More

    ಜಿಂಕೆ ಹಾವಳಿಗೆ ರೈತರು ಕಂಗಾಲು

    ಡಂಬಳ: ಮುಂಗಾರು ಹಂಗಾಮಿನ ಪೂರ್ವದಲ್ಲಿ ಹೆಸರು ಮತ್ತು ಸೂರ್ಯಕಾಂತಿ ಬಿತ್ತನೆ ಮಾಡಿ ಇನ್ನೇನು ಬೆಳೆ ಕೈಗೆ ಬಂತು ಎನ್ನುವಷ್ಟರಲ್ಲಿ ಜಿಂಕೆ ಹಾವಳಿಯಿಂದ ಬೆಳೆ ನಾಶವಾಗಿ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ.

    ಡಂಬಳ ಗ್ರಾಮದ ಚನ್ನಪ್ಪ ಕರಡ್ಡಿ ತಮ್ಮ ಒಂದು ಎಕರೆ ಜಮೀನಿನಲ್ಲಿ 30 ರಿಂದ 40 ಸಾವಿರ ರೂ. ಖರ್ಚು ಮಾಡಿ ಸೂರ್ಯಕಾಂತಿ ಬೆಳೆದಿದ್ದಾರೆ. ಇನ್ನೇನು ಸೂರ್ಯಕಾಂತಿ ಹೂ ಬಿಟ್ಟು ತೆನೆ ಕಟ್ಟುವುದಷ್ಟೇ ಬಾಕಿ ಇತ್ತು. ಆದರೆ, ಜಿಂಕೆ ಹಿಂಡುಗಳು ಜಮೀನಿಗೆ ನುಗ್ಗಿ ಒಂದು ಎಕರೆ ಸೂರ್ಯಕಾಂತಿ ಮೊಗ್ಗು ತಿಂದು ಹೋಗಿವೆ.

    ರೈತರ ಹೆಣಗಾಟ: ಬೆಳೆ ಕಾಪಾಡಿಕೊಳ್ಳಲು ರೈತರು ಹಗಲು ರಾತ್ರಿ ಜಮೀನುಗಳಲ್ಲಿ ವಾಸ್ತವ್ಯ ಹೂಡಬೇಕಾಗಿದೆ. ಜಿಂಕೆ ಹಿಂಡುಗಳಿಂದ ಬೆಳೆ ರಕ್ಷಿಸಿಕೊಳ್ಳುವುದೇ ರೈತರಿಗೆ ಸವಾಲಾಗಿ ಪರಿಣಮಿಸಿದೆ. ಡಂಬಳ ವ್ಯಾಪ್ತಿಯ ಜಂತ್ಲಿ ಶಿರೂರು, ರಾಮನೇಹಳ್ಳಿ, ಯಕ್ಲಾಸಪೂರ, ಹಳ್ಳಿಗುಡಿ, ಹಳ್ಳಿಕೇರಿ, ಹೈತಾಪೂರ, ಪೇಠಾಲೂರ, ವೆಂಕಟಾಪೂರ, ಮೇವುಂಡಿ ಸೇರಿ ಇತರೆಡೆ ಹೆಸರು, ಸೂರ್ಯಕಾಂತಿ, ಉಳ್ಳಾಗಡ್ಡಿ, ಶೇಂಗಾ ಬೆಳೆಗೆ ಜಿಂಕೆಗಳ ಕಾಟ ಹೆಚ್ಚಾಗಿದೆ.

    ಜಿಂಕೆಗಳನ್ನು ಓಡಿಸಲು ಬೆದರು ಗೊಂಬೆ, ಪಟಾಕಿ ಹಾರಿಸುವುದು, ಕೇಕೆ ಹಾಕುವುದು ಹೀಗೆ ಹಲವು ವಿಧಾನ ಅನುಸರಿಸಿದ್ದರೂ ಬೆಳೆ ರಕ್ಷಿಸಿಕೊಳ್ಳಲಾಗುತ್ತಿಲ್ಲ. ಇದರಿಂದ ರೈತರು ಕಂಗಾಲಾಗಿದ್ದಾರೆ. ಹೀಗಾಗಿ ಜಿಂಕೆ ಹಾವಳಿಯಿಂದ ಬೆಳೆ ನಾಶವಾದ ರೈತರಿಗೆ ಸರ್ಕಾರ ಸೂಕ್ತ ಪರಿಹಾರ ನೀಡಬೇಕು ಎಂದು ಡಂಬಳ ವ್ಯಾಪ್ತಿಯ ರೈತರ ಆಗ್ರಹವಾಗಿದೆ.

    ಬೆಳೆ ರಕ್ಷಣೆಗೆ ಹಗಲು-ರಾತ್ರಿ ಹೊಲದಲ್ಲಿಯೇ ಗುಡಿಸಲು ಹಾಕಿಕೊಂಡು ಕಾಯುತ್ತಿದ್ದರೂ ಜಿಂಕೆ ಕಾಟ ತಪ್ಪುತ್ತಿಲ್ಲ. ಬಿತ್ತನೆಯಾದ ಬೆಳೆಗಳು ಇಳುವರಿ ಬರುವಷ್ಟರಲ್ಲಿ ಜಿಂಕೆ ಹಾವಳಿಯಿಂದ ಬೆಳೆ ನೆಲಕಚ್ಚುತ್ತಿ್ತೆ. ರೈತರು ಬದುಕುವುದಾದರೂ ಹೇಗೆ, ಸಂಬಂಧಪಟ್ಟ ಅಧಿಕಾರಿಗಳು ಜಿಂಕೆ ಹಾವಳಿ ತಪ್ಪಿಸಲು ಶಾಶ್ವತ ಪರಿಹಾರಿ ಕಂಡುಕೊಳ್ಳಬೇಕು.

    | ಚೆನ್ನಪ್ಪ ಕರಡ್ಡಿ, ಡಂಬಳ ಗ್ರಾಮದ ರೈತ

    ಈ ಭಾಗದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜಿಂಕೆಗಳು ಇರುವುದು ಗಮನಕ್ಕೆ ಬಂದಿದೆ. ಜಿಂಕೆ ಹಾವಳಿಯಿಂದ ಬೆಳೆಗಳು ಹಾಳಾದ ಜಮೀನಿಗೆ ಹೋಗಿ ಸರ್ವೆ ಮಾಡಿ ಅರಣ್ಯ ಇಲಾಖೆಯಿಂದ ಪರಿಹಾರ ನೀಡಲಾಗುತ್ತದೆ.

    | ಪ್ರದೀಪ ಪವಾರ್, ವಲಯ ಅರಣ್ಯಧಿಕಾರಿ ಮುಂಡರಗಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts