More

    ಜಿಲ್ಲೆಯಲ್ಲಿ ಕರೊನಾ ಮಹಾಸ್ಪೋಟ

    ಧಾರವಾಡ: ಕೆಲ ದಿನಗಳಿಂದ ನಿರಾಳರಾಗಿದ್ದ ಜಿಲ್ಲೆಯ ಜನತೆ ಕರೊನಾ ಸೋಂಕು ದೃಢಪಟ್ಟವರ ಸಂಖ್ಯೆ ಕೇಳಿ ಬೆಚ್ಚಿ ಬೀಳುವಂತಾಗಿದೆ. ಶುಕ್ರವಾರ ಒಂದೇ ದಿನ 19 ಕೋವಿಡ್ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ಬಾಧಿತರು ಅಂತಾರಾಜ್ಯ ಹಾಗೂ ಅಂತರ ಜಿಲ್ಲೆಯ ಪ್ರಯಾಣ ಹಿನ್ನೆಲೆ ಹೊಂದಿದ್ದಾರೆ.

    ಪ್ರಯಾಣ ಮಾಹಿತಿ: 34 ವರ್ಷದ ಮಹಿಳೆ ಮಹಾರಾಷ್ಟ್ರದಿಂದ ಆಗಮಿಸಿದ್ದು ನೇರವಾಗಿ ಕಿಮ್ಸ್​ನಲ್ಲಿ ದಾಖಲಾಗಿದ್ದರು. 72 ವರ್ಷದ ಮಹಿಳೆ ಹಾವೇರಿ ಜಿಲ್ಲೆಯವರಾಗಿದ್ದು, ಕಿಮ್ಸ್​ನಲ್ಲಿ ದಾಖಲಾಗಿದ್ದರು. 37 ವರ್ಷದ ಪುರುಷ ಹುಬ್ಬಳ್ಳಿ ನವನಗರ ನಿವಾಸಿ. ಇವರು ಚಿತ್ರದುರ್ಗ ಜಿಲ್ಲೆ ಪ್ರಯಾಣ ಹಿನ್ನೆಲೆ ಹೊಂದಿದ್ದಾರೆ. ಹುಬ್ಬಳ್ಳಿ ಕೃಷಿ ಕಾರ್ವಿುಕರ ನಗರದ 40 ವರ್ಷದ ಪುರುಷ, ಉಣಕಲ್ ಸಾಯಿನಗರದ 49 ವರ್ಷದ ಪುರುಷ, ಹುಬ್ಬಳ್ಳಿ ನೇಕಾರ ನಗರದ 63 ವರ್ಷದ ಪುರುಷ, ಉಣಕಲ್​ನ 71 ವರ್ಷ ಮಹಿಳೆ ನೆಗಡಿ, ಕೆಮ್ಮು ಹಾಗೂ ತೀವ್ರ ಜ್ವರ ಹಿನ್ನೆಲೆ ಹೊಂದಿದ್ದಾರೆ.

    70 ವರ್ಷದ ಪುರುಷ ಹಾಗೂ 62 ವರ್ಷದ ಮಹಿಳೆ ಮಹಾರಾಷ್ಟ್ರದಿಂದ ಆಗಮಿಸಿ ನೇರವಾಗಿ ಕಿಮ್ಸ್​ನಲ್ಲಿ ದಾಖಲಾಗಿದ್ದರು. ಧಾರವಾಡ ಯಾಲಕ್ಕಿ ಶೆಟ್ಟರ್ ಕಾಲನಿಯ 34 ವರ್ಷದ ಪುರುಷನೊಬ್ಬನಿಗೆ ಕರೊನಾ ಬಂದಿದೆ. ಈತ ಜೂ. 10ರಂದು ಕರೊನಾ ದೃಢಪಟ್ಟಿದ್ದ 31 ವರ್ಷದ ಮಹಿಳೆಯ ಸಂಪರ್ಕ ಹೊಂದಿದ್ದಾರೆ.

    ಹುಬ್ಬಳ್ಳಿ ಗಣೇಶಪೇಟೆ ಕರ್ವೆ ಪ್ಲಾಜಾ ನಿವಾಸಿಗಳಾದ 50 ವರ್ಷದ ಪುರುಷ ಕೋಲಾರ ಹಾಗೂ ಬೆಂಗಳೂರು ಪ್ರಯಾಣ ಹಿನ್ನೆಲೆ ಹೊಂದಿದ್ದು, 46 ವರ್ಷದ ಪುರುಷ ತಮಿಳುನಾಡಿನಿಂದ ಆಗಮಿಸಿದ ಹಿನ್ನೆಲೆ ಹೊಂದಿದ್ದಾರೆ.

    ಮಹಾರಾಷ್ಟ್ರದಿಂದ ಆಗಮಿಸಿ ಹುಬ್ಬಳ್ಳಿ ಗೋಕುಲ ರಸ್ತೆ ರವಿ ನಗರದಲ್ಲಿ ಹೋಂ ಕ್ವಾರಂಟೈನ್​ನಲ್ಲಿದ್ದ 33 ವರ್ಷದ ಮಹಿಳೆ ಹಾಗೂ 12 ವರ್ಷ ಬಾಲಕಿಯಲ್ಲಿ ಕೋವಿಡ್ ಸೋಂಕು ದೃಢಪಟ್ಟಿದೆ.

    33 ವರ್ಷದ ಮಹಿಳೆ ಮಹಾರಾಷ್ಟ್ರ ಪ್ರವಾಸ ಹಿನ್ನೆಲೆ ಹಾಗೂ 75 ವರ್ಷದ ಮಹಿಳೆ ತುಮಕೂರು ಜಿಲ್ಲೆಯ ಪ್ರವಾಸ, 35 ವರ್ಷದ ಪುರುಷ ಗುಜರಾತ್​ನಿಂದ ಆಗಮಿಸಿದ ಹಿನ್ನೆಲೆ ಹೊಂದಿದ್ದಾರೆ. ಈ ಮೂವರು ಸಾಂಸ್ಥಿಕ ಕ್ವಾರಂಟೈನ್​ನಲ್ಲಿದ್ದರು. ಹುಬ್ಬಳ್ಳಿ ಆನಂದ ನಗರದ 28 ವರ್ಷದ ಪುರುಷ ಗೋವಾದಿಂದ ಆಗಮಿಸಿದ ಹಿನ್ನೆಲೆ ಹೊಂದಿದ್ದಾರೆ.

    6 ತಿಂಗಳ ಮಗುವಿಗೆ ವೈರಸ್

    ಹುಬ್ಬಳ್ಳಿಯ ಭೈರಿದೇವರಕೊಪ್ಪದಲ್ಲಿಯ ಸನಾ ಕಾಲೇಜು ಹಿಂಭಾಗದ ನಿವಾಸಿ 6 ತಿಂಗಳ ಗಂಡು ಮಗುವಿನಲ್ಲಿ ಕರೊನಾ ಸೋಂಕು ದೃಢಪಟ್ಟಿದೆ. ಜೂ. 10ರಂದು ಇದೇ ವಿಳಾಸದ 29 ವರ್ಷದ ಮಹಿಳೆಯಲ್ಲಿ ಕರೊನಾ ದೃಢಪಟ್ಟಿತ್ತು. ಈ ಮಹಿಳೆಯ ಸಂಪರ್ಕದಿಂದ ಮಗುವಿಗೂ ಬಾಧಿಸಿದೆ.

    ಇಬ್ಬರು ಚೇತರಿಕೆ, ಬಿಡುಗಡೆ

    ಕೋವಿಡ್​ನಿಂದ ಚೇತರಿಸಿಕೊಂಡಿರುವ 24 ವರ್ಷದ ಪುರುಷ ಹಾಗೂ 53 ವರ್ಷದ ಮಹಿಳೆ ಶುಕ್ರವಾರ ಹುಬ್ಬಳ್ಳಿಯ ಕಿಮ್ಸ್​ನಿಂದ ಬಿಡುಗಡೆಯಾಗಿದ್ದಾರೆ. ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ 91ಕ್ಕೆ ಏರಿಕೆಯಾಗಿದೆ. ಈಗಾಗಲೇ 48 ಜನ ಚೇತರಿಸಿಕೊಂಡು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಉಳಿದವರು ಹುಬ್ಬಳ್ಳಿಯ ಕಿಮ್ಸ್​ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts