More

    ಜಿಪಂ ಉಪಾಧ್ಯಕ್ಷ ನಿರ್ಮಲಾ ಮುನಿರಾಜು ವಿರುದ್ಧ ಅವಿಶ್ವಾಸ ನಿರ್ಣಯ ಸಭೆ 16ಕ್ಕೆ ಮುಂದೂಡಿಕೆ

    ಚಿಕ್ಕಬಳ್ಳಾಪುರ: ವಿಧಾನ ಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಪಿ.ನಿರ್ಮಲಾ ಮುನಿರಾಜು ವಿರುದ್ಧದ ಅವಿಶ್ವಾಸ ನಿರ್ಣಯದ ಅಗ್ನಿಪರೀಕ್ಷೆಯು ಮತ್ತೆ ಮುಂದೂಡಿಕೆಯಾಗಿದೆ.

    29 ಸದಸ್ಯರನ್ನೊಳಗೊಂಡ ಜಿಪಂನಲ್ಲಿ ಕಾಂಗ್ರೆಸ್ 21 ಸದಸ್ಯರೊಂದಿಗೆ ಸ್ಪಷ್ಟ ಬಹುಮತ ಹೊಂದಿದ್ದರೂ ಸ್ವಪಕ್ಷೀಯ ಉಪಾಧ್ಯಕ್ಷರನ್ನೇ ಕೆಳಗಿಳಿಸಲಾಗುತ್ತಿದೆ. ಮೊದಲು ಮೇ 20, ಬಳಿಕ ಅ.9 ರಂದು ಕರೆದಿದ್ದ ಅವಿಶ್ವಾಸ ನಿರ್ಣಯ ಸಭೆ ಈಗ ಮತ್ತೆ ಮುಂದೂಡಿಕೆಯಾಗಿದ್ದು ಅ.16ಕ್ಕೆ ನಿಗದಿಯಾಗಿದೆ ಎಂದು ಬೆಂಗಳೂರು ವಿಭಾಗದ ಪ್ರಾದೇಶಿಕ ಆಯುಕ್ತ ನವೀನ್ ರಾಜ್‌ಸಿಂಗ್ ತಿಳಿಸಿದ್ದಾರೆ.

    2016ರ ಮೇನಲ್ಲಿ ನಿರ್ಮಲಾ ಮುನಿರಾಜು ಅಧಿಕಾರ ಸ್ವೀಕರಿಸಿದ್ದು ಅಧ್ಯಕ್ಷರಾಗಿದ್ದ ಪಿ.ಎನ್.ಕೇಶವರೆಡ್ಡಿ, ಎಚ್.ವಿ.ಮಂಜುನಾಥ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ ಸಂದರ್ಭದಲ್ಲಿಯೇ ಇವರೂ ಸಹ ಪದತ್ಯಾಗ ಮಾಡಬೇಕಾಗಿತ್ತು. ಆದರೆ, ಅಧ್ಯಕ್ಷರ ವಿಚಾರವಾಗಿಯೇ ಉಂಟಾದ ರಾಜಕೀಯ ಬಂಡಾಯದ ವಿದ್ಯಮಾನಗಳು ಇವರ ಕುರ್ಚಿ ಉಳಿಸಿತ್ತು. ಬಳಿಕ 2019ರ ಅಕ್ಟೋಬರ್‌ನಲ್ಲಿ ಎಂ.ಬಿ.ಚಿಕ್ಕನರಸಿಂಹಯ್ಯ ಅಧ್ಯಕ್ಷರಾಗುತ್ತಿದ್ದಂತೆ ಉಪಾಧ್ಯಕ್ಷೆ ಕುರ್ಚಿ ಅಲುಗಾಟ ಜೋರಾಗಿದೆ.

    ವಿಧಾನ ಪರಿಷತ್ ಚುನಾವಣೆಗೆ ಅ.1 ರಿಂದ ಅ.12 ರವರೆಗೆ ನಾಮ ನಿರ್ದೇಶನ ಪ್ರಕ್ರಿಯೆಗಳು ಚಾಲ್ತಿಯಲ್ಲಿರುವುದೇ ಸಭೆ ಮುಂದೂಡಲು ಕಾರಣ ಎನ್ನಲಾಗಿದೆ.

    ಚಿಕ್ಕಬಳ್ಳಾಪುರ ಜಿಪಂ ಸಭಾಂಗಣದಲ್ಲಿ ಅ.9 ರಂದು ಬೆಳಗ್ಗೆ 11.30 ಕ್ಕೆ ಉಪಾಧ್ಯಕ್ಷರ ವಿರುದ್ಧ ಕರೆದಿದ್ದ ಅವಿಶ್ವಾಸ ನಿರ್ಣಯ ಸಭೆಯನ್ನು ವಿಧಾನ ಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ಅ.16ಕ್ಕೆ ಮುಂದೂಡಲಾಗಿದೆ. ನಿಯಮಾನುಸಾರ ಚುನಾವಣಾ ಪ್ರಕ್ರಿಯೆ ನಡೆಯಲಿದೆ.
    ನವೀನ್ ರಾಜ್ ಸಿಂಗ್, ಬೆಂಗಳೂರು ಪ್ರಾದೇಶಿಕ ಆಯುಕ್ತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts