More

    ಜಾಲಿಕಟ್ಟಿ ಬಸವೇಶ್ವರ ರಥೋತ್ಸವ ಅದ್ದೂರಿ

    ಬೆನಕಟ್ಟಿ: ಸಮೀಪದ ಜಾಲಿಕಟ್ಟಿ ಶ್ರೀ ಬಸವೇಶ್ವರ ರಥೋತ್ಸವ ಸಾವಿರಾರು ಭಕ್ತರ ಮಧ್ಯೆ ವಿಜೃಂಭಣೆಯಿಂದ ಜರುಗಿತು.

    ಬೆಳಗ್ಗೆಯಿಂದಲೇ ಅನೇಕ ಜಿಲ್ಲೆಗಳಿಂದ ಭಕ್ತರ ದಂಡು ಮೋಟಾರ ಸೈಕಲ್, ಎತ್ತಿನ ಬಂಡಿ, ಸೈಕಲ್, ರಿಕ್ಷಾ, ಟೆಂಪೋ ಹಾಗೂ ಪಾದಯಾತ್ರೆ ಮೂಲಕ ಅನೇಕ ಕಡೆಗಳಿಂದ ಆಗಮಿಸಿದ್ದರು. ಭಕ್ತರು ಶ್ರೀ ಬಸವೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ, ನೈವೇದ್ಯ, ಕಾಣಿಕೆ ಅರ್ಪಿಸಿ ಹರಕೆ ತೀರಿಸಿದರು.

    ಸಂಜೆಯಾಗುತ್ತಿದ್ದಂತೆ ಶ್ರೀ ಬಸವೇಶ್ವರ ರಥೋತ್ಸವ ಸಾವಿರಾರು ಭಕ್ತರ ಮಧ್ಯೆ ಹರಹರ ಮಹಾದೇವ ಎಂಬ ಘೋಷಣೆಯೊಂದಿಗೆ ಎಳೆಯಲಾಯಿತು. ಅನೇಕ ಭಕ್ತರು ಕಾಯಿ, ಉತ್ತತ್ತಿ ಹಾಗೂ ಬಾಳೆಹಣ್ಣು ರಥೋತ್ಸವಕ್ಕೆ ಅರ್ಪಿಸಿದರು.

    ಜಾತ್ರೆಯಲ್ಲಿ ಮಿಠಾಯಿ, ಆಟಕಿ ಸಾಮಾನುಗಳ ವ್ಯಾಪಾರ ಜೋರಾಗಿ ನಡೆಯಿತು. ರಥೋತ್ಸವದ ಬಳಿಕ ಯಾತ್ರಿಕರು ಗುಡ್ಡವನ್ನೇರಿ ಕುಟುಂಬ ಸಮೇತ ಆಗಮಿಸಿ ಭಜಿ ಚುನಮರಿ ಸವಿಯುತ್ತಿರುವ ದೃಶ್ಯ ಕಂಡು ಬಂದಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts