More

    ಜಾನುವಾರುಗಳಿಗೆ ಚರ್ಮಗಂಟು ರೋಗ

    ಮಲ್ಲು ಕಳಸಾಪುರ ಲಕ್ಷೆ್ಮೕಶ್ವರ

    ನಿರಂತರ ಮಳೆಯಿಂದ ಜಾನುವಾರುಗಳನ್ನು ರಕ್ಷಿಸá-ವುದೇ ದೊಡ್ಡ ಸವಾಲಾಗಿದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ದನ-ಕರá-ಗಳಿಗೆ ಚರ್ಮಗಂಟು ರೋಗ ಆವರಿಸುತ್ತಿರುವುದು ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಈ ರೋಗದಿಂದ ಆತಂಕಗೊಂಡಿರá-ವ ರೈತರು ಪಶು ಚಿಕಿತ್ಸಾಲಯಕ್ಕೆ ದೌಡಾಯಿಸಿ ಜಾನುವಾರುಗಳ ಆರೋಗ್ಯ ರಕ್ಷಣೆಗಾಗಿ ಚಿಕಿತ್ಸೆ ಕೊಡಿಸುತ್ತಿದ್ದಾರೆ.

    8-10 ದಿನಗಳಿಂದ ಲಕ್ಷೆ್ಮೕಶ್ವರ ಪಟ್ಟಣದ ಹಾಗೂ ತಾಲೂಕಿನ ಸೂರಣಗಿ, ಬಾಲೆಹೊಸೂರ, ದೊಡ್ಡೂರ, ಉಂಡೇನಹಳ್ಳಿ, ಅಡರಕಟ್ಟಿ, ಬಟ್ಟೂರ, ಬಡ್ನಿ, ಆದ್ರಳ್ಳಿ ಸೇರಿ ಅನೇಕ ಗ್ರಾಮಗಳ ನೂರಾರು ಜಾನುವಾರುಗಳಿಗೆ ಈ ರೋಗ ತಗುಲಿದೆ. ಮುಖ್ಯವಾಗಿ ಎತ್ತು, ಆಕಳು, ಕರುಗಳಿಗೆ ಈ ಚರ್ಮಗಂಟುರೋಗ (ಲುಂಪಿಸ್ಕಿನ್) ಕಾಣಿಸಿಕೊಂಡಿದ್ದು ರೈತ ಸಮುದಾಯವನ್ನು ಚಿಂತೆಗೀಡು ಮಾಡಿದೆ. ಮೊದಲು ಮಲೆನಾಡು ಪ್ರದೇಶಗಳಲ್ಲಿ ಕಾಣಿಸಿಕೊಂಡಿದ್ದ ಈ ರೋಗ ಇದೀಗ ರಾಜ್ಯದ ಎಲ್ಲೆಡೆ ಆವರಿಸಿಕೊಂಡಿದೆ. ಜನರಿಗೆ ಕರೊನಾ ಆವರಿಸುವಂತೆ ಜಾನುವಾರುಗಳಿಗೆ ಚರ್ಮಗಂಟುರೋಗ ಆವರಿಸುತ್ತಿದೆ.

    ರೋಗದ ಲಕ್ಷಣ: ಅತಿಯಾದ ಮಳೆ, ಹಸಿರು ಕಳೆ ಹೆಚ್ಚಿರುವುದು, ಕೊಳಚೆ ನಿರ್ವಣ, ನೊಣ, ಸೊಳ್ಳೆಗಳ ಕಡಿತದಿಂದ ಎತ್ತು, ಆಕಳು, ಕರುಗಳ ಮೈಮೇಲೆ ಗಂಟುಗಳು (ಗುಳ್ಳೆ) ಕಾಣಿಸಿಕೊಳ್ಳುತ್ತವೆ. ಇದರಿಂದ ಜ್ವರ, ಕಣ್ಣುಗಳಲ್ಲಿ ನೀರು ಸೋರುವುದು, ಕಾಲು ಬಾವು, ಚಿಕಿತ್ಸೆ ತಡವಾದರೆ ಗಂಟುಗಳು ಹುಣ್ಣಾಗುತ್ತವೆ. ಅತಿಯಾದರೆ ಹುಳುಗಳೂ ಕಾಣಿಸಿಕೊಳ್ಳುತ್ತವೆ. ರೋಗಬಾಧೆಯಿಂದ ಜಾನುವಾರುಗಳು ಆಹಾರ ಸೇವಿಸುವುದಿಲ್ಲ, ಅಶಕ್ತಿ ಹೊಂದುತ್ತವೆ ಮತ್ತು ಹಸá-ಗಳಲ್ಲಿ ಹಾಲು ಕಡಿಮೆಯಾಗುತ್ತದೆ. ಕೆಲವು ಬಾರಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಡá-ತ್ತವೆ. ಪಟ್ಟಣದ ಹೊಳಲಪ್ಪ ಹಾವನೂರ ಹಾಗೂ ಸೂರಣಗಿಯ ಪ್ರಕಾಶ ಕಳ್ಳಿಹಾಳ ಎಂಬá-ವವರ ಲಕ್ಷ ರೂ. ಕಿಮ್ಮತ್ತಿನ ಎತ್ತುಗಳು ಮೃತಪಟ್ಟಿದ್ದು ರೈತರಲ್ಲಿ ಆತಂಕ ಹೆಚ್ಚಿಸಿದೆ.

    ಗಾಯದ ಮೇಲೆ ಬರೆ..! ಎತ್ತುಗಳಿಗೆ ತಗಲುತ್ತಿರುವ ಚರ್ಮಗಂಟು ರೋಗದಿಂದ ಕಳೆದ 15 ದಿನಗಳಿಂದ ಬೆಲೆ ಬಾಳುವ ಎತ್ತು, ಆಕಳು, ಕರುಗಳು ಸಾವು ಬದುಕಿನ ನಡುವೆ ಹೋರಾಡುತ್ತಿವೆ. ಆಹಾರ, ನೀರು ಸೇವಿಸದೆ ನಿತ್ರಾಣಗೊಂಡಿದ್ದು ಎದ್ದು ಅಡ್ಡಾಡಲೂ ಆಗದಂತಹ ಸ್ಥಿತಿಗೆ ತಲá-ಪಿವೆ. ಆಸ್ಪತ್ರೆಗಳಲ್ಲಿ ಪಶು ವೈದ್ಯರ ಕೊರತೆಯಿಂದ ಸೂಕ್ತ ಚಿಕಿತ್ಸೆ ಸಿಗುತ್ತಿಲ್ಲ. ಸರ್ಕಾರಿ ಪಶು ಆಸ್ಪತ್ರೆಯಲ್ಲಿ ಸಮರ್ಪಕ ಔಷಧ ಸಿಗá-ತ್ತಿಲ್ಲ. ಹೊರಗಡೆ ತೆಗೆದá-ಕೊಳ್ಳುವಂತೆ ಔಷಧ ಬರೆದುಕೊಡುತ್ತಾರೆ. ಮೊದಲೇ ಅತಿವೃಷ್ಟಿಯಿಂದ ಸಂಕಷ್ಟದಲ್ಲಿರುವ ರೈತರಿಗೆ ಇದು ಮತ್ತಷ್ಟು ಸಂಕಷ್ಟ ತಂದೊಡ್ಡಿದೆ. ಕೂಡಲೆ ಜಿಲ್ಲಾ ಪಶು ವೈದ್ಯಕೀಯ ಇಲಾಖೆ ಇತ್ತ ಗಮನ ಹರಿಸಬೇಕು ಎಂದು ರೈತರಾದ ನವೀನ ನರೇಗಲ್ಲ. ಚಂದ್ರು ನುಚ್ಚಂಬಲಿ, ಯಲ್ಲಪ್ಪ ಹುರಕನವರ, ಪುಟ್ಟಪ್ಪ ಬಾರಕೇರ, ರಾಮಪ್ಪ ಟೋಕಾಳಿ, ಫಕೀರಗೌಡ ಪಾಟೀಲ, ಖಾದರಬಾಷಾ ಹೊಸಮನಿ ಆಗ್ರಹಿಸಿದ್ದಾರೆ.

    ಈ ರೋಗ ಕಾಣಿಸಿಕೊಂಡ ಜಾನುವಾರುಗಳನ್ನು ಪ್ರತ್ಯೇಕವಾಗಿಸಿ ಚಿಕಿತ್ಸೆ ಕೊಡಿಸಬೇಕು. ಕೊಟ್ಟಿಗೆ ಸುತ್ತಲೂ ಕೊಳಚೆ ನೀರು, ಗಲೀಜು ಇರದಂತೆ ನೋಡಿಕೊಳ್ಳಬೇಕು. ಕುಡ್ಡುನೊಣ, ಸೊಳ್ಳೆ ಕಡಿತ ತಪ್ಪಿಸಲು ಕೊಟ್ಟಿಗೆಯಲ್ಲಿ ಬೇವಿನ ಸೊಪ್ಪಿನ ಹೊಗೆ ಹಾಕಬೇಕು. ಮೈಗೆ ಡಾಂಬರ್ ಗೋಲಿ ಹಚ್ಚಬೇಕು. ಸದ್ಯಕ್ಕೆ ಗೋಟ್​ಪಾಕ್ಸ್ ಎಂಬ ವ್ಯಾಕ್ಸಿನ್ ಜತೆಗೆ ಕೆಲ ರೋಗ ನಿರೋಧಕ ಔಷಧಗಳನ್ನು ನೀಡಲಾಗುತ್ತಿದೆ. ಇದು ಮಾರಣಾಂತಿಕ ಕಾಯಿಲೆಯಲ್ಲ. ಸರಿಯಾದ ವ್ಯವಸ್ಥೆ, ಮುಂಜಾಗ್ರತೆ ಕ್ರಮ, ಔಷಧೋಪಚಾರದಿಂದ 10-12 ದಿನಗಳಲ್ಲಿ ರೋಗ ನಿವಾರಣೆಯಾಗುತ್ತದೆ. ಸಿಬ್ಬಂದಿ ಕೊರತೆಯ ಮಧ್ಯೆ ಪಟ್ಟಣ ಸೇರಿ ಗ್ರಾಮೀಣ ಪ್ರದೇಶಗಳಲ್ಲಿ ಈ ಬಗ್ಗೆ ರೈತರಿಗೆ ಅರಿವು ಮೂಡಿಸುವ ಮೂಲಕ ಚಿಕಿತ್ಸಾ ಶಿಬಿರ ಹಮ್ಮಿಕೊಳ್ಳಲಾಗುತ್ತಿದೆ.
    | ಎನ್.ಎಂ. ಹವಳದ, ತಾಲೂಕು ಪಶು ಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts