More

    ಜಿಲ್ಲೆಯಲ್ಲಿ ಮಳೆಯಿಂದಾದ ಹಾನಿ ಪರಿಶೀಲನೆ

    ಗದಗ: ಜಿಲ್ಲೆಯಲ್ಲಿ ಅತಿವೃಷ್ಟಿಯಿಂದಾದ ಹಾನಿ ಅಧ್ಯಯನಕ್ಕಾಗಿ ಕೇಂದ್ರ ಸರ್ಕಾರದ ಅಧಿಕಾರಿಗಳ ಅಧ್ಯಯನ ತಂಡ ಗುರುವಾರ ಜಿಲ್ಲೆಯ ವಿವಿಧ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿತು.
    ಕೇಂದ್ರ ಜಲಶಕ್ತಿ ಮಂತ್ರಾಲಯದ ಅಶೋಕ ಕುಮಾರ, ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಮಂತ್ರಾಲಯದ ಅಧೀಕ್ಷಕ ಇಂಜಿನಿಯರ್ ವಿ.ವಿ.ಶಾಸ್ತ್ರಿ ಹಾಗೂ ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಹಿರಿಯ ಸಲಹೆಗಾರ ಡಾ.ಜಿ.ಎಸ್. ಶ್ರೀನಿವಾಸ ರೆಡ್ಡಿ ಅವರು ತಂಡದಲ್ಲಿದ್ದರು.
    ತಂಡವು ಹೊಂಬಳದ ಹೊರವಲಯದಲ್ಲಿನ ಅಣ್ಣಪ್ಪ ಕಬ್ಬಿಣ ಎಂಬá-ವವರ ಸೂರ್ಯಕಾಂತಿ, ಮೆಕ್ಕೆಜೋಳ ಹಾಗೂ ಶೇಂಗಾ ಬೆಳೆ ಪರಿಶೀಲಿಸಿತು. ಭಾರಿ ಮಳೆಯಿಂದಾಗಿ ಹಾನಿಯಾದ ಮನೆ, ಬೆಳೆ, ರಸ್ತೆ ಹಾನಿ ಕುರಿತು ಈಗಾಗಲೆ ಜಿಲ್ಲಾಡಳಿತ ವರದಿ ಸಲ್ಲಿಸಿದೆ. ಕಳೆದ ಎರಡು ಮೂರು ದಿನಗಳಲ್ಲಿ ಮತ್ತಷ್ಟು ಹಾನಿ ಸಂಭವಿಸಿದ್ದು ಸಮೀಕ್ಷೆ ನಡೆಸಿ ಜಿಲ್ಲಾಡಳಿತ ಮತ್ತೆ ವರದಿ ಸಲ್ಲಿಸಲಿದೆ. ಹಾನಿ ಅಧ್ಯಯನದ ವರದಿಯನ್ನು ಮುಂದಿನ ಹತ್ತು ದಿನಗೊಳಗಾಗಿ ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ಅಧಿಕಾರಿಗಳು ರೈತರಿಗೆ ತಿಳಿಸಿದರು.
    ಹೊಂಬಳ-ಹಿರೇಹಂದಿಗೋಳ ಸಂಪರ್ಕ ರಸ್ತೆ ಹಾಗೂ ಬೆಳೆ ಹಾನಿ, ಗದಗ ನಗರದ ಬಸವೇಶ್ವರ ವೃತ್ತದಲ್ಲಿ ಅಂಗಡಿ, ಮನೆಗಳಿಗೆ ಮಳೆ ನೀರು ನುಗ್ಗಿದ್ದನ್ನು ವೀಕ್ಷಿಸಿದರು. ಕಳಸಾಪೂರ, ನಾಗಾವಿ, ಮಾಗಡಿ ಹಾಗೂ ಶೆಟ್ಟಿಕೇರಿಯಲ್ಲಿ ಮಳೆಯಿಂದಾಗಿ ಹಾನಿಗಿಡಾದ ರಸ್ತೆ, ನಾಗಾವಿಯಲ್ಲಿ ಕೃಷಿ, ತೋಟಗಾರಿಕೆ ಬೆಳೆ, ರಸ್ತೆ, ಶಾಲೆ, ಅಂಗನವಾಡಿ ಕಟ್ಟಡ ಮತ್ತು ಮನೆ ಹಾನಿ ಪರಿಶೀಲಿಸಿದರು.
    ಗೊಜನೂರ ಯತ್ನಳ್ಳಿ ಮಾರ್ಗ ಮಧ್ಯೆ ಬೆಳೆ ಹಾಗೂ ಸೇತುವೆ ಹಾನಿಗೊಳಗಾದ ಬಗ್ಗೆ ವೀಕ್ಷಿಸಿದರು. ನಂತರ ಲಕ್ಷೆ್ಮೕಶ್ವರದಲ್ಲಿ ರಸ್ತೆ ದುರಸ್ತಿ, ಶಾಲಾ ಕಟ್ಟಡ ಹಾನಿ ಕುರಿತು ಪರಿಶೀಲಿಸಿದರು. ಈ ವೇಳೆ ಸ್ಥಳೀಯ ಅಧಿಕಾರಿಗಳು, ಸಂಬಂಧಿತ ಇಲಾಖಾ ಅಧಿಕಾರಿಗಳು ಕೇಂದ್ರ ಅಧ್ಯಯನ ತಂಡಕ್ಕೆ ಮಾಹಿತಿ ನೀಡಿದರು. ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್, ಜಿಪಂ ಸಿಇಒ ಡಾ.ಸುಶೀಲಾ ಬಿ ಅವರು ಕೇಂದ್ರ ಅಧ್ಯಯನ ತಂಡಕ್ಕೆ ಮನವರಿಕೆ ಮಾಡಿಕೊಟ್ಟರು. ಅಪರ ಜಿಲ್ಲಾಧಿಕಾರಿ ಅನ್ನಪೂರ್ಣ, ತಹಸೀಲ್ದಾರ್ ಕಿಶನ್ ಕಲಾಲ, ಜಂಟಿ ಕೃಷಿ ನಿರ್ದೇಶಕ ಜಿಯಾವುಲ್ಲಾ ಕೆ, ತೋಟಗಾರಿಕೆ ಉಪನಿರ್ದೇಶಕ ಶಶಿಕಾಂತ ಕೋಟಿಮನಿ, ಕೃಷಿ ಇಲಾಖೆ ಉಪನಿರ್ದೇಶಕ ಕರಿಯಲ್ಲಪ್ಪ ಕೊರಚರ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.
    ತರಾತá-ರಿಯಲ್ಲಿ ವೀಕ್ಷಣೆ: ಕೇಂದ್ರ ಸರ್ಕಾರದ ಅಧಿಕಾರಿಗಳ ಅಧ್ಯಯನ ತಂಡ ಗುರುವಾರ ಬೆಳಗ್ಗೆ 11ಕ್ಕೆ ಹಾನಿಗೊಳಗಾದ ಪ್ರದೇಶಕ್ಕೆ ಭೇಟಿ ನೀಡಲಿದೆ ಎಂದು ಜಿಲ್ಲಾಡಳಿತ ತಿಳಿಸಿತ್ತು. ಆದರೆ, ಮಧ್ಯಾಹ್ನ 3 ಗಂಟೆಗೆ ತಂಡ ಜಿಲ್ಲೆಗೆ ಆಗಮಿಸಿತು. ತಂಡ ಬರುವುದು ತಡವಾಗಿದ್ದರಿಂದ ಕಾದು ಕಾದು ಸುಸ್ತಾದ ಕೆಲ ರೈತರು ಮನೆ ಕಡೆಗೆ ಹೆಜ್ಜೆ ಹಾಕಿದರು. ತಡವಾಗಿ ಬಂದ ತಂಡ ತರಾತುರಿಯಲ್ಲಿ ವೀಕ್ಷಣೆ ಮಾಡಿತು. ಅವರಸದಲ್ಲಿದ್ದ ತಂಡ ಸ್ಥಳದಲ್ಲಿರುವ ಕೆಲ ರೈತರ ಸಮಸ್ಯೆ ಆಲಿಸಿತು. ಗದಗ ತಾಲೂಕಿನ ಹೊಂಬಳ, ನಾಗಾವಿ ಹಾಗೂ ಲಕ್ಷೆ್ಮೕಶ್ವರ ತಾಲೂಕಿನಲ್ಲಿಯೂ ಹೀಗೆ ವೀಕ್ಷಿಸಿ ತಂಡ ತೆರಳಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts