More

    ಜಿಂಕೆಗಳಿಗೆ ಆಹಾರವಾಗುತ್ತಿದೆ ಸೋಯಾ ಬೆಳೆ

    ಮಲ್ಲಪ್ಪಗೌಡ ಔರಾದ್
    ಸೋಯಾ ಬಿತ್ತನೆ ಮಾಡಿದ ರೈತರಿಗೆ ಸಾಲು-ಸಾಲು ಸಂಕಷ್ಟಗಳು ಎದುರಾಗಿವೆ. ಒಂದರಿಂದ ಹೊರಬರುವಷ್ಟರಲ್ಲಿ ಮತ್ತೊಂದು ಸಮಸ್ಯೆ ಕಾಡಲಾರಂಭಿಸಿದೆ. ನಿರಂತರ ಮಳೆ, ಸಹಸ್ರಪದಿ ಮತ್ತು ಬಸವನ ಹುಳುಗಳ ಕಾಟದ ಜತೆಗೆ ಈಗ ಜಿಂಕೆಗಳ ಹಾವಳಿ ಅನ್ನದಾತರನ್ನು ಹೈರಾಣಕ್ಕೆ ಸಿಲುಕಿಸಿದೆ.

    ಕಳೆದೊಂದು ವಾರದಲ್ಲಿ ತಾಲೂಕಿನಲ್ಲಿ ವಾಡಿಕೆ ಮಳೆ 40.50 ಮಿಮೀ ಇದ್ದು, 126.10 ಮಿಮೀ ಸುರಿದಿದೆ. ರೈತರು ಹೆಸರು, ತೊಗರಿ, ಉದ್ದು ಹಾಗೂ ಜೋಳ ಬಿತ್ತಿದ್ದರೂ ಜಾಸ್ತಿ ಪ್ರಮಾಣದಲ್ಲಿ ಸೋಯಾಬೀನ್ ಇದೆ. ಸಮೃದ್ಧವಾಗಿ ಬೆಳೆದು ನಿಂತ ಬೆಳೆಗಳೇ ಜಿಂಕೆಗಳಿಗೆ ಆಹಾರವಾಗುತ್ತಿದ್ದು, ಬೆಳೆ ಸಂರಕ್ಷಣೆ ಅನ್ನದಾತರಿಗೆ ದೊಡ್ಡ ತಲೆನೋವು ತಂದಿಟ್ಟಿದೆ.

    ಮುಂಗಾರು ಆರಂಭದಲ್ಲಿ ಬಿತ್ತನೆಗೆ ಸಾಕಾಗುವಷ್ಟು ಮಳೆ ಬರಲಿಲ್ಲ. ನಂತರ ಸುರಿದ ಅಲ್ಪಸ್ವಲ್ಪ ಮಳೆಯಲ್ಲೇ ರೈತರು ಹೇಗೋ ಭೂಮಿಗೆ ಬೀಜ ಹಾಕಿದ್ದು, ಅವು ಮೊಳಕೆಯೊಡೆದು ಹುಲುಸಾಗಿ ಬೆಳೆಯುವ ಹೊತ್ತಿಗೆ ನಿರಂತರ ಮಳೆಯಿಂದ ಹಾಳಾಗತೊಡಗಿದವು. ಈ ಮಧ್ಯೆ ಶಂಖ ಮತ್ತು ದುಡ್ಡಿನ ಹುಳುಗಳು ಬೆಳೆಗಳನ್ನು ತಿಂದು ಹಾಕುತ್ತಿವೆ. ಇದರಿಂದ ಕೆಲ ರೈತರು ಮತ್ತೆ ಬಿತ್ತನೆ ಮಾಡಿದ್ದಾರೆ. ಇದೀಗ ಜಿಂಕೆಗಳು ಹಿಂಡು-ಹಿಂಡಾಗಿ ಹೊಲಗಳಿಗೆ ಲಗ್ಗೆಯಿಟ್ಟು ತಿನ್ನುತ್ತಿರುವುದರಿಂದ ಅನ್ನದಾತರಿಗೆ ದಿಕ್ಕು ತೋಚದಂತಾಗಿದೆ.

    ವಡಗಾಂವ, ಖಾನಾಪುರ, ಬೇಲೂರ, ಸೋರಳ್ಳಿ, ಗಡಿಕುಶನೂರು, ಕರಂಜಿ, ಮಾನೂರ, ಗುಡಪಳ್ಳಿ, ಕೊಳ್ಳುರ್, ಯನಗುಂದಾ, ಏಕಂಬಾ, ಲಾಧಾ, ಧೂಪತ್ಮಹಾಗಾಂವ, ಚಿಂತಾಕಿ, ಹೊಕ್ರಾಣ, ಜಂಬಗಿ, ಸಾವರಗಾಂವ ಗ್ರಾಮಗಳ ಸುತ್ತಮುತ್ತ ಅರಣ್ಯ ಪ್ರದೇಶ ಇರುವುದರಿಂದ ಅಧಿಕ ಜಿಂಕೆಗಳು ವಾಸವಾಗಿವೆ. ಯಾರೂ ಕಾಣದಿದ್ದರೆ ಹಿಂಡು-ಹಿಂಡಾಗಿ ಹೊಲಕ್ಕೆ ನುಗ್ಗಿ ಬೆಳೆಗಳನ್ನು ತಿಂದು ನಾಶ ಮಾಡಿ ಅಲ್ಲಿಯೇ ಮಲಗುತ್ತಿವೆ. ಈ ಸಮಸ್ಯೆ ರೈತರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಬೆಳೆ ರಕ್ಷಿಸಲು ಅನೇಕ ಮಾಗರ್ೋಪಾಯಗಳನ್ನು ಕಂಡುಕೊಂಡರೂ ಜಿಂಕೆ ಹುಸಿಗೊಳಿಸುತ್ತಿವೆ.

    ಅರಣ್ಯ ಇಲಾಖೆ ಅಧಿಕಾರಿಗಳು ಕೂಡಲೇ ಎಚ್ಚೆತ್ತು ಜಿಂಕೆಗಳಿಗಾಗಿ ವನ್ಯಜೀವಿ ಧಾಮ ನಿಮರ್ಿಸಬೇಕು. ಇಲ್ಲವಾದರೆ ಅವುಗಳನ್ನು ಹಿಡಿದು ದೂರದ ಅರಣ್ಯಗಳಿಗೆ ಸ್ಥಳಾಂತರಿಸಬೇಕು ಎಂಬುದು ರೈತರ ಆಗ್ರಹವಾಗಿದೆ.

    ಹಲವು ವರ್ಷಗಳಿಂದ ಜಿಂಕೆಗಳು ಈ ಭಾಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬೀಡುಬಿಟ್ಟಿವೆ. ಬೆಳೆ ನಷ್ಟ ಅನುಭವಿಸಿದ ರೈತರು ಅರಣ್ಯ ಇಲಾಖೆ ಕಚೇರಿಗೆ ಭೇಟಿ ನೀಡಿ ಮಾಹಿತಿ ನೀಡಿದರೆ ಪರಿಹಾರ ದೊರಕಿಸಿಕೊಡಲಾಗುವುದು.
    | ಪ್ರೇಮಶೇಖರ ಚಾಂದೋರಿ, ಪ್ರಾದೇಶಿಕ ಅರಣ್ಯ ವಲಯ ಅಧಿಕಾರಿ

    ಮೊಳಕೆಯೊಡೆದು ಹುಲುಸಾಗಿ ಬೆಳೆಯುವ ಹಂತದಲ್ಲೇ ಜಿಂಕೆಗಳ ಹಿಂಡು ಹೊಲಗಳಿಗೆ ನುಗ್ಗಿ ಬೆಳೆ ತಿನ್ನುತ್ತಿವೆ. ಅಧಿಕಾರಿಗಳು ಕೂಡಲೇ ಗಮನಹರಿಸಿ ಪಯರ್ಾಯ ವ್ಯವಸ್ಥೆ ಕಲ್ಪಿಸಬೇಕು. ಬೆಳೆ ಹಾನಿ ಅನುಭವಿಸಿದವರಿಗೆ ಸೂಕ್ತ ಪರಿಹಾರ ಕೊಡಬೇಕು.
    | ಅನೀಲ ಗೌಡ, ಯುವ ರೈತ, ಬೇಲೂರ(ಎನ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts