More

    ಜಾನುವಾರು ರಕ್ಷಣೆ ಗೋ ಶಾಲೆಗಳ ನಿರ್ಮಾಣ

    ಚಿತ್ರದುರ್ಗ:ಗೋಹತ್ಯೆ ನಿಷೇಧ ವಿಧೇಯಕ ವಿಧಾನ ಪರಿಷತ್‌ನಲ್ಲೂ ಪಾಸಾದ ಬಳಿಕ ಜಾನುವಾರುಗಳ ರಕ್ಷಣೆಗಾಗಿ ರಾಜ್ಯಸರ್ಕಾರ ಸೂಕ್ತ ಕ್ರಮಗಳನ್ನು ಕೈಗೊಳ್ಳಲಿದೆ ಎಂದು ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಹೇಳಿದರು.
    ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ 96ನೇ ಜನ್ಮ ದಿನಾಚರಣೆ ಅಂಗವಾಗಿ ಬಿಜೆಪಿ ಯುವ ಮೋರ್ಚಾ ಕಾರ‌್ಯಕರ್ತರು ನಗರದ ಚಿಕ್ಕಪೇಟೆ ಶ್ರೀ ಸುಬ್ರಮಣ್ಯ ದೇವಾಲಯದಲ್ಲಿ ಶುಕ್ರವಾರ ಏರ್ಪಡಿಸಿದ್ದ ಗೋ ಪೂಜೆ ಕಾರ‌್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ಕಾಯ್ದೆ ಜಾರಿ ನಂತರದಲ್ಲಿ ವಯಸ್ಸಾದ ಜಾನುವಾರುಗಳ ರಕ್ಷಣೆ ಸರ್ಕಾರದ್ದೇ. ಇದಕ್ಕಾಗಿ ಅಗತ್ಯ ಗೋ ಶಾಲೆಗಳನ್ನು ಸ್ಥಾಪಿಸಬೇಕಾಗುತ್ತದೆ. ಈ ದೇವಾಲಯದಲ್ಲಿ ಜಾನುವಾರು ಸಂಖ್ಯೆ ಹೆಚ್ಚಾಗಿ,ಸ್ಥಳಾವಕಾಶದ ಕೊರತೆಯಾಗಿರುವುದನ್ನು ಗಮನಿಸಿದ್ದೇನೆ ಎಂದರು.
    ಅಟಲ್ ಬಿಹಾರಿ ವಾಜಪೇಯಿ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ದೇಶಾಭಿಮಾನಿಗಳಾಗ ಬಹುದೆಂದ ಶಾಸಕರು,ದೇಶ ಕಟ್ಟುವ ಕೆಲಸದಲ್ಲಿ ವಾಜಪೇಯಿ ಜತೆ ಪಂಡಿತ್ ದೀನ್‌ದಯಾಳ್ ಉಪಾಧ್ಯಾಯ,ಶ್ಯಾಮ್‌ಪ್ರಸಾದ್ ಮುಖರ್ಜಿ,ಲಾಲ್‌ಕೃಷ್ಣ ಆಡ್ವಾನಿ ನೆರವಾದರು.
    ಬಡವರ ಕಲ್ಯಾಣ ಕಾರ‌್ಯಕ್ರಮಗಳು ಹಾಗೂ ಉತ್ತಮ ಆಡಳಿತ ಅಟಲ್ ಆಡಳಿತಾವಧಿಯಿಂದ ಆರಂಭವಾದವು.ಅವರ ರಾಷ್ಟ್ರ ಸೇವೆ ಮತ್ತು ಕರ್ತವ್ಯ ನಿಷ್ಠೆ ಎಲ್ಲರಿಗೂ ಸ್ಫೂರ್ತಿ. ವಾಜಪೇಯಿ ತತ್ವಾದರ್ಶಗಳು,ದೇಶದ ಪ್ರಗತಿ,ಸಮರ್ಪಣೆ ಭಾವಕ್ಕೆ ಶಕ್ತಿ ನೀಡುತ್ತದೆ ಎಂದರು. ದೇವಾಲಯದ ಹೊರಗೂ ಹಸುಗಳನ್ನು ಕಟ್ಟುವುದರಿಂದ ತೊಂದರೆಯಾಗುತ್ತಿದ್ದು, ಸರ್ಕಾರದಿಂದ ಸೂಕ್ತ ಜಾಗ ಮಂಜೂರಿಗೆ ಸ್ಥಳೀಯ ರು ಮನವಿ ಮಾಡಿದರು.
    ಕುಡಾ ಅಧ್ಯಕ್ಷ ಟಿ.ಬದ್ರಿನಾಥ್,ಯುವ ಮೋರ್ಚಾ ಜಿಲ್ಲಾಧ್ಯಕ್ಷ ಹನುಮಂತೇಗೌಡ, ನಗರಸಭಾ ಸದಸ್ಯರಾದ ವೆಂಕಟೇಶ್,ಹರೀಶ್, ಮುಖಂಡರಾದ ಸುರೇಶ್ ಸಿದ್ದಾಪುರ,ಮಲ್ಲಿಕಾರ್ಜುನಯ್ಯ,ನಾಗರಾಜ್‌ಬೇದ್ರೆ,ನರೆಂದ್ರನಾಥ್,ಶಿವಣ್ಣಾಚಾರ್,ಸೋಮು, ಚಂದ್ರಶೇಖರ್,ಸಾಗರ್,ವಿರೂಪಾಕ್ಷ,ರಾಮು,ಧನಂಜಯ, ಮಧು ಮತ್ತಿತರರು ಇದ್ದರು. ಕಾರ‌್ಯಕ್ರಮದ ಕುರಿತಂತೆ ಸಮರ್ಪಕ ಮಾಹಿತಿ ಕೊಡ ಪಕ್ಷದ ಕೆಲ ಪದಾಧಿಕಾರಿಗಳ ವಿರುದ್ಧ ಶಾಸಕರು ಗರಂ ಆದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts