More

    ಜಿಲ್ಲಾದ್ಯಂತ ಕರೊನಾ ಬಿಗಿ ಬಂದೋಬಸ್ತ್

    ಗದಗ: ಕರೊನಾ ವೈರಸ್ ಹರಡುವುದನ್ನು ತಡೆಯಲು ಜಿಲ್ಲಾದ್ಯಂತ ಬಿಗಿ ಬಂದೋಬಸ್ತ್ ಮಾಡಲಾಗಿದೆ. ಬುಧವಾರ ನರಗುಂದ ತಾಲೂಕಿನ

    ಕಲಕೇರಿ ಗಾಮಕ್ಕೆ ಸಚಿವ ಸಿ.ಸಿ. ಪಾಟೀಲ, ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಮತ್ತು ಸಿಬ್ಬಂದಿ ಭೇಟಿ ಪರಿಶೀಲನೆ ನಡೆಸಿದರು. ಮುಂಡರಗಿ ಪಟ್ಟಣದ ಜಾಗೃತ ವೃತ್ತದಲ್ಲಿ ಬಳಿ ಇರುವ ರಸ್ತೆ ಬಂದ್ ಮಾಡಲಾಗಿದೆ. ಆಶಾ ಕಾರ್ಯಕರ್ತೆಯರು, ಆರೋಗ್ಯ ಇಲಾಖೆ ಸಿಬ್ಬಂದಿ ಮನೆಮನೆಗೆ ತೆರಳಿ ಸರ್ವೆ ಕಾರ್ಯ ಆರಂಭಿಸಿದ್ದಾರೆ. ನರಗುಂದ ತಾಲೂಕಿನ ಕಲಕೇರಿ ಗ್ರಾಮ ಮತ್ತು ಮುಂಡರಗಿಯ ಜಾಗೃತ ಸರ್ಕಲ್ ಸುತ್ತ 100 ಮೀಟರ್ ವ್ಯಾಪ್ತಿಯನ್ನು ಕಂಟೈನ್ಮೆಂಟ್ ಝೋನ್ ಎಂದು ಗುರುತಿಸಲಾಗಿದೆ.

    ನಗರದ ರಂಗನವಾಡಿ ಗಲ್ಲಿ ಕರೊನಾ ವೈರಸ್ ಹಾಟ್​ಸ್ಪಾಟ್ ಆಗಿದ್ದು, ಇದೊಂದೇ ಪ್ರದೇಶದಲ್ಲಿ ನಾಲ್ಕು ಪ್ರಕರಣಗಳಲ್ಲಿ ಕರೊನಾ ವೈರಸ್ ದೃಢಪಟ್ಟಿವೆ. ಜಿಲ್ಲೆಯಲ್ಲಿ ನಾಲ್ಕು ಜನ ಕರೊನಾ ವೈರಸ್ ಸೋಂಕಿತರಿದ್ದಾರೆ. ಇದರಲ್ಲಿ ಮೊದಲ ಕೇಸ್ ಪಿ 166 ಮೃತಪಟ್ಟಿದ್ದಾರೆ.

    ಗದಗ ರಂಗನವಾಡಿ ಗಲ್ಲಿಯಲ್ಲಿ ಪತ್ತೆಯಾದ ಜಿಲ್ಲೆಯ ಪ್ರಥಮ ಕರೊನಾ ವೈರಸ್ ಸೋಂಕಿತೆ 80 ವರ್ಷದ ವೃದ್ಧೆ (ಪಿ 166) ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಗದಗ ನಗರದ ರಂಗನವಾಡಿ ಗಲ್ಲಿಯ ಎರಡನೇ ಕೇಸ್ (ಪಿ-304) ಮೃತ ಮೊದಲ ಪಾಸಿಟಿವ್ ಕೇಸ್ (ಪಿ-166) ಆಪ್ತರಾಗಿದ್ದರು. ಮೂರನೇ ಕೇಸ್ ವ್ಯಕ್ತಿ (ಪಿ-370) ಎರಡನೇ ಕೇಸ್​ನ (ಪಿ-304) ದ್ವಿತೀಯ ಸಂಪರ್ಕದಲ್ಲಿದ್ದರು. ನಾಲ್ಕನೇ ಕೇಸ್ (ಪಿ 396) ಪುರುಷ ಮೂರನೇ ಕೇಸ್ (ಪಿ 370) ಪುರುಷನೊಂದಿಗೆ ದ್ವಿತೀಯ ಸಂಪರ್ಕದಲ್ಲಿದ್ದರು. ಮೊದಲ ಪಾಸಿಟಿವ್ ಕೇಸ್ ಏ. 6ರಂದು 80ರ ವಯಸ್ಸಿನ ವೃದ್ಧೆಯಲ್ಲಿ ದೃಢಪಟ್ಟಿತ್ತು. ಆ ವೃದ್ಧೆ ಏ. 8ರಂದು ಮೃತರಾದರು. ಎರಡನೇ ಕೇಸ್ ಏ. 16ರಂದು ದೃಢಪಟ್ಟಿತ್ತು. ಏ.18ರಂದು ಮೂರನೇ ಕೇಸ್ ದೃಢಪಟ್ಟಿದೆ. ಏ. 20ರಂದು ನಾಲ್ಕನೇ ಪ್ರಕರಣ ಪತ್ತೆಯಾಗಿದೆ.

    ಕಂಟೈನ್ಮೆಂಟ್ ಪ್ರದೇಶದಲ್ಲಿ ತಪಾಸಣೆ ತೀವ್ರ: ನಗರದ ರಂಗನವಾಡಿ ಗಲ್ಲಿ ಕರೊನಾ ಹಾಟ್​ಸ್ಪಾಟ್ ಆಗಿದ್ದು, ದಿನದಿನಕ್ಕೆ ಅದೇ ಪ್ರದೇಶದಿಂದ ಪ್ರಕರಣಗಳು ಪತ್ತೆಯಾಗುತ್ತಿದ್ದು ಜಿಲ್ಲಾಡಳಿತ ಮುಂಜಾಗ್ರತಾ ಕ್ರಮ ಕೈಗೊಂಡಿದೆ. ರಂಗನವಾಡಿ ಗಲ್ಲಿಯ 150 ಕ್ಕೂ ಹೆಚ್ಚು ಜನರನ್ನು ಬೇರೆಡೆ ಸ್ಥಳಾಂತರ ಮಾಡಲಾಗಿದೆ. ಆ ಪ್ರದೇಶದಲ್ಲಿ ಎರಡೆರಡು ಸಲ ಸ್ಯಾನಿಟೈಸರ್ ಸಿಂಪಡಿಸಿ ಶುಚಿಗೊಳಿಸಲಾಗಿದೆ. ಜತೆಗೆ ರಂಗನವಾಡಿ ಗಲ್ಲಿಯನ್ನು ಕಂಟೈನ್ಮೆಂಟ್ ಪ್ರದೇಶ ಎಂದು ಘೊಷಿಸಲಾಗಿದ್ದು, ಯಾರನ್ನು ಒಳ ಹೋಗಲು, ಹೊರಗೆ ಬರಲು ಬಿಡುತ್ತಿಲ್ಲ. ಬ್ಯಾರಿಕೇಡ್ ಹಾಕಿ ಸೀಲ್​ಡೌನ್ ಮಾದರಿಯಲ್ಲಿ ಬಂದೋಬಸ್ತ್ ಮಾಡಲಾಗಿದೆ. ಅಲ್ಲದೆ, ರಂಗನವಾಡಿ ಸುತ್ತಮುತ್ತಲಿನ ಪ್ರದೇಶದ ಜನರಿಗೆ ಆರೋಗ್ಯ ತಪಾಸಣೆಗಾಗಿ ಡಂಬಳ ನಾಕಾದಲ್ಲಿ ಆರೋಗ್ಯ ಕೇಂದ್ರವನ್ನು ಆರಂಭಿಸಲಾಗಿದೆ. ರಂಗನವಾಡಿ ಗಲ್ಲಿ ಪ್ರದೇಶದಲ್ಲಿ ಹೈಅಲರ್ಟ್ ಘೊಷಣೆ ಮಾಡಲಾಗಿದೆ.

    29 ಜನ ಕ್ವಾರಂಟೈನ್​ನಲ್ಲಿ

    ಲಕ್ಷ್ಮೇಶ್ವರ: ಜಿಲ್ಲೆಯಲ್ಲಿ ಕರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ತಾಲೂಕಾಡಳಿತ ಮೂರು ದಿನಗಳಲ್ಲಿ 29 ಜನರನ್ನು ಇಲ್ಲಿನ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಕ್ವಾರಂಟೈನ್​ನಲ್ಲಿ ಇರಿಸಲಾಗಿದೆ.

    2 ದಿನಗಳ ಹಿಂದೆ ಸೂರತ್ಕಲ್​ನಿಂದ ಬಂದಿದ್ದ ಬಟ್ಟೂರ ಗ್ರಾಮದ 13 ಜನ ಮತ್ತು ಬೆಂಗಳೂರು, ಧಾರವಾಡ, ಬೆಳಗಾವಿ ಸೇರಿ ವಿವಿಧ ಜಿಲ್ಲೆಯಿಂದ ಪಟ್ಟಣ ಮತ್ತು ಸುತ್ತಲಿನ ಗ್ರಾಮೀಣ ಪ್ರದೇಶಗಳಿಗೆ ಬಂದಿದ್ದ 16 ಜನರನ್ನು ಗುರುತಿಸಿ ಮುರಾರ್ಜಿ ಶಾಲೆ ಕ್ವಾರಂಟೈನ್​ನಲ್ಲಿ ಇರಿಸಲಾಗಿದೆ. ಅಲ್ಲದೆ, ಪಟ್ಟಣದಲ್ಲಿನ ಸಂಬಂಧಿಕರ ಮನೆಗೆ ಬಂದಿದ್ದ ಮಕ್ಕಳು ಸೇರಿ ನಾಲ್ವರನ್ನು ಗದಗ ಜಿಮ್ಸ್​ನ ಕ್ವಾರಂಟೈನ್​ಗೆ ಕಳುಹಿಸಿ ಕೊಡಲಾಗಿದೆ.

    ಕ್ವಾರಂಟೈನ್​ನಲ್ಲಿದ್ದವರ ಆರೋಗ್ಯ ಪರೀಕ್ಷೆಗಾಗಿ ಆರೋಗ್ಯ ಇಲಾಖೆ ಸಿಬ್ಬಂದಿ ನೇಮಿಸಲಾಗಿದೆ. ಅವರಿಗೆ ಊಟೋಪಚಾರದ ವ್ಯವಸ್ಥೆ, ಸ್ಯಾನಿಟೈಸರ್, ಮಾಸ್ಕ್ ನೀಡಲಾಗಿದ್ದು, ಸಾಮಾಜಿಕ ಅಂತರ ಮತ್ತು ಆರೋಗ್ಯ ಕಾಪಾಡುವ ಬಗ್ಗೆ ಸೂಕ್ತ ತಿಳಿವಳಿಕೆ ನೀಡಲಾಗಿದೆ ಎಂದು ತಹಸೀಲ್ದಾರ್ ಭ್ರಮರಾಂಬ ಗುಬ್ಬಿಶೆಟ್ಟಿ ತಿಳಿಸಿದರು.

    ಜನರ ಆರೋಗ್ಯದ ದೃಷ್ಟಿಯಿಂದ ಪಟ್ಟಣದ ಕೇಂದ್ರ ಭಾಗದಲ್ಲಿ ಮಾಂಸ ಮಾರಾಟ ಮಾಡುತ್ತಿದ್ದ ವ್ಯಾಪಾರಸ್ಥರ ಸಭೆ ಮಾಡಿ ಮೇ. 3 ರವರೆಗೆ ಮಾಂಸ ಮಾರಾಟ ಮಾಡದಂತೆ ವ್ಯಾಪಾರಸ್ಥರೆ ಸ್ವಯಂ ಪ್ರೇರಣೆಯಿಂದ ಒಪ್ಪಿಕೊಂಡಿದ್ದಾರೆ ಎಂದರು. ಉಪತಹಸೀಲ್ದಾರ್ ಎಂ.ಜಿ. ದಾಸಪ್ಪನವರ, ಪುರಸಭೆ ಮುಖ್ಯಾಧಿಕಾರಿ ಆರ್.ಎಂ. ಪಾಟೀಲ, ಆರೋಗ್ಯ ಇಲಾಖೆ, ಪೊಲೀಸ್ ಇಲಾಖೆ ಸಿಬ್ಬಂದಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts