More

    ಜಿಪಂ ಸಿಇಒ ಅಧೀನಕ್ಕೆ ಇಲಾಖೆ ಬೇಡ


    ಯಾದಗಿರಿ: ಪದವಿ ಪೂರ್ವ ಶಿಕ್ಷಣ ಇಲಾಖೆಯನ್ನು ಜಿಲ್ಲಾ ಪಂಚಾಯಿತಿ ಸಿಇಒ ಅವರ ಅಧೀನಕ್ಕೆ ಒಳಪಡಿಸುವಂತೆ ಹೊರಡಿಸಿದ ಆದೇಶ ರದ್ದುಗೊಳಿಸುವಂತೆ ಒತ್ತಾಯಿಸಿ ಡಿಡಿಪಿಯು ಪ್ರಾಂಶುಪಾಲರ ಹಾಗೂ ಉಪನ್ಯಾಸಕರ ಸಂಘದಿಂದ ಜಂಟಿಯಾಗಿ ಇಲ್ಲಿನ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.

    ಗುಣಾತ್ಮಕ ಶಿಕ್ಷಣಕ್ಕೆ ದೇಶದಲ್ಲೇ ಮಾದರಿಯಾಗಿರುವ ಪದವಿ ಪೂರ್ವ ಶಿಕ್ಷಣ ಇಲಾಖೆ ವಿದ್ಯಾರ್ಥಿಗಳಲ್ಲಿನ ಶೈಕ್ಷಣಿಕ ಸೃಜನಶೀಲತೆಯನ್ನು ಬೆಳಕಿಗೆ ತರುವಲ್ಲಿ ಯಶಸ್ವಿಯಾಗಿದೆ. ಶಿಕ್ಷಣ ಇಲಾಖೆಗೆ ಸಂಬಂಧಿಸಿ ಈ ಸಕರ್ಾರ ಹಲವು ತಪ್ಪು ನಿಧರ್ಾರ ಕೈಗೊಳ್ಳುತ್ತಿದೆ. ಶಿಕ್ಷಣ ಇಲಾಖೆಗೆ ಕಾಯಕಲ್ಪ ನೀಡಲು ಹಲವಾರು ಕೆಲಸಗಳಿದ್ದು, ಅವುಗಳನ್ನು ಬಿಟ್ಟು ಇಂಥ ಗೊಂದಲದ ಆದೇಶಗಳನ್ನು ಮಾಡಿ ಇಲಾಖೆ ಹಾಗೂ ಶಿಕ್ಷಕರು, ವಿದ್ಯಾರ್ಥಿಗಳು, ಪಾಲಕರಲ್ಲಿ ಆತಂಕ ಸೃಷ್ಟಿಸುತ್ತಿದೆ ಎಂದು ಪದಾಧಿಕಾರಿಗಳು ಆರೋಪಿಸಿದರು.

    ಈ ಮೊದಲು ಪದವಿ ಪೂರ್ವ ಹಂತದ ಶಿಕ್ಷಣ ನಿಯಂತ್ರಣಕ್ಕೆ ಸುರೇಂದ್ರನಾಥ್ ಸಮಿತಿಯ ವರದಿ ಆಧರಿಸಿ ಪದವಿ ಪೂರ್ವ ಶಿಕ್ಷಣ ಇಲಾಖೆ ರಚಿಸಲಾಗಿತ್ತು. ಇದು ದೇಶದಲ್ಲೇ ಮಾದರಿಯಾಗಿತ್ತು. ಆದರೆ ಈ ಸಕರ್ಾರ ಅಧಿಕಾರಕ್ಕೆ ಬಂದ ನಂತರ ಜಿಪಂ ಸಿಇಒ ಅಧೀನಕ್ಕೆ ಇಲಾಖೆ ಒಳಪಡಿಸಲು ಮುಂದಾಗಿದೆ. ಇದರಿಂದ ವಿದ್ಯಾಥರ್ಿಗಳಲ್ಲಿ ಓದುವ ಆಸೆ ಕಮರಲಿದೆ ಎಂದರು.

    ಸರಕಾರ ಈ ಸೊತ್ತೋಲೆ ಹೊರಡಿಸುವ ಮುನ್ನ ಶಿಕ್ಷಣ ತಜ್ಞರು, ಪ್ರಾಚಾರ್ಯರು, ಶಿಕ್ಷಕರ ಕ್ಷೇತ್ರದ, ಪದವಿ ಕ್ಷೇತ್ರದ ಎಂಎಲ್ಸಿ, ಉಪನ್ಯಾಸಕರ ಸಂಘಟನೆಗಳ ಪದಾಧಿಕಾರಿಗಳ ಜತೆ ಚರ್ಚೆಸದೆ ಅವೈಜ್ಞಾನಿಕ ನಿಧರ್ಾರ ಕೈಗೊಂಡಿರುವ ಖಂಡನೀಯ. ಕೂಡಲೇ ಈ ಸುತ್ತೋಲೆ ಹಿಂಪಡೆಯಬೇಕು ಎಂದು ಆಗ್ರಹಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts