More

    ಜಾತ್ರೆ ಅಂಗಡಿಗಳ ಜಾಗ ಹರಾಜು ದಾಖಲೆ

    ಶಿರಸಿ: ಮಾರಿಕಾಂಬಾ ದೇವಿ ಜಾತ್ರೆಯ ಅಂಗಡಿಗಳ ಜಾಗ ಹರಾಜು ಪ್ರಕ್ರಿಯೆ ಗುರುವಾರದಿಂದ ಆರಂಭವಾಗಿದ್ದು, ಕಿಕ್ಕಿರಿದು ಜನ ಸೇರುವ ಪ್ರಮುಖ ಸ್ಥಳ ಕೋಣನಬಿಡ್ಕಿಯ ಜಾಗ ಕಳೆದೆಲ್ಲ ಜಾತ್ರೆಗಳಿಗಿಂತ ಹೆಚ್ಚಿನ ಮೊತ್ತಕ್ಕೆ ಹರಾಜಾಗಿ ದಾಖಲೆ ಸೃಷ್ಟಿಸಿದೆ.

    ಮಾರ್ಚ್ 3ರಿಂದ 11ರವರೆಗೆ ನಡೆಯಲಿರುವ ಮಾರಿಕಾಂಬಾ ದೇವಿ ಜಾತ್ರೆಯ ಪ್ರಮುಖ ಪ್ರಕ್ರಿಯೆಗಳಲ್ಲಿ ಒಂದಾದ ಹಂಗಾಮಿ ಅಂಗಡಿಗಳ ಹರಾಜು ಗುರುವಾರ ಆರಂಭವಾಗಿದ್ದು, ಮಾರಿಕಾಂಬಾ ದೇವಿ ಗದ್ದುಗೆಯ ಬಳಿ ಇರುವ ಕೋಣನಬಿಡ್ಕಿ ಜಾಗ ಪ್ರಸಕ್ತ ಜಾತ್ರೆಯಲ್ಲಿ ಕಳೆದ ಬಾರಿಗಿಂತ ದುಪ್ಪಟ್ಟು ಹಣಕ್ಕೆ ಮಾರಾಟವಾಗಿದೆ. ಈ ಸ್ಥಳದ ಪ್ಲಾಟ್ 1ಕ್ಕೆ ದೇವಸ್ಥಾನದಿಂದ 25 ಲಕ್ಷ ರೂ., 2ಕ್ಕೆ 20 ಲಕ್ಷ ರೂ., 3ಕ್ಕೆ 3 ಲಕ್ಷ ರೂ. ಹಾಗೂ 4ಕ್ಕೆ 3 ಲಕ್ಷ ರೂ. ಕನಿಷ್ಠ ಮೊತ್ತ ನಿಗದಿಪಡಿಸಲಾಗಿತ್ತು. ಅದರಂತೆ ಪ್ಲಾಟ್ ಒಂದನ್ನು ರಾಘವೇಂದ್ರ ಶೆಟ್ಟಿ ಎಂಬುವವರು 33 ಲಕ್ಷ ರೂ.ಗೆ ಖರೀದಿಸಿದರೆ, ಪ್ಲಾಟ್ 2 ಅನ್ನು ಪವನರಾಜ ಲಕ್ಷ್ಮಣ ನಾಯ್ಕ ಎಂಬುವರು 28 ಲಕ್ಷ ರೂ.ಗೆ ಖರೀದಿಸಿದ್ದಾರೆ. ಪ್ಲಾಟ್ 3 ಅನ್ನು ರಾಜೀವ ಪೂಜಾರಿ ಎಂಬುವರು 3 ಲಕ್ಷ ರೂ. ಹಾಗೂ ಪ್ಲಾಟ್ 4 ಅನ್ನು ಟಿ.ಟಿ.ರಾಜು ಎಂಬುವರು 4 ಲಕ್ಷ ರೂ. ಗೆ ಖರೀದಿಸಿದ್ದಾರೆ. ಒಟ್ಟು 69 ಲಕ್ಷ ರೂ.ಗೆ ಈ ನಾಲ್ಕು ಪ್ಲಾಟ್​ಗಳನ್ನು ಖರೀದಿಸಿದ್ದಾರೆ. ಪ್ಲಾಟ್ 1 ಮತ್ತು 2 ದೊಡ್ಡದಾಗಿದ್ದು, ಮೂರು ಚಿಕ್ಕದಾಗಿದೆ.

    ಜಿಲ್ಲಾಧಿಕಾರಿಗಳ ಆದೇಶದಂತೆ ಭಕ್ತಾದಿಗಳಿಗೆ ಓಡಾಡಲು ಹೆಚ್ಚಿನ ಸ್ಥಳಾವಕಾಶ ನೀಡಬೇಕೆಂದು ಅಂಗಡಿಗಳ ಸಂಖ್ಯೆ ಕಡಿಮೆಗೊಳಿಸಲಾಗಿದೆ. ಅಂಗಡಿ ಹರಾಜು ಪ್ರಕ್ರಿಯೆಯಲ್ಲಿ ಮಧ್ಯವರ್ತಿಗಳು ಹಣ ಗಳಿಕೆ ಮಾಡಿದ್ದು ಕಂಡುಬಂದಿದ್ದು, ಅದನ್ನು ತಪ್ಪಿಸುವ ಉದ್ದೇಶದಿಂದ ಒಬ್ಬ ವ್ಯಕ್ತಿಗೆ ಒಂದು ಪ್ಲಾಟ್ ಖರೀದಿಸುವ ಅವಕಾಶ ಕಲ್ಪಿಸಲಾಗಿದೆ.

    ಇಂದು ಎರಡನೇ ಹರಾಜು: ನಗರದ ಬಿಡ್ಕಿಬೈಲ್, ಟೆಂಪೊ ಸ್ಟಾ್ಯಂಡ್ ಬಳಿಯ ಪ್ಲಾಟ್ ಒಂದು ಮತ್ತು ಎರಡು, ಟೆಂಪೊ ಸ್ಟಾ್ಯಂಡ್ ಪಕ್ಕದ ಸ್ಥಳ, ಮಿರ್ಜಾನ್ ಪೆಟ್ರೋಲ್ ಬಂಕ್ ಹಾಗೂ ಅರಳಿಕಟ್ಟೆ ಬಳಿಯ ಪ್ಲಾಟ್​ಗಳಿಗೆ ಶುಕ್ರವಾರ ಹರಾಜು ಪ್ರಕ್ರಿಯೆ ನಡೆಯಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts