More

    ಜಿಲ್ಲಾಭಿವೃದ್ಧಿ ನನ್ನ ಮೊದಲ ಆದ್ಯತೆ


    ಯಾದಗಿರಿ: ಜಿಲ್ಲೆಯ ಸವರ್ಾಂಗಿಣ ಅಭಿವೃದ್ಧಿ ನನ್ನ ಮೊದಲ ಆದ್ಯತೆಯಾಗಿದ್ದು ಜನರ ಆಶೋತ್ತರ ಈಡೇರಿಕೆಗೆ ಬದ್ಧನಾಗಿದ್ದೇನೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ತಿಳಿಸಿದರು.

    ತಾಲೂಕಿನ ದಿಗ್ಗಿ ಗ್ರಾಮದಲ್ಲಿ 11.96. ಕೋಟಿ ವೆಚ್ಚದಲ್ಲಿ ನಿಮರ್ಾಣವಾಗುತ್ತಿರುವ 110 ಕೆವಿ ಸಬ್ ಸ್ಟೇಷನ್ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿ, ಈ ಯೋಜನೆ ಯಶಸ್ವಿಯಾದಲ್ಲಿ ಮುಡಬೂಳ, ಹಾಲಬಾವಿ, ಹುಲಕಲ್, ಬಿ.ಗುಡಿ ಕ್ಯಾಂಪ್, ಬೀ.ಗುಡಿ ಕೃಷಿ ಮಹಾವಿದ್ಯಾಲಯ ಸೇರಿ ವಿವಿಧ ಭಾಗಗಳಲ್ಲಿ ಹೆಚ್ಚುವರಿ ವಿದ್ಯುತ್ ವಿತರಣೆಯಾಗುತ್ತದೆ. ಈಗಾಗಲೇ ಈ ಭಾಗದಲ್ಲಿ ಕಡಿಮೆ ವೋಲ್ಟೇಜ್ ಸಮಸ್ಯೆ ಇದ್ದು, ಪದೇಪದೇ ಕರೆಂಟ್ ಹೋಗುವುದರಿಂದ ಸಾರ್ವಜನಿಕರಿಗೂ ಮತ್ತು ರೈತರಿಗೂ ತುಂಬ ತೊಂದರೆಯಾಗುತ್ತಿತ್ತು. ಇದೀಗ ಶಾಶ್ವತ ಪರಿಹಾರ ಸಿಗಲಿದೆ ಎಂದರು.

    ಮತಕ್ಷೇತ್ರದ ವನದುರ್ಗ, ಗುತ್ತಿ ಬಸವಣ್ಣದಲ್ಲಿ 110 ಕೆವಿ ಸಬ್ ಸ್ಟೇಷನ್ಗೆ ಜಮೀನು. ಶಿರವಾಳ ಗ್ರಾಮದಲ್ಲಿ ಕಾಮಗಾರಿ ಸಂಪೂರ್ಣ ಮುಗಿದಿದ್ದು ಶೀಘ್ರದಲ್ಲೇ ಲೋಕಾರ್ಪಣೆಗೊಳ್ಳಲಿದೆ. ಅಲ್ಲದೆ, ಸುಮಾರು 200 ಕೋಟಿ ರೂ.ವೆಚ್ಛದಲ್ಲಿ 220ಕೆವಿ ಸಬ್ ಸ್ಟೇಷನ್ ನಿಮರ್ಾಣಕ್ಕೆ ಚಿಂತನೆ ನಡೆದಿದೆ. ಜಿಲ್ಲೆಯಲ್ಲಿ ಜೆಸ್ಕಾಂ ಕಚೇರಿಗೆ ಪ್ರತಿ ತಿಂಗಳು 8 ಕೋಟಿ ಆದಾಯ ಬರುತ್ತಿದ್ದು, ಈಗ ಹಣವನ್ನು ಸಕರ್ಾರ ಸಬ್ಸಿಡಿ ರೂಪದಲ್ಲಿ ಇಲಾಖೆ ಬರುತ್ತಿದೆ. ನಾವು ಕೊಟ್ಟ ಮಾತಿನಂತೆ ನಡೆದುಕೊಳ್ಳುತ್ತಿದೆ ಎಂದು ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts