More

    ಜಿಲ್ಲೆಯಲ್ಲಿ 12 ದಿನಗಳಲ್ಲಿ 41 ಜನರು ಸಾವು

    ಕಾರವಾರ: ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕರೊನಾ ಪರಿಸ್ಥಿತಿ ಏರುತ್ತಲೇ ಇದೆ. ಕಳೆದ 12 ದಿನಗಳಲ್ಲಿ 2021 ಹೊಸ ಕರೊನಾ ಸೋಂಕಿತರು ಪತ್ತೆಯಾಗಿದೆ. 41 ಜನರು ಮೃತಪಟ್ಟಿದ್ದಾರೆ.

    ಸೆ. 7ರಂದು ಜಿಲ್ಲೆಯ ಕರೊನಾ ಸೋಂಕಿತರ ಸಂಖ್ಯೆ 6089 ಇತ್ತು. 60 ಜನ ಮೃತಪಟ್ಟಿದ್ದರು. ಶನಿವಾರ ಸೋಂಕಿತರ ಸಂಖ್ಯೆ 8110 ಆಗಿದ್ದು, ಮೃತರ ಸಂಖ್ಯೆ 101ಕ್ಕೇರಿದೆ.

    ಒಂದೇ ದಿನ 6 ಸಾವು: ಕಾರವಾರ ಹಾಗೂ ಭಟ್ಕಳದ ತಲಾ ಇಬ್ಬರು, ಹೊನ್ನಾವರ ಹಾಗೂ ಸಿದ್ದಾಪುರದ ತಲಾ ಒಬ್ಬ ಸೇರಿ 6 ಜನರು ಶನಿವಾರ ಕರೊನಾದಿಂದ ಸಾವನ್ನಪ್ಪಿದ ಬಗ್ಗೆ ವರದಿ ನೀಡಲಾಗಿದೆ. ಹಳಿಯಾಳದ 65 ವರ್ಷದ ವೃದ್ಧ, ಅಂಕೋಲಾದ 67 ವರ್ಷದ ವೃದ್ಧೆ ಶನಿವಾರ ಕ್ರಿಮ್್ಸ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು, ವರದಿ ಹೆಲ್ತ್ ಬುಲೆಟಿನ್​ಗೆ ಇನ್ನಷ್ಟೇ ಸೇರ್ಪಡೆಯಾಗಬೇಕಿದೆ.

    ಒಂದೇ ದಿನ 409 ಮಂದಿ ಗುಣ: ಶನಿವಾರ ಒಂದೇ ದಿನ 409 ಮಂದಿ ಕರೊನಾದಿಂದ ಮುಕ್ತರಾಗಿದ್ದಾರೆ. ಕಾರವಾರದಲ್ಲಿ 75, ಅಂಕೋಲಾದಲ್ಲಿ 4, ಕುಮಟಾದಲ್ಲಿ 52, ಹೊನ್ನಾವರದಲ್ಲಿ 5, ಭಟ್ಕಳದಲ್ಲಿ 20, ಶಿರಸಿಯಲ್ಲಿ 1, ಯಲ್ಲಾಪುರದಲ್ಲಿ 120, ಮುಂಡಗೋಡದಲ್ಲಿ 74, ಹಳಿಯಾಳದಲ್ಲಿ 58 ಜನ ಕರೊನಾದಿಂದ ಗುಣವಾಗಿದ್ದಾರೆ.

    ಕಾರವಾರದಲ್ಲಿ 28, ಅಂಕೋಲಾದಲ್ಲಿ 5, ಕುಮಟಾದಲ್ಲಿ 32, ಹೊನ್ನಾವರ ಹಾಗೂ ಭಟ್ಕಳದಲ್ಲಿ ತಲಾ 18, ಶಿರಸಿಯಲ್ಲಿ 24, ಸಿದ್ದಾಪುರದಲ್ಲಿ 8, ಯಲ್ಲಾಪುರದಲ್ಲಿ 15, ಮುಂಡಗೋಡದಲ್ಲಿ 5, ಹಳಿಯಾಳ ಹಾಗೂ ದಾಂಡೇಲಿ ಸೇರಿ 12, ಜೊಯಿಡಾದಲ್ಲಿ 10 ಸೇರಿ ಶನಿವಾರ 175 ಜನರಿಗೆ ಕರೊನಾ ಸೋಂಕು ಪತ್ತೆಯಾಗಿದೆ. ಜಿಲ್ಲೆಯಲ್ಲಿ ಒಟ್ಟಾರೆ 2137 ಸಕ್ರಿಯ ಕರೊನಾ ಪ್ರಕರಣಗಳಿದ್ದು, 1030 ಜನರು ಆಸ್ಪತ್ರೆ ಹಾಗೂ ಕರೊನಾ ಕೇರ್ ಸೆಂಟರ್​ಗಳಲ್ಲಿದ್ದರೆ, 1170 ಜನರು ಮನೆಯಲ್ಲೇ ಇದ್ದಾರೆ.

    ಪರೀಕ್ಷೆ ಪ್ರಮಾಣ ಹೆಚ್ಚಳ: ಜಿಲ್ಲೆಯಲ್ಲಿ ಕರೊನಾ ಸೋಂಕಿತರ ಸಂಖ್ಯೆ ಹೆಚ್ಚಲು ಪರೀಕ್ಷೆ ಪ್ರಮಾಣ ಹೆಚ್ಚಿಸಿರುವುದೂ ಒಂದು ಕಾರಣ. ತಿಂಗಳ ಹಿಂದೆ ಜಿಲ್ಲೆಯಲ್ಲಿ ದಿನಕ್ಕೆ 600ರಷ್ಟು ಶಂಕಿತರ ಗಂಟಲ ದ್ರವ ಪರೀಕ್ಷೆ ಮಾಡಲಾಗುತ್ತಿತ್ತು. ಈಗ ದಿನಕ್ಕೆ 1500ರಿಂದ 2000 ಪರೀಕ್ಷೆ ನಡೆಸಲಾಗುತ್ತಿದೆ. ಸರಾಸರಿ 100ರಿಂದ 200 ಜನರಿಗೆ ಸೋಂಕು ಕಂಡುಬರುತ್ತಿದೆ. ಇದರಿಂದ ಸೋಂಕಿನ ಪ್ರಮಾಣ ದ್ವಿಗುಣಗೊಂಡಿದೆ ಎಂದು ಹೇಳಲಾಗದು ಎಂದೂ ತಜ್ಞರು ವಿಶ್ಲೇಷಿಸುತ್ತಾರೆ.

    ಗ್ರಾಮೀಣ ಭಾಗದಲ್ಲೂ ದಂಡ: ಮಾಸ್ಕ್ ಧರಿಸದೇ ಇದ್ದಲ್ಲಿ ಗ್ರಾಮೀಣ ಭಾಗದಲ್ಲೂ ದಂಡ ವಿಧಿಸುವ ಕ್ರಮವಾಗಬೇಕು ಎಂದು ಜಿಲ್ಲಾಧಿಕಾರಿ ಡಾ. ಹರೀಶ ಕುಮಾರ ಕೆ. ತಿಳಿಸಿದ್ದಾರೆ. ಜಿಲ್ಲಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ಜಿಲ್ಲೆಯ ಎಸಿ, ತಹಸೀಲ್ದಾರರ ಜತೆ ವಿಡಿಯೋ ಸಂವಾದದಲ್ಲಿ ಅವರು ಮಾತನಾಡಿದರು. ಎಲ್ಲೆಡೆ ಮಾಸ್ಕ್ ಕಡ್ಡಾಯ ಮಾಡಲಾಗಿದ್ದು, ಕಟ್ಟುನಿಟ್ಟಿನ ಕ್ರಮವನ್ನು ಗ್ರಾಪಂ ಹಂತದಲ್ಲೂ ಕೈಗೊಳ್ಳಿ ಎಂದು ಸೂಚಿಸಿದರು. ಎಲ್ಲ ರೋಗಿಗಳನ್ನು ಕಾರವಾರಕ್ಕೆ ಕಳಿಸದೇ ಆನ್​ಲೈನ್​ನಲ್ಲಿ ತಜ್ಞರ ಸಲಹೆ ಪಡೆದು ಅಲ್ಲಲ್ಲೇ ಚಿಕಿತ್ಸೆ ನೀಡಬೇಕು ಎಂದರು.

    ಕರೊನಾದಿಂದ ಮೃತಪಟ್ಟ ಬಹುತೇಕರಿಗೆ ಬೇರೆ ರೋಗಗಳಿದ್ದವು. ಮಧುಮೇಹ, ಕ್ಯಾನ್ಸರ್, ಹೃದಯ ಸಂಬಂಧಿ ಕಾಯಿಲೆ, ಕಿಡ್ನಿ ತೊಂದರೆ ಇದ್ದವರು ಸಾವನ್ನಪ್ಪಿದ್ದಾರೆ. ಯಾವುದೇ ರೋಗ ಇಲ್ಲದವರು ಮೃತಪಟ್ಟ ಉದಾಹರಣೆಗಳು ತೀರ ಕಡಿಮೆ. ಇದರಿಂದ ಜನ ಆತಂಕಪಡುವ ಅವಶ್ಯಕತೆ ಇಲ್ಲ. ಆದರೆ, ವೃದ್ಧರು, ಇತರ ರೋಗಪೀಡಿತರು ತೀವ್ರ ಎಚ್ಚರಿಕೆ ವಹಿಸಬೇಕು.

    ಡಾ. ಗಜಾನನ ನಾಯಕ, ಕ್ರಿಮ್್ಸ ನಿರ್ದೇಶಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts