More

    ಜಿಗೇರಿ ಕೆರೆಗ ಬಾಗಿನ ಅರ್ಪಣೆ

    ಜೇಂದ್ರಗಡ: ತಾಲೂಕಿನ ಜಿಗೇರಿ ಕೆರೆ ತುಂಬಿದ್ದರಿಂದ ಗ್ರಾಮಸ್ಥರು ಸೋಮವಾರ ವಿಶೇಷ ಪೂಜೆ ಸಲ್ಲಿಸಿ ಬಾಗಿನ ಅರ್ಪಿಸಿದರು.

    ಜಿಗೇರಿಯ ಗುರುಸಿದ್ಧೇಶ್ವರ ಸ್ವಾಮೀಜಿ ಹಾಗೂ ಕಾಲಕಾಲೇಶ್ವರ ದೇವಸ್ಥಾನದ ಅರ್ಚಕ ಮಲ್ಲಯ್ಯಸ್ವಾಮಿ ಗುರುಸ್ಥಳಮಠ ಮಾತನಾಡಿ, ‘ತುಂಬಿದ ಕೆರೆ ಕಟ್ಟೆಗಳಿಗೆ, ಹಳ್ಳಕೊಳ್ಳಗಳಿಗೆ, ತುಂಬಿ ಹರಿಯುವ ನದಿಗಳಿಗೆ ಕತಜ್ಞತೆ ಸಲ್ಲಿಸá-ವ ಮನೋಭಾವದಿಂದ ಪೂಜೆ ಸಲ್ಲಿಸುವುದು ನಮ್ಮ ಭಾರತೀಯ ಸಂಸ್ಕೃತಿಯಾಗಿದೆ. ಮನುಷ್ಯನ ಬದುಕಿನಲ್ಲಿ ಜೀವನಾಡಿಯಾಗಿರುವ ತುಂಬಿದ ಕೆರೆಗಳಿಗೆ ಬಾಗಿನ ಅರ್ಪಿಸಿದರೆ ಮುಂದಿನ ದಿನಗಲ್ಲಿಯೂ ಕೆರೆಗಳು ನೀರಿನಿಂದ ತುಂಬಿರಲಿ ಎನ್ನುವ ಭಕ್ತಿ ಸಮರ್ಪಿಸಿದಂತಾಗಿದೆ. ಹೀಗೆ ತುಂಬಿರುವ ಕೆರೆಗಳನ್ನು ಪೂಜಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಗಂಗೆ ನಮ್ಮೆಲ್ಲರ ಮೇಲೆ ದಯೆ ತೋರಿ, ಪ್ರತಿ ವರ್ಷ ಕೆರೆಗಳು ತುಂಬುವ ಮೂಲಕ ರೈತರಿಗೆ ದಯೆ ತೋರಲಿ’ ಎಂದರು.

    ಅರ್ಜುನ ರಾಠೋಡ, ದ್ಯಾಮಣ್ಣ ಗುರಿಕಾರ, ಕಳಕಪ್ಪ ಗೊಲ್ಲರ, ಮಲ್ಲಪ್ಪ ಕಮರಿ, ನಿಸಾರಲಿ ಜೂಲಕಟ್ಟಿ, ಭೀಮಣ್ಣ ರಜಪೂತ, ಸಿದ್ದಪ್ಪ ಕಾಡದ, ಮುದಕಪ್ಪ ಕಣಗೇರಿ, ರೇಣುಕಾಂತ ನಿಂಬಾಳ್ಕರ, ವೀರೇಶ ಹಿರೇಮಠ, ಪರಸಪ್ಪ ಕಂಬಿ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts