More

    ಜಿಲ್ಲಾಡಳಿತದಿಂದ ಅರ್ಥಪೂರ್ಣ ಜಯಂತಿ

    ಯಾದಗಿರಿ: ಜಿಲ್ಲಾಡಳಿತದಿಂದ ನಿಜಶರಣ ಅಂಬಿಗರ ಚೌಡಯ್ಯನವರ ಜಯಂತಿ ಕಾರ್ಯಕ್ರಮ ಅರ್ಥಪೂರ್ಣವಾಗಿ ಆಚರಿಸಲು ನಿರ್ಧರಿಸಲಾಗಿದೆ ಎಂದು ಸಹಾಯಕ ಆಯುಕ್ತ ಶಂಕರಗೌಡ ಸೋಮನಾಳ ತಿಳಿಸಿದರು.

    ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸೋಮವಾರ ಕರೆದಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, 21ರಂದು ಬೆಳಗ್ಗೆ 9ಕ್ಕೆ ನಿಜಶರಣ ಅಂಬಿಗರ ಚೌಡಯ್ಯನವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಗುವುದು. ಅದರಂತೆ ಜಿಲ್ಲೆಯ ಎಲ್ಲ ಸಕರ್ಾರಿ ಕಚೇರಿ ಹಾಗೂ ಸಕರ್ಾರಿ, ಅನುದಾನಿತ ಮತ್ತು ಅನುದಾನ ರಹಿತ ಶಾಲಾ-ಕಾಲೇಜುಗಳಲ್ಲಿಯೂ ಸಹ ಶ್ರದ್ಧಾ, ಭಕ್ತಿಯೊಂದಿಗೆ ನಿಜಶರಣ ಅಂಬಿಗರ ಚೌಡಯ್ಯನವರ ಜಯಂತಿ ಕಡ್ಡಾಯವಾಗಿ ಆಚರಿಸಬೇಕು. ಹೊಸ ತಾಲೂಕುಗಳು ಸೇರಿ ತಾಲೂಕು ಮಟ್ಟದಲ್ಲಿ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಣೆ ಮಾಡಲು ಆಯಾ ತಹಸೀಲ್ದಾರ್ರು ಕ್ರಮಕೈಗೊಳ್ಳುವಂತೆ ಸೂಚಿಸಿದರು.

    ಜಿಲ್ಲಾಡಳಿತ ಕಾರ್ಯಕ್ರಮದಲ್ಲಿ ಭಾಗವಹಿಸುವ ಸಮಾಜದ ಮುಖಂಡರು, ವಿದ್ಯಾಥರ್ಿಗಳು, ಸಭಿಕರಿಗೆ ಟೀ, ಟಿಫಿನ್ ವ್ಯವಸ್ಥೆ ಹಾಗೂ ಕುಡಿವ ನೀರಿನ ವ್ಯವಸ್ಥೆ ಮಾಡಲು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ ಮತ್ತು ಜಿಲ್ಲಾ ಅಂಕಿತ ಅಧಿಕಾರಿಗಳಿಗೆ ವಹಿಸಿದರು. ಜಯಂತಿಯಲ್ಲಿ ಶಾಂತಿ, ಸುವ್ಯವಸ್ಥೆಯನ್ನು ಕಾಪಾಡಲು ಸೂಕ್ತ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡುವಂತೆ ಜಿಲ್ಲಾ ಪೊಲೀಸ್ ಇಲಾಖೆಗೆ ತಿಳಿಸಿದರು.

    ಟೋಕರಿ, ಕೋಲಿ ಸಮಾಜದ ಜಿಲ್ಲಾಧ್ಯಕ್ಷ ಉಮೇಶ ಕೆ.ಮುದ್ನಾಳ, ಡಿಡಿಪಿಯು ಚಂದ್ರಶೇಖರ ಜೆ.ಹಿಳ್ಳಿ, ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಬಿ.ರೇವಣ್ಣ, ಆಹಾರ ಇಲಾಖೆಯ ಸಹಾಯಕ ನಿದರ್ೇಶಕ ಮಲ್ಲಿಕಾಜರ್ುನ, ಸಮಾಜದ ಪ್ರಮುಖರಾದ ಹನುಮಂತ ಮಡ್ಡಿ, ಗೌರವಾಧ್ಯಕ್ಷ ಸಿ.ಎಂ.ಪಟ್ಟೇದಾರ, ದೇವಿಂದ್ರಪ್ಪ ಬೆಸ್ತ, ಶರಣಪ್ಪ ಮೋಟ್ನಳ್ಳಿ, ಮೌಲಾಲಿ ಅನಪೂರ, ಚಂದ್ರಶೇಖರ ಬಾಡಿಯಾಳ, ಹಣಮಂತಪ್ಪ ಬಳಿಚಕ್ರ, ಸುರೇಶ ಕೋಟಿಮನಿ, ಭೀಮಾಶಂಕರ ದೋರನಹಳ್ಳಿ, ಸುರೇಶ ಮಡ್ಡಿ, ಚಂದ್ರಕಾಂತ ಮಡ್ಡಿ, ದೇವಿಂದ್ರಪ್ಪ ಬಳಿಚಕ್ರ ಇದ್ದರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts