More

    ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಮಾ.14ರಿಂದ

    ಗದಗ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಮಾ.14 ಮತ್ತು ಮಾ. 15ರಂದು 9ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವನ್ನು ನಗರದ ಜಿಲ್ಲಾ ಕನ್ನಡ ಸಾಹಿತ್ಯ ಭವನದಲ್ಲಿ ಏರ್ಪಡಿಸಲು ಜಿಲ್ಲಾ ಕಾರ್ಯಕಾರಿ ಸಮಿತಿ ತೀರ್ವನಿಸಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಡಾ.ಶರಣು ಗೋಗೇರಿ ಹೇಳಿದರು.

    ನಗರದ ಜಿಲ್ಲಾ ಕನ್ನಡ ಸಾಹಿತ್ಯ ಭವನದಲ್ಲಿ ಸೋಮವಾರ ಏರ್ಪಡಿಸಿದ್ದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸಮಿತಿ ಹಾಗೂ ಸಲಹಾ ಮಂಡಳಿ ಸಭೆಯಲ್ಲಿ ಅವರು ಮಾತನಾಡಿದರು.

    9ನೇ ಜಿಲ್ಲಾ ಸಮ್ಮೇಳನವನ್ನು ಸರಳವಾಗಿ, ಅರ್ಥಪೂರ್ಣವಾಗಿ ಆಚರಿಸಲು ನಿರ್ಣಯಿಸಲಾಗಿದೆ ಎಂದರು.

    ಸಾಹಿತ್ಯ ಸಮ್ಮೇಳನದಲ್ಲಿ ಕೃಷಿ, ಕೈಗಾರಿಕೆ, ಶಿಕ್ಷಣ, ಸಾಹಿತ್ಯ, ಸಂಸ್ಕೃತಿ ಸೇರಿ ಜಿಲ್ಲೆ ಎದುರಿಸುತ್ತಿರುವ ಸದ್ಯದ ಹಾಗೂ ಭವಿಷ್ಯದ ಸವಾಲುಗಳ ವಿಷಯವಾಗಿ ಅರ್ಥಪೂರ್ಣ ಗೋಷ್ಠಿಗಳನ್ನು ಆಯೋಜಿಸಲು ಸಮಿತಿ ರಚಿಸಲಾಗಿದೆ. ಜಿಲ್ಲೆಯ ಎಲ್ಲರೂ ಪಕ್ಷಾತೀತವಾಗಿ, ಜಾತ್ಯತೀತವಾಗಿ, ಧರ್ವತೀತವಾಗಿ ಸಮ್ಮೇಳನದಲ್ಲಿ ಭಾಗವಹಿಸಬೇಕೆಂದು ಅವರು ಹೇಳಿದರು.

    ಜಿಲ್ಲೆಯ ಏಳು ತಾಲೂಕುಗಳಲ್ಲಿ ಪ್ರತಿ ತಿಂಗಳು ಜಿಲ್ಲಾ ಕವಿಗೋಷ್ಠಿ, ವಾರದ ಸಾಹಿತ್ಯ ಚಿಂತನ, ಮನೆಯಂಗಳದಲ್ಲಿ ಸಾಹಿತ್ಯ, ಶಾಲಾ ಸಾಹಿತ್ಯ ಕಲರವ, ಕಾಲೇಜು ಸಾಹಿತ್ಯ ಕಲರವ ಹಾಗೂ ಪ್ರತಿ ತಿಂಗಳು ತಾಲೂಕು ಕಾರ್ಯಕಾರಿ ಸಮಿತಿ ಸಭೆಯನ್ನು ಕಡ್ಡಾಯವಾಗಿ ನಡೆಸಲಾಗುವುದು ಎಂದರು.

    ಕಾರ್ಯಕಾರಿ ಸಮಿತಿ ಸಭೆಯಲ್ಲಿ ಗೌರವ ಕಾರ್ಯದರ್ಶಿಗಳಾದ ಪ್ರಕಾಶ ಮಂಗಳೂರು, ಅಶೋಕ ಹಾದಿ, ಕೋಶಾಧ್ಯಕ್ಷ ಎಚ್.ಬಿ.ರಡ್ಡೇರ, ಕೆ.ಬಿ. ತಳಗೇರಿ, ಪ್ರೇಮನಾಥ ಗರಗ, ಅಂದಾನೆಪ್ಪ ವಿಭೂತಿ, ಐ.ಕೆ ಕಮ್ಮಾರ, ತಾಲೂಕು ಘಟಕಗಳ ಅಧ್ಯಕ್ಷರಾದ ಐ.ಎ.ರೇವಡಿ, ಕೆ.ಎ. ಹಿರೇಮಠ, ಎಂ.ಕೆ ಲಮಾಣಿ, ಡಾ.ಜಯಶ್ರೀ ಹೊಸಮನಿ, ರವಿ ಶಿಶ್ವಿನಹಳ್ಳಿ, ಬಿ.ಎಚ್. ಗರಡಿಮನಿ, ಡಾ.ಜಿ.ಎಸ್. ಯತ್ನಟ್ಟಿ, ಬಸವರಾಜ ಬಳ್ಳಾರಿ, ರವಿರಾಜ ಪವಾರ, ರತ್ನಕ್ಕ ಪಾಟೀಲ, ಕಾಶಿನಾಥ ಶಿರಬಡಗಿ ಇತರರಿದ್ದರು.

    ಗದಗ ಕಸಾಪ ಭವನ, ರೋಣ ತಾಲೂಕು ಕನ್ನಡ ಸಾಹಿತ್ಯ ಭವನಗಳು ಲೋಕಾರ್ಪಣೆಗೊಂಡಿದ್ದು, ಲಕ್ಷೆ್ಮೕಶ್ವರ ಹಾಗೂ ನರಗುಂದ ತಾಲೂಕಿನಲ್ಲಿ ಭವನಗಳು ನಿರ್ಮಾಣ ಹಂತದಲ್ಲಿವೆ. ಮುಂಡರಗಿ ತಾಲೂಕು ಸಾಹಿತ್ಯ ಭವನಗಳ ನಿರ್ವಣಕ್ಕಾಗಿ ನಿವೇಶನ ಪಡೆಯಲಾಗಿದ್ದು, ಶೀಘ್ರ ಭೂಮಿ ಪೂಜೆ ನೆರವೇರಿಸಲಾಗುವುದು. | ಡಾ.ಶರಣು ಗೋಗೇರಿ, ಕಸಾಪ ಜಿಲ್ಲಾಧ್ಯಕ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts