More

    ಜಾಲಿಮುಳ್ಳು ಬಡಿದು ವಿನೂತನ ಪ್ರತಿಭಟನೆ

    ಯಾದಗಿರಿ: ನಗರದಲ್ಲಿ ಲಘು ವಾಹನ ನಿಲುಗಡೆಗೆ ಜಾಗೆ ನೀಡುವಂತೆ ಮಾಡಿದ ಮನವಿಗೆ ಹಾಗೂ ಪ್ರಮುಖ ರಸ್ತೆಗಳ ಪಾದಚಾರಿ ರಸ್ತೆ ಅತಿಕ್ರಮಿಸಿದ ಡಬ್ಬಿಗಳನ್ನು ತೆರವುಗೊಳಿಸುವ ಮನವಿಗೂ ಸ್ಪಂದಿಸದೇ ಇರುವ ನಗರಸಭೆ ಪೌರಾಯುಕ್ತರ ಕಚೇರಿಗೆ ಜಾಲಿಮುಳ್ಳು ಬಡಿದು ಬೃಹತ್ ಪ್ರತಿಭಟನೆಯನ್ನು ಫೆ. 5 ರಂದು ಬೆಳಗ್ಗೆ 10 ಗಂಟೆಗೆ ಹಮ್ಮಿಕೊಳ್ಳಲಾಗಿದೆ.

    ನಾಗರಿಕರು ಸಲ್ಲಿಸಿದ ಮನವಿಗೆ 7 ದಿನಗಳಲ್ಲಿ ಹಿಂಬರಹದ ಮೂಲಕ ಉತ್ತರ ನೀಡಬೇಕು ಆದರೆ ಅಕ್ಟೊಬರ್ 13 ರಂದು ಭಾರಿ ಪ್ರತಿಭಟನೆ ಮಾಡಿ ಮನವಿ ಸಲ್ಲಿಸಿದಾಗ ಎಡಿಸಿ ಅವರು ಮೂರೇ ದಿನದಲ್ಲಿ ಸಭೆ ಕರೆದು ತಕ್ಷಣ ಕ್ರಮಕ್ಕೆ ಸೂಚನೆ ನೀಡಿದರೂ ಇದುವರೆಗೆ ಪೌರಾಯುಕ್ತರಿಂದ ಯಾವುದೇ ಸ್ಪಂದನೆ ಮಾಡಿಲ್ಲ.

    ಕೆಲಸ ಸರಿಯಾಗಿ ಮಾಡದ ಪೌರಾಯುಕ್ತರಿಂದಾಗಿ ನಗರ ಗಬ್ಬೆದ್ದು ನಾರುತ್ತಿದೆ ಸರಿಯಾದ ನೈರ್ಮಲ್ಯ ನಿರ್ವಹಣೆ ಆಗುತ್ತಿಲ್ಲ. ಆದರೆ ಹಣ ಮಾತ್ರ ನೀರಿನಂತೆ ಖರ್ಚಾಗುತ್ತಿದೆ. ಆದರೆ ಕನಿಷ್ಟ ನೀರಿನ ಸೌಲತ್ತು ಸರಿಯಾಗಿ ಜನತೆಗೆ ಸಿಗುತ್ತಿಲ್ಲ, ದೂರವಾಣಿ ಕರೆ ಮಾಡಿದರೂ ಸ್ಪಂದಿಸುವುದಿಲ್ಲ. ಜಿಲ್ಲೆಯಾಗಿ 13 ವರ್ಷವಾದರೂ ನಗರ ಸೌಂದರ್ಯಿಕರಣಾಗಿಲ್ಲ ಎಂದು ಅವರು ದೂರಿದ್ದಾರೆ.
    ಖಂಡಿಸಿ ಮುಳ್ಳು ಬೇಲಿ ಹಚ್ಚಿ ಪ್ರತಿಭಟನೆಗೆ ನಿರ್ಧರಿಸಲಾಗಿದ್ದು, ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ನಗರಸಭೆಗೆ ಪಾಠ ಕಲಿಸಲು ಮುಂದಾಗಬೇಕೆ0ದು ಸಾಮಾಜಿಕ ಹೋರಾಟಗಾರ ಉಮೇಶ ಮುದ್ನಾಳ
    ಮನವಿ ಮಾಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts