More

    ಜಿಲ್ಲೆಯಲ್ಲಿ ಉತ್ತಮ ಮಳೆ, ಬೆಳೆ

    ಮುಂಡಗೋಡ: ಪ್ರತಿ ವರ್ಷ ಧರ್ವ ಜಲಾಶಯಕ್ಕೆ ಬಾಗಿನ ಅರ್ಪಿಸುವ ಪದ್ಧತಿ ಇದೆ. ಅದರಂತೆ ಈ ವರ್ಷವೂ ಬಾಗಿನ ಅರ್ಪಿಸಿದ್ದೇವೆ. ಈ ವರ್ಷ ಉತ್ತರ ಕನ್ನಡ ಜಿಲ್ಲೆಯಲ್ಲಿ ಎಲ್ಲಾ ನದಿಗಳು ಭರ್ತಿಯಾಗಿವೆ. ಜಿಲ್ಲೆಯಲ್ಲಿ ಉತ್ತಮ ಮಳೆ, ಬೆಳೆ ಇದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ಹೇಳಿದರು.

    ಧರ್ವ ಜಲಾಶಯಕ್ಕೆ ಬಾಗಿನ ಅರ್ಪಿಸಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಕಳೆದ ಬಾರಿ ಮಳೆಗಾಲದಲ್ಲಿ ಆದ ಅನಾಹುತ ಈ ಬಾರಿ ಆಗಿಲ್ಲ. ಆದರೂ ಜಿಲ್ಲೆಯಲ್ಲಿ ಅನೇಕ ಕಡೆಗಳಲ್ಲಿ ರಸ್ತೆ ಹಾಗೂ ಸೇತುವೆಗಳಿಗೆ ಹಾನಿಯಾಗಿದೆ. ಜೀವ ಕಳೆದುಕೊಂಡ 3 ಕುಟುಂಬಕ್ಕೆ ಸರ್ಕಾರದಿಂದ ತಲಾ 5 ಲಕ್ಷ ರೂ. ಪರಹಾರ ನೀಡಲಾಗಿದೆ. ಜಿಲ್ಲೆಯಲ್ಲಿ ತಮ್ಮ ಜಾನುವಾರುಗಳನ್ನು ಕಳೆದುಕೊಂಡವರಿಗೂ ಸರ್ಕಾರ ಪರಿಹಾರ ನೀಡಿದೆ ಎಂದರು.

    ಹಾವೇರಿ ಸಂಸದ ಶಿವಕುಮಾರ ಉದಾಸಿ ಮಾತನಾಡಿ, ಧರ್ವ ಜಲಾಶಯದ ನೀರನ್ನು ನಂಬಿಕೊಂಡು ಹಾನಗಲ್ಲ ಭಾಗದ ರೈತರು ಜೀವನ ಸಾಗಿಸುತ್ತಿದ್ದಾರೆ. ಈ ಜಲಾಶಯ ಹಾನಗಲ್ಲ ಭಾಗದ ರೈತರನ್ನು ಕಾಪಾಡುತ್ತ ಬಂದಿದೆ. ನನ್ನ ಲೋಕಸಭಾ ವ್ಯಾಪ್ತಿಯ ಹಾನಗಲ್​ನಲ್ಲಿ 90 ಕೆರೆಗಳಿಗೆ ನೀರು ತುಂಬಿಸುವ ಕಾರ್ಯ ಈ ಜಲಾಶಯದಿಂದ ಆಗುತ್ತಿದೆ ಎಂದರು.

    ನಿಮ್ಮ ಉಸ್ತುವಾರಿಯಲ್ಲೇ ಭೂಮಿಪೂಜೆಯಾಗಲಿ: ಇಳಕಲ್-ಕೈಗಾ ರಾಷ್ಟ್ರೀಯ ಹೆದ್ದಾರಿ ಮುಂಡಗೋಡ ಮಾರ್ಗವಾಗಿ ಹಾದು ಹೋಗಲಿದ್ದು ಈಗಾಗಲೇ ಡಿಪಿಆರ್ ಮುಗಿದು ರಾಷ್ಟ್ರೀಯ ಹೆದ್ದಾರಿ ಸಚಿವಾಲಯದ ಮುಂದೆ ಇದೆ. ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿ ಮಾಡಿ ಈ ವಿಷಯದ ಬಗ್ಗೆ ಮಾತನಾಡಿದ್ದೇನೆ. ನೀವು ಕೂಡ ದೆಹಲಿಗೆ ಹೋದಾಗ ಕೇಂದ್ರ ಸಚಿವರನ್ನು ಭೇಟಿಯಾಗಿ ಈ ವಿಷಯದ ಕುರಿತು ಚರ್ಚೆ ಮಾಡಿದರೆ ಇಳಕಲ್- ಕೈಗಾ ರಾಷ್ಟ್ರೀಯ ಹೆದ್ದಾರಿಯ ರಸ್ತೆ ಕಾಮಗಾರಿ ಭೂಮಿ ಪೂಜೆ ನಿಮ್ಮ ಉಸ್ತುವಾರಿಯಲ್ಲಿಯೇ ಆಗಲಿದೆ ಎಂದರು. ಜಿ.ಪಂ. ಸದಸ್ಯ ರವಿಗೌಡ ಪಾಟೀಲ, ಮುಖಂಡರಾದ ನಾಭೂಷಣ ಹಾವಣಗಿ, ಗುಡ್ಡಪ್ಪ ಕಾತೂರ, ಕೆಂಜೋಡಿ ಗಲಬಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts