More

    ಭಜನಾ ಮೇಳದಲ್ಲಿ ಹರಪನಹಳ್ಳಿ ಕಿರಿಯರು, ಹಾವೇರಿ ಹಿರಿಯರು ಪ್ರಥಮ

    ಸಿರಿಗೆರೆ: ಸಿರಿಗೆರೆಯಲ್ಲಿ ಕಾಶಿ ಮಹಲಿಂಗ ಶ್ರೀಗಳ ಶ್ರದ್ಧಾಂಜಲಿ ಅಂಗವಾಗಿ ಆಯೋಜಿಸಿದ್ದ ರಾಜ್ಯ ಮಟ್ಟದ ಭಜನಾ ಮೇಳ ಸ್ಪರ್ಧೆಯ ಕಿರಿಯರ ವಿಭಾಗದಲ್ಲಿ ಹರಪನಹಳ್ಳಿ ತಾಲೂಕು ಕ್ಯಾರಕಟ್ಟೆಯ ಕರಿಯಾಂಬಿಕಾ ಭಜನಾ ಮಂಡಳಿ ಹಾಗೂ ಹಿರಿಯರ ವಿಭಾಗದಲ್ಲಿ ಹಾವೇರಿ ಜಿಲ್ಲೆ ಕುರುಬಗೊಂಡದ ಶಿವರುದ್ರೇಶ್ವರ ಭಜನಾ ಮಂಡಳಿ ಪ್ರಥಮ ಸ್ಥಾನ ಅಲಂಕರಿಸಿವೆ.

    ಕಿರಿಯರ ವಿಭಾಗದಲ್ಲಿ ಉಚ್ಚಂಗಿ ಹಾಲಮ್ಮ ಭಜನಾ ಮಂಡಳಿ, ಚಿಕ್ಕೇನಹಳ್ಳಿ, ಚಿತ್ರದುರ್ಗ ತಾ. (ದ್ವಿತೀಯ), ಗುರು ಶಾಂತೇಶ್ವರ ಭಜನಾ ಮಂಡಳಿ, ಶಲವಡಿ, ಅಣ್ಣಿಗೇರಿ ತಾಲೂಕು, ಧಾರವಾಡ ಜಿಲ್ಲೆ (ತೃತೀಯ) ಸ್ಥಾನ ಗಳಿಸಿವೆ.

    ಹಿರಿಯರ ವಿಭಾಗದಲ್ಲಿ ಮಲ್ಲಿಕಾರ್ಜುನ ಭಜನಾ ಮಂಡಳಿ, ಕುರುಬಗೊಂಡ, ಹಾವೇರಿ ಜಿಲ್ಲೆ (ದ್ವಿತೀಯ) ಯಳಗೋಡಿ ಆಂಜನೇಯಸ್ವಾಮಿ ಭಜನಾ ತಂಡ, ಉಚ್ಚಂಗಿದುರ್ಗ, ವಿಜಯನಗರ ಜಿಲ್ಲೆ (ತೃತೀಯ)ಬಹುಮಾನ ಪಡೆದಿವೆ.

    ಮುಂದಿನ ದಿನಗಳಲ್ಲಿ ಜಾನಪದ ಗೀತೆಗಳ ಮೇಳ

    ಬೃಹನ್ಮಠದಲ್ಲಿ 35 ವರ್ಷಗಳಿಂದ ಆಯೋಜಿಸಿಕೊಂಡು ಬರಲಾಗಿರುವ ಭಜನಾ ಮೇಳಕ್ಕೆ ಹೊಸ ರೂಪ ಕೊಟ್ಟು ಮುಂದಿನ ದಿನಗಳಲ್ಲಿ ಜಾನಪದ ಗೀತೆಗಳ ಮೇಳ ಆಯೋಜಿಸಲಾಗುವುದು ಎಂದು ಡಾ. ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

    ಸಿರಿಗೆರೆಯಲ್ಲಿ ಕಾಶಿ ಮಹಲಿಂಗ ಶ್ರೀಗಳ ಶ್ರದ್ಧಾಂಜಲಿ ಅಂಗವಾಗಿ ಶನಿವಾರ ಆಯೋಜಸಿದ್ದ ಭಜನಾ ಮೇಳದ ಸಮಾರೋಪದಲ್ಲಿ ಮಾತನಾಡಿದರು.

    ಭಜನೆ, ಜಾನಪದ ಕಲೆಗಳ ಒಂದು ಪ್ರಕಾರವಾಗಿದೆ. ಜಾನಪದದ ಅಡಿಯಲ್ಲಿ ಬರುವ ತತ್ವಪದ, ಗೀಗೀ ಪದ, ಲಾವಣಿ ಮುಂತಾದವುಗಳನ್ನು ಒಳಗೊಂಡಂತೆ ಮುಂದಿನ ವರ್ಷದಿಂದ ಸ್ಪರ್ಧೆ ಏರ್ಪಡಿಸಲಾಗುವುದು ಎಂದರು.

    ಧಾರವಾಡದ ಜಾನಪದ ತಜ್ಞ ಡಾ. ಶ್ರೀಶೈಲ ವಿ. ಹುದ್ದಾರ ಮಾತನಾಡಿ, ಭಜನೆ ಭಾವೈಕ್ಯದ ಮಾರ್ಗ ಹೇಳಿಕೊಡುತ್ತದೆ. ವಚನ ಮತ್ತು ತತ್ವಪದಗಳನ್ನು ವ್ಯಾಪಕವಾಗಿ ಭಜನಾಕಾರರು ಪ್ರಚಾರ ಮಾಡುತ್ತಿರುವುದು ಇತ್ತೀಚಿನ ಬೆಳವಣಿಗೆಯಾಗಿದೆ ಎಂದರು.

    ದಾವಣಗೆರೆ ವಿವಿ ಸಹಾಯಕ ಪ್ರಾಧ್ಯಾಪಕ ಸಿದ್ದಪ್ಪ ಕಕ್ಕಳಮೇಲಿ ಮಾತನಾಡಿ, ಭಜನೆ ದೇವರನ್ನು ಆರಾಧಿಸುವ ಮಾರ್ಗವಾಗಿದೆ. ಪೂಜೆ, ಆರಾಧನೆ, ಧ್ಯಾನ, ಯಜ್ಞ ಮುಂತಾದ ಸಂದರ್ಭದಲ್ಲಿ ಭಜನೆಗಳನ್ನು ದೇವರನ್ನು ಒಲಿಸಿಕೊಳ್ಳುವ ಕ್ರಮವಾಗಿ ಹಾಡಲಾಗುತ್ತಿತ್ತು ಎಂದರು.

    ಮೊಳಕಾಲ್ಮೂರು ಕನ್ನಡ ಚಳವಳಿಗಾರ ಮೊರಾರ್ಜಿ ಕನ್ನಡ ಗೀತೆಗಳನ್ನು ಹಾಡಿದರು. ಸುಮಾ ಸಣ್ಣಗೌಡರ ನಿರೂಪಿಸಿದರು. ಶಿಕ್ಷಕ ಎಸ್.ಜೆ.ಮಧು ಸ್ವಾಗತಿಸಿದರು. ಜ್ಯೋತಿಲಕ್ಷ್ಮಿ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts