More

    ಜಿಲ್ಲಾದ್ಯಂತ ಗ್ರಾಪಂ ವ್ಯಾಪ್ತಿಯಲ್ಲಿ ಪ್ರತಿಭಟನೆ

    ಹಾವೇರಿ: ರಾಜ್ಯ ವ್ಯಾಪಿಯಾಗಿ ಜೂ. 30ರಂದು ಮತ್ತು ಕಳೆದೊಂದು ವಾರದಿಂದ ತಾಲೂಕು, ಜಿಲ್ಲಾ ಮಟ್ಟದಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ, ತಹಸೀಲ್ದಾರ್ ಮೂಲಕ ಮನವಿ ಸಲ್ಲಿಸಿದ್ದ ಆಶಾ ಕಾರ್ಯಕರ್ತೆಯರು ಮಂಗಳವಾರದಿಂದ ಗ್ರಾಪಂ ವ್ಯಾಪ್ತಿಯಲ್ಲಿ ಪ್ರತಿಭಟನೆ ನಡೆಸಿ ಪಿಡಿಒಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

    ಜಿಲ್ಲೆಯ ಎಲ್ಲ ತಾಲೂಕು ಕೇಂದ್ರಗಳಲ್ಲಿ, ಗ್ರಾಪಂಗಳಲ್ಲಿ ಆಶಾ ಕಾರ್ಯಕರ್ತೆಯರು ಸಾಂಕೇತಿಕ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು. ಕಳೆದ ಜನವರಿ ತಿಂಗಳಿನಿಂದ ಸರ್ಕಾರಕ್ಕೆ 10ಮನವಿ ಸಲ್ಲಿಸಲಾಗಿದೆ. ಆಶಾ ಕಾರ್ಯಕರ್ತೆಯರ ಸಂಘದ ಮನವಿ ಪತ್ರಗಳಲ್ಲಿನ ವಿಷಯಗಳ ಕುರಿತು ರ್ಚಚಿಸಲು ಈವರೆಗೂ ಸರ್ಕಾರದಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಹೀಗಾಗಿ ಆರೋಗ್ಯ ಸೇವೆ ಸ್ಥಗಿತಗೊಳಿಸಿ ಹೋರಾಟ ನಡೆಸಬೇಕಾಗಿದೆ. ಇತ್ತೀಚೆಗೆ ಗುತ್ತಿಗೆ ವೈದ್ಯರ ಸಂಬಳವನ್ನು 20ಸಾವಿರದಿಂದ 40ಸಾವಿರ ರೂ.ಗೆ ಸರ್ಕಾರ ಏರಿಕೆ ಮಾಡಿದೆ. ಆದರೆ, ಆಶಾ ಕಾರ್ಯಕರ್ತೆಯರ ಬೇಡಿಕೆಗೆ ಸ್ಪಂದಿಸುತ್ತಿಲ್ಲ. ಆಶಾಗಳಿಗೆ ಮಾಸಿಕ 12ಸಾವಿರ ರೂ. ವೇತನ ನೀಡಬೇಕು. ಕಾಲಕಾಲಕ್ಕೆ ಆರೋಗ್ಯ ತಪಾಸಣೆ ನಡೆಸಬೇಕು. ಪಾಸಿಟಿವ್ ಬಂದಿರುವ ಆಶಾಗಳಿಗೆ ಉಚಿತ ಚಿಕಿತ್ಸೆ ನೀಡಬೇಕು. ಚಿಕಿತ್ಸೆಯ ಅವಧಿಯಲ್ಲಿ ಗೌರವ ಧನವನ್ನು ಸಂಪೂರ್ಣವಾಗಿ ನೀಡಬೇಕು. ಕರೊನಾ ಸಮಯದಲ್ಲಿ ರಕ್ಷಣಾ ಸಾಮಗ್ರಿ ಒದಗಿಸಬೇಕು. ಸರ್ಕಾರ ಬೇಡಿಕೆ ಈಡೇರಿಸದೆ ಇದ್ದಲ್ಲಿ ಮುಂದಿನ ದಿನಗಳಲ್ಲಿ ತಾಲೂಕು ಕೇಂದ್ರಗಳಲ್ಲಿ ಪರಸ್ಪರ ಅಂತರ ಕಾಯ್ದುಕೊಂಡು ಮಾನವ ಸರಪಳಿ ರಚಿಸುವ ಮೂಲಕ ಪ್ರತಿಭಟನೆ ನಡೆಸಲಾಗುವುದು ಎಂದು ಮನವಿಯಲ್ಲಿ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಪ್ರಮುಖರಾದ ಗಂಗಾಧರ ಬಡಿಗೇರ, ಜಯಶೀಲಾ ಬಂಕಾಪುರಮಠ, ಮಂಜುಳಾ ಮಾಸೂರ, ಪುಷ್ಪಾ ಮಡ್ಲೂರಮಠ, ರೇಖಾ ಬೆಟಗೇರಿ, ಗೀತಾ ಮಡಿವಾಳರ, ದೀಪಾ ಮಡಿವಾಳರ, ಶೀಲಾ ಗುಂಡೆಮ್ಮನವರ ಇತರರು ತಿಳಿಸಿದ್ದಾರೆ.

    ಪ್ರತಿಭಟನೆ ವೇಳೆ ಮಾತಿನ ಚಕಮಕಿ

    ಬ್ಯಾಡಗಿ: ಇಲ್ಲಿ ಪ್ರತಿಭಟನೆ ಮಾಡಬೇಡ್ರಿ, ಗೇಟಿನ ಹೊರಗಡೆ ಹೋಗ್ರಿ ಎಂದಿದ್ದಕ್ಕೆ ತಾಲೂಕು ಆರೋಗ್ಯಾಧಿಕಾರಿ ಕಾರ್ಯಾಲಯದ ಅಧಿಕಾರಿಗಳ ಮತ್ತು ಆಶಾ ಕಾರ್ಯಕರ್ತೆಯರ ನಡುವೆ ಮಂಗಳವಾರ ಮಾತಿನ ಚಕಮಕಿ ನಡೆಯಿತು.

    ತಮ್ಮ ವಿವಿಧ ಬೇಡಿಕೆ ಈಡೇರಿಸಬೇಕು ಎಂದು ತಾಲೂಕಿನ ಆಶಾ ಕಾರ್ಯಕರ್ತೆಯರು ತಾಲೂಕು ಆರೋಗ್ಯಾಧಿಕಾರಿ ಕಾರ್ಯಾಲಯ ಬಳಿ ಜಮಾಯಿಸಿ ಪ್ರತಿಭಟನೆ ಘೊಷಣೆ ಕೂಗಿದರು. ಈ ವೇಳೆ ಅಲ್ಲಿನ ಅಧಿಕಾರಿಗಳು ದುರ್ವರ್ತನೆ ತೋರಿದರು ಎಂದು ದೂರಿ ಮಾತಿನ ಚಕಮಕಿ ನಡೆಸಿದರು. ಆಗ ಸ್ಥಳಕ್ಕಾಗಮಿಸಿದ ತಾಲೂಕು ಆರೋಗ್ಯಾಧಿಕಾರಿ ಡಾ.ಬಿ.ಆರ್. ಲಮಾಣಿ, ನಿಮ್ಮ ಸೇವೆ ಬಗ್ಗೆ ಇಲಾಖೆಗೆ ಗೌರವವಿದೆ. ಬೇಡಿಕೆ ಈಡೇರಿಸುವುದು ನಮ್ಮ ಹಂತದಲ್ಲಿಲ್ಲ. ನೀವು ಕೊಟ್ಟ ಮನವಿಯನ್ನು ನಾವು ಸರ್ಕಾರಕ್ಕೆ ಕಳುಹಿಸಿದ್ದೇವೆ. ಆದರೆ, ಇಲ್ಲಿ ಪ್ರತಿಭಟನೆ ನಡೆಸಿದಲ್ಲಿ ಪರಸ್ಪರ ಅಂತರ ನಿಯಮ ಪಾಲನೆಯಾಗುವುದಿಲ್ಲ ಎಂದರು ಆಗ ಆಶಾ ಕಾರ್ಯಕರ್ತೆಯರು ಪ್ರತಿಭಟನೆ ಹಿಂಪಡೆದರು.

    ಸುಮಾರು 50ಕ್ಕೂ ಹೆಚ್ಚು ಜನ ಪರಸ್ಪರ ಅಂತರದ ಕಾಯ್ದುಕೊಂಡು ಇಲ್ಲಿನ ಹಳೇ ಪುರಸಭೆ ಎದುರು ಮಾನವ ಸರಪಳಿ ರಚಿಸಿ, ಬಳಿಕ ಬ್ಯಾಡಗಿ-ಹಂಸಭಾವಿ ರಸ್ತೆ ಮಾರ್ಗವಾಗಿ ಸರ್ಕಾರದ ನಿರ್ಲಕ್ಷ್ಯ ಖಂಡಿಸಿ ಪ್ರತಿಭಟನಾ ಘೊಷಣೆ ಕೂಗಿದರು. ಈ ವೇಳೆ ತಾಲೂಕಾಧ್ಯಕ್ಷೆ ಮಂಜುಳಾ ಮಾಸೂರು, ಆಶಾ ಕಾರ್ಯಕರ್ತೆಯರಾದ ಸಾವಿತ್ರಿ ರಾಮಗೊಂಡನಹಳ್ಳಿ, ಜ್ಯೋತಿ ಶಿರಾಳಕೊಪ್ಪ, ಭಾಗ್ಯಶ್ರೀ ಬೂದಿಹಾಳಮಠ, ರೇಖಾ ಕರಿಗಾರ, ಜ್ಯೋತಿ ಕಾರಗೇರ, ಸಾವಿತ್ರಿ ಬೆನ್ನೂರು, ಜಯಮ್ಮ ಹಿರೇಮಠ, ಬಸೀರಾ ನಾಶಿಪುಡಿ, ಗೀತಾ ಆಡಿನವರ, ರೇಣುಕಾ ಆಸಾದಿ, ಮಧು ಬಾಳಿಕಾಯಿ, ಯಶೋಧಾ ಕೋಡಿಹಳ್ಳಿ, ಸುಧಾ ಎಲಿ ಇತರರಿದ್ದರು.

    ಕೋವಿಡ್ ವೈರಸ್ ಹರಡುವಿಕೆ ಹೆಚ್ಚಾಗುತ್ತಿರುವ ಈ ದಿನಗಳಲ್ಲಿ ಕೆಲಸ ಸ್ಥಗಿತಗೊಳಿಸಿ ಪ್ರತಿಭಟನೆ ಮಾಡುವುದನ್ನು ಕೈಬಿಡಬೇಕು. ಸದ್ಯದ ಪರಿಸ್ಥಿತಿ ಎಲ್ಲರಿಗೆ ತಿಳಿದಿದೆ. ಈ ಕುರಿತು ಹೆಚ್ಚೇನು ಹೇಳುವುದಿಲ್ಲ. ರಾಜ್ಯದ ಎಲ್ಲ ಮಂತ್ರಿಗಳು, ಸರ್ಕಾರ ರ್ಚಚಿಸಲಿದೆ.

    ವೀರೂಪಾಕ್ಷಪ್ಪ ಬಳ್ಳಾರಿ ಶಾಸಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts