More

    ಜಿಲ್ಲಾಡಳಿತ ಸಮಯಪ್ರಜ್ಞೆಯಿಂದ ತಪ್ಪಿದ ದುರಂತ, ತಡರಾತ್ರಿ ಜಿಲ್ಲಾ ಪೊಲೀಸರ ನೆರವು ಐನಾಕ್ಸ್ ಪ್ಲಾಂಟ್ ಮ್ಯಾನೇಜರ್‌ಗೆ ಡಿಸಿ ತರಾಟೆ

    ಬೆಂಗಳೂರು ಗ್ರಾಮಾಂತರ: ಆಕ್ಸಿಜನ್‌ಗೆ ಕಾಯುತ್ತಿದ್ದ ನೂರಾರು ಕರೊನಾ ಸೋಂಕಿತರು ಜಿಲ್ಲಾಡಳಿತದ ಸಮಯಪ್ರಜ್ಞೆಯಿಂದ ಪ್ರಾಣಾಪಾಯದಿಂದ ಪಾರಾದ ಘಟನೆ ಮಂಗಳವಾರ ತಡರಾತ್ರಿ ನಡೆದಿದೆ.

    ದೇವನಹಳ್ಳಿ ಆಕಾಶ್ ಆಸ್ಪತ್ರೆಗೆ ಹೊಸಕೋಟೆಯ ಐನಾಕ್ಸ್ ಪ್ಲಾಂಟ್‌ನಿಂದ ಪೂರೈಕೆಯಾಗಬೇಕಿದ್ದ ಆಕ್ಸಿಜನ್ ಸಿಲಿಂಡರ್ ಸಕಾಲಕ್ಕೆ ಬಾರದ ಹಿನ್ನೆಲೆಯಲ್ಲಿ ಕೋವಿಡ್ ಸೋಂಕಿತರು ತೀವ್ರ ಆತಂಕಕ್ಕೆ ಒಳಗಾಗಿದ್ದರು.ಈ ವೇಳೆ ಆಸ್ಪತ್ರೆ ಸಿಬ್ಬಂದಿ ಅನೇಕ ಬಾರಿ ಪ್ಲಾಂಟ್ ಸಿಬ್ಬಂದಿಗೆ ಕರೆ ಮಾಡಿದರೂ ಯಾರೂ ಕರೆ ಸ್ವೀಕರಿಸಿಲ್ಲ ಎನ್ನಲಾಗಿದೆ. ಕೂಡಲೇ ಮಾಹಿತಿ ಪಡೆದ ಜಿಲ್ಲಾಡಳಿತ ಅಧಿಕಾರಿಗಳು ಜಿಲ್ಲಾ ಪೊಲೀಸರ ನೆರವಿನೊಂದಿಗೆ ಹೊಸಕೋಟೆಯ ಪಿಳ್ಳಂಗುಪ್ಪ ಪ್ಲಾಂಟ್‌ಗೆ ಧಾವಿಸಿ ಸಿಬ್ಬಂದಿಯನ್ನು ತರಾಟೆ ತೆಗೆದುಕೊಂಡರಲ್ಲದೇ ಖುದ್ದು ಟ್ರಕ್‌ಗೆ ಆಕ್ಸಿಜನ್ ಸಿಲಿಂಡರ್ ಲೋಡ್ ಮಾಡಿಸಿದ್ದಾರೆ.ಕಡೆಗೆ ತಡರಾತ್ರಿ ಸಿಲಿಂಡರ್ ಆಕಾಶ್ ಆಸ್ಪತ್ರೆಗೆ ತಲುಪಿವೆ.

    ಕೇರಳದಿಂದ ಬರೋದು ತಡ: ಆಕ್ಸಿಜನ್ ತರೋಕೆ ಪಿಳ್ಳಗುಂಪ ಕೈಗಾರಿಕಾ ಪ್ರದೇಶ ದಲ್ಲಿರುವ ಐನಾಕ್ಸ್ ಆಕ್ಸಿಜನ್ ಪ್ಲಾಂಟ್‌ಗೆ ಟ್ರಕ್ ತೆರಳಿತ್ತಾದರೂ ಕೇರಳದಿಂದ ಆಕ್ಸಿಜನ್ ಲೋಡ್ ಬರುವುದು ತಡವಾಗಿತ್ತು.ಇತ್ತ ಗಾಬರಿಯಾದ ಆಸ್ಪತ್ರೆ ಸಿಬ್ಬಂದಿ ಅನೇಕ ಸಲ ಕರೆ ಮಾಡಿದರೂ ಆಕ್ಸಿಜನ್ ಪ್ಲಾಂಟ್‌ನ ಮಾರ್ಕೆಟಿಂಗ್ ಸಿಬ್ಬಂದಿ ಫೋನ್ ಸ್ವಿಚ್ಡ್ ಆ್ ಬರುತ್ತಿತ್ತು ಎನ್ನಲಾಗಿದೆ.ಕೊನೆಗೆ ಆಸ್ಪತ್ರೆ ಕಡೆಯಿಂದ ಗ್ರಾಮಾಂತರ ಡಿಸಿ ಕೆ.್ಅವರಿಗೆ ಮಾಹಿತಿ ನೀಡಲಾಯಿತು.ತಕ್ಷಣವೇ ಕಾರ್ಯಪ್ರವೃತ್ತರಾದ ಜಿಲ್ಲಾಧಿಕಾರಿ,ಹೊಸಕೋಟೆ ಉಪವಿಭಾಗದ ಪೊಲೀಸರಿಗೆ ಮಾಹಿತಿ ರವಾನೆ ಮಾಡಿದ್ದರು.

    ಹೊಸಕೋಟೆ,ನಂದಗುಡಿ ಮತ್ತು ತಿರುಮಶೆಟ್ಟಿಹಳ್ಳಿ ಠಾಣೆಗೆ ಮಾಹಿತಿ ರವಾನೆಯಾದ ಕೂಡಲೇ ಮೂರೂ ಠಾಣೆಯ ಇನ್ಸ್‌ಪೆಕ್ಟರ್‌ಗಳು ತಕ್ಷಣವೇ ಸ್ಥಳಕ್ಕೆ ತೆರಳಿದ್ದರು.ಅಂತಿಮವಾಗಿ ರಾತ್ರಿ 13ರ ಸುಮಾರಿಗೆ ಆಕಾಶ್ ಆಸ್ಪತ್ರೆಗೆ ಆಕ್ಸಿಜನ್ ತಲುಪಿಸುವಲ್ಲಿ ಜಿಲ್ಲಾಡಳಿತ ಯಶಸ್ವಿಯಾಯಿತು.ರಾತ್ರಿ ಡಿಸಿ ತಕ್ಷಣ ಕಾರ್ಯಪ್ರವೃತ್ತರಾಗದಿದ್ದಿದ್ದರೆ ಆಕಾಶ್ ಆಸ್ಪತ್ರೆ ಯಲ್ಲಿ ಆಕ್ಸಿಜನ್ ಇಲ್ಲದೆ ಸುಮಾರು 30ಸೋಂಕಿತರ ಪ್ರಾಣಕ್ಕೆ ಸಂಚಕಾರ ಎದುರಾಗಲಿತ್ತು ಎನ್ನಲಾಗಿದೆ.

    ಜಿಲ್ಲಾಧಿಕಾರಿ ಭೇಟಿ: ಆಕ್ಸಿಜನ್ ತಡವಾಗಿ ರವಾನೆಯಾದ ವಿಚಾರಕ್ಕೆ ಸಂಬಂಧಪಟ್ಟಂತೆ ಬುಧವಾರ ಹೊಸಕೋಟೆ ಪಿಳ್ಳಂಗುಪ್ಪೆ ಕೈಗಾರಿಕಾ ಪ್ರದೇಶಕ್ಕೆ ಡಿಸಿ ಶ್ರೀನಿವಾಸ್,ಎಸಿ ಅರುಳ್ ಕುಮಾರ್,ಎಸ್ಪಿ ರವಿ ಡಿ.ಚನ್ನಣ್ಣನವರ್ ಭೇಟಿ ನೀಡಿ ಪರಿಶೀಲಿಸಿದ್ದಾರೆ.
    ಆಕ್ಸಿಜನ್ ಸಾಗಾಟ ಮಾಡಲು ಮೀನಮೇಷ ಎಣಿಸಿದ ಐನಾಕ್ಸ್ ಪ್ಲಾಂಟ್ ಮ್ಯಾನೇಜರ್‌ಗೆ ಡಿಸಿ ತರಾಟೆ ತೆಗೆದುಕೊಂಡಿದ್ದಾರೆ.ಈ ರೀತಿ ಎಡವಟ್ಟು ಮಾಡಿದರೆ ಜೀವ ಉಳಿಸೋಕೆ ಕಷ್ಟ,ಮತ್ತೊಮ್ಮೆ ಈ ರೀತಿಯಾಗದಂತೆ ನಿಗಾ ವಹಿಸಬೇಕು ಎಂದು ಎಚ್ಚರಿಕೆ ನೀಡಿದ್ದಾರೆ.

    2 ಬಾರಿ ಲೋಡ್: ಆಕಾಶ್ ಆಸ್ಪತ್ರೆಗೆ ದಿನಕ್ಕೆ ಎರಡು ಸಲ ಆಕ್ಸಿಜನ್ ತೆಗೆದುಕೊಂಡು ಬಂದು ಲೋಡ್ ಮಾಡಲಾಗುತ್ತಿತ್ತು.ಒಂದು ದಿನಕ್ಕೆ 8ಕೆ ಎಲ್ ಆಕ್ಸಿಜನ್ ಅವಶ್ಯಕತೆ ಇದೆ.ಬೆಳಗ್ಗೆ ಆಕ್ಸಿಜನ್ ಲೋಡ್ ಬಂದಿದೆ.ರಾತ್ರಿ ಸಮಯಕ್ಕೆ ಬರಬೇಕಿದ್ದ ಲೋಡ್ ಬಂದಿಲ್ಲ.ಅಲ್ಲದೆ ಅಲ್ಲಿನ ಸಿಬ್ಬಂದಿ ಕರೆ ಸ್ವೀಕರಿಸದ ಹಿನ್ನೆಲೆಯಲ್ಲಿ ಈ ತೊಂದರೆ ಎದುರಾಗಿದೆ ಎಂದು ಆಕಾಶ್ ಆಸ್ಪತ್ರೆ ಮುಖ್ಯ ವೈದ್ಯ ಡಾ.್ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts