ಳಿಯಲ್ಲಿ ತಲಾ ಒಬ್ಬರಿಗೆ, ಶಿಗ್ಗಾಂವ ಪಟ್ಟಣ ಹಾಗೂ ಕಂಕಣವಾಡದಲ್ಲಿ ತಲಾ 2, ಕಬನೂರ, ಅಂದಲಗಿಯಲ್ಲಿ ತಲಾ ಒಬ್ಬರಿಗೆ, ಹಾನಗಲ್ಲ 2, ಹೊಂಕಣ, ಕಾಡಶೆಟ್ಟಿಹಳ್ಳಿ, ನಿಟಗಿನಕೊಪ್ಪದಲ್ಲಿ ತಲಾ ಒಬ್ಬರಿಗೆ ಸೋಂಕು ದೃಢಪಟ್ಟಿದೆ.

    ಮೂವರ ಸಾವು: ರಾಣೆಬೆನ್ನೂರ ತಾಲೂಕಿನ ಚಿಕ್ಕಕುರುವತ್ತಿಯ 80 ವರ್ಷದ ವೃದ್ಧ ತೀವ್ರ ಉಸಿರಾಟದ ತೊಂದರೆಯಿಂದ ಆ. 12ರಂದು ಜಿಲ್ಲಾಸ್ಪತ್ರೆಗೆ ದಾಖಲಾಗಿ, ಅಂದೇ ಮೃತಪಟ್ಟಿದ್ದಾರೆ. ರಾಣೆಬೆನ್ನೂರ ದೊಡ್ಡಪೇಟೆ ಗರಡಿಮನೆ ನಿವಾಸಿ 50 ವರ್ಷದ ಪುರುಷ ತೀವ್ರ ಉಸಿರಾಟದ ತೊಂದರೆಯಿಂದ ಆ. 9ರಂದು ಜಿಲ್ಲಾಸ್ಪತ್ರೆ ದಾಖಲಾಗಿದ್ದರು. ಈ ವೇಳೆ ರ್ಯಾಪಿಡ್ ಆಂಟಿಜನ್ ಕಿಟ್ ಪರೀಕ್ಷೆಯಲ್ಲಿ ಪಾಸಿಟಿವ್ ದೃಢಪಟ್ಟಿತ್ತು. ಆ. 10ರಂದು ಮೃತಪಟ್ಟಿದ್ದಾರೆ. ಹಿರೇಕೆರೂರ ತಾಲೂಕಿನ ಕಣವಿಸಿದ್ಧಗೇರಿ ಗ್ರಾಮದ 80 ವರ್ಷದ ವೃದ್ಧೆ ತೀವ್ರ ಉಸಿರಾಟದ ತೊಂದರೆಯಿಂದ ಆ. 9ರಂದು ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದರು. ಆ. 13ರಂದು ಮೃತಪಟ್ಟಿದ್ದಾರೆ.

    ಹಾವೇರಿ ತಹಸೀಲ್ದಾರ್ ಕಚೇರಿ ಸೀಲ್​ಡೌನ್

    ಹಾವೇರಿ ತಹಸೀಲ್ದಾರ್ ಕಚೇರಿಯ ಸರ್ವೆ ವಿಭಾಗದ ನೌಕರನಿಗೆ ಗುರುವಾರ ಪಾಸಿಟಿವ್ ಬಂದಿರುವ ಹಿನ್ನೆಲೆಯಲ್ಲಿ ತಹಸೀಲ್ದಾರ್ ಕಚೇರಿಯನ್ನು ಶುಕ್ರವಾರದವರೆಗೆ ಸೀಲ್​ಡೌನ್ ಮಾಡಲಾಗಿದೆ. ಸಾರ್ವಜನಿಕರು 2 ದಿನ ಕಚೇರಿಗೆ ಬರಬಾರದು ಎಂದು ತಹಸೀಲ್ದಾರ್ ಶಂಕರ ಜಿ.ಎಸ್., ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts