More

    ಜಿಲ್ಲೆಯಲ್ಲಿ ವರದಾ ಸಿರಿ ಯೋಜನೆ ಜಾರಿ

    ಹಾವೇರಿ: ಪರಿಸರ ವೈಪರೀತ್ಯದಿಂದಾಗಿ ನಾವು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ. ಜಿಲ್ಲೆಯಲ್ಲಿ ವರದಾ ಸಿರಿ ಎಂಬ ಹೊಸ ಯೋಜನೆ ರೂಪಿಸಿ ಹಸರೀಕರಣ ಮಾಡುವ ಗುರಿ ಹಾಕಿಕೊಳ್ಳಲಾಗಿದೆ ಎಂದು ಜಿಪಂ ಸಿಇಒ ರಮೇಶ ದೇಸಾಯಿ ತಿಳಿಸಿದರು.

    ವಿಶ್ವ ಪರಿಸರ ದಿನಾಚರಣೆ ನಿಮಿತ್ತ ನಗರದ ನಂದಿ ಲೇಔಟ್ ಪಾರ್ಕ್​ನಲ್ಲಿ ಶುಕ್ರವಾರ ಅರಣ್ಯ ಇಲಾಖೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ವರದಾ ನದಿಯ ದಂಡೆಯಲ್ಲಿ 123ಕಿಮೀ ಸಸಿ ನೆಡುವುದು ಮತ್ತು ನದಿ ದಡದಲ್ಲಿ ರೈತರ ಸಹಭಾಗಿತ್ವದಲ್ಲಿ ಬದು, ಕೃಷಿ ಹೊಂಡ ನಿರ್ವಣ, ರೈತರ ಹೊಲದಲ್ಲಿ ಸಸಿ ಹಚ್ಚುವ ಕೆಲಸ ಮಾಡಲಾಗುತ್ತಿದೆ. ಜಿಲ್ಲೆಯಲ್ಲಿ ಒತ್ತುವರಿಯಾಗಿದ್ದ 2,600ಜಲಮೂಲಗಳನ್ನು ಗುರುತಿಸಿ ಜಿಪಿಎಸ್ ಮಾಡಿಕೊಂಡು ಪ್ಲ್ಯಾನ್ ಮಾಡಲಾಗಿದೆ. ಎತ್ತರ ಪ್ರದೇಶದ ನೀರಿನ ಮೂಲ ಮತ್ತು ಕೆಳಮಟ್ಟದ ನೀರಿನ ಮೂಲಗಳನ್ನು ಈಗಾಗಲೇ ಗುರುತಿಸಿ 23ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ನರೇಗಾ ಯೋಜನೆ ರೂಪಿಸಲಾಗಿದೆ ಎಂದರು.

    ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಾಸಕ ನೆಹರು ಓಲೇಕಾರ, ಇತ್ತೀಚಿನ ದಿನಗಳಲ್ಲಿ ಅಭಿವೃದ್ಧಿಯ ನೆಪದಲ್ಲಿ ಅರಣ್ಯ ನಾಶವಾಗುತ್ತಿದೆ. ಇದರಿಂದ ಪರಿಸರದಲ್ಲಿ ಅಸಮತೋಲನ ಉಂಟಾಗುತ್ತಿದೆ. ಮನುಷ್ಯ ಸೇರಿದಂತೆ ಪ್ರಾಣಿ, ಪಕ್ಷಿ ಸಂಕುಲಕ್ಕೂ ತೊಂದರೆಯಾಗುತ್ತಿದೆ. ಹೀಗಾಗಿ ಪರಿಸರ ನಾಶವನ್ನು ತಡೆಯಬೇಕು. ಅರಣ್ಯ ಇಲಾಖೆ ನಗರವನ್ನು ಹಸರೀಕರಣ ಮಾಡುವ ನಿಟ್ಟಿನಲ್ಲಿ ಕಾರ್ಯಕ್ರಮ ಹಾಕಿಕೊಂಡಿದೆ. ಈ ಕಾರ್ಯಕ್ಕೆ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದರು.

    ಡಿಎಫ್​ಒ ಎನ್.ಇ. ಕ್ರಾಂತಿ ಮಾತನಾಡಿದರು. ಎಎಸ್​ಪಿ ಮಲ್ಲಿಕಾರ್ಜುನ ಬಾಲದಂಡಿ, ಡಿವೈಎಸ್​ಪಿ ವಿಜಯಕುಮಾರ ಸಂತೋಷ, ಡಿಎಫ್​ಒ ಕೆ. ದಯಾನಂದ, ಎಸಿಎಫ್ ಅಶೋಕ ಗೊಂಡೆ, ಆರ್​ಎಫ್​ಒ ಮಂಜುನಾಥ ಬಾಗೇವಾಡಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶಿವಕುಮಾರ ಸಂಗೂರ, ನಗರಸಭೆ ಆಯುಕ್ತ ಬಸವರಾಜ ಜಿದ್ದಿ, ಪರಿಸರ ಅಧಿಕಾರಿ ಮಹೇಶ್ವರಪ್ಪ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts