More

    ಜಾಗೃತ ಹಿಂದು ಸಮಾಜದಿಂದ ಅಖಂಡ ಭಾರತ ನಿರ್ಮಾಣ

    ಕಡೂರು: ಜಾಗೃತ ಹಿಂದು ಸಮಾಜದಿಂದ ಮಾತ್ರ ಅಖಂಡ ಭಾರತ ನಿರ್ಮಾಣ ಸಾಧ್ಯ. ಧರ್ಮದ ಮೇಲಿನ ದಬ್ಬಾಳಿಕೆ ಮೆಟ್ಟಿನಿಂತು ವಿರೋಧಿಗಳಿಗೆ ತಕ್ಕ ಉತ್ತರ ನೀಡಲು ಸಮಸ್ತ ಹಿಂದು ಸಮಾಜ ಒಗ್ಗೂಡಬೇಕಿದೆ ಎಂದು ವಾಗ್ಮಿ ಚೈತ್ರಾಶ್ರೀ ಕುಂದಾಪುರ ಹೇಳಿದರು.

    ಪಟ್ಟಣದ ಕೋಟೆ ಶ್ರೀ ಪಾತಾಳಾಂಜನೇಯ ಸ್ವಾಮಿ ದೇವಾಲಯ ಸಮೀಪ ವಿಶ್ವ ಹಿಂದು ಪರಿಷತ್ ಮತ್ತು ಬಜರಂಗದಳದಿಂದ ದದತ್ತ ಜಯಂತಿ ಉತ್ಸವದ ಅಂಗವಾಗಿ ಸೋಮವಾರ ಸಂಜೆ ಆಯೋಜಿಸಿದ್ದ ಹಿಂದು ಸಮ್ಮಿಲನ ಕಾರ್ಯಕ್ರಮದಲ್ಲಿ ಮಾತನಾಡಿ, ಹಿಂದುತ್ವದ ಬಗ್ಗೆ ಅಸೆಡ್ಡೆ ತೋರುವ ಹಿತ ಶತ್ರುಗಳ ವಿರುದ್ಧ ನಾವು ಸದಾ ಜಾಗೃತಗೊಳ್ಳಬೇಕಿದೆ ಎಂದರು.

    ಹಿಂದುಗಳು ವಾರದಲ್ಲಿ ಒಂದು ದಿನ ನಮ್ಮ ಊರಿನ ದೇವಾಲಯಗಳಿಗೆ ಕುಟುಂಬಸ್ಥರೊಡನೆ ಭೇಟಿ ನೀಡುವ ಸಂಪ್ರದಾಯ ರೂಢಿಸಿಕೊಳ್ಳಬೇಕಿದೆ. ಸೌಹಾರ್ದತೆಯಿಂದ ಮನೆಯ ಕುಟುಂಬದ ಜತೆ ಸಮ್ಮಿಲನ ಉಳಿಸಿಕೊಳ್ಳಬೇಕಿದೆ. ತಮ್ಮ ಮನೆ ಮಕ್ಕಳಿಗೆ ಪಾಲಕರು ಬಾಂದವ್ಯತೆಯಿಂದ ಉಪಚರಿಸಿದಾಗ ಮಕ್ಕಳು ಸಾಗುತ್ತಿರುವ ಹಾದಿ ತಿಳಿಯಲಿದೆ. ಆದರೆ ಮೊಬೈಲ್ ಪ್ರಪಂಚದಲ್ಲಿ ಬೇರೆಡೆ ಗಮನ ಸೆಳೆದು ಹಲವು ಅನಾಹುತಗಳಿಗೆ ದಾರಿಯಾಗುತ್ತಿರುವುದು ವಿಪರ್ಯಾಸ ಎಂದರು.

    ಬೀರೂರು ರಂಭಾಪುರಿ ಶಾಖಾ ಮಠದ ಶ್ರೀ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಸಮಾಜದ ಬಹುತೇಕ ಯುವ ಪೀಳಿಗೆಯಲ್ಲಿ ಪ್ರಜ್ಞಾವಂತಿಕೆ ಕೊರತೆಯಾಗಿರುವುದೇ ಹಲವು ನೂನ್ಯತೆಗಳಿಗೆ ದಾರಿಯಾಗುತ್ತಿರುವುದು ದುರ್ದೈವದ ಸಂಗತಿ. ಅಖಂಡ ಹಿಂದು ಸಮಾಜದ ಉಳಿವಿಗೆ ನಾವು ಕಟ್ಟಿಬದ್ದರಾಗಬೇಕಿದೆ. ಸಮಾಜದ ಧ್ಯೇಯಗಳ ಮೂಲಕ ಸನ್ಮಾರ್ಗದಲ್ಲಿ ನಾವೆಲ್ಲರೂ ಸಾಗಬೇಕಿದೆ ಎಂದರು.

    ಯಳನಡು ಮಠದ ಶ್ರೀಜ್ಞಾನಪ್ರಭು ಸಿದ್ದರಾಮದೇಶಿ ಕೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ವಿಶ್ವ ಹಿಂದುಪರಿಷತ್ ತಾಲೂಕು ಅಧ್ಯಕ್ಷ ಮಂಜುನಾಥ್ ಜೈನ್, ಬಜರಂಗದಳ ತಾಲೂಕು ಸಂಚಾಲಕ ಅಭಿಷೇಕ್ ಬಿಂಗಾ, ಎಬಿವಿಪಿ ಜಿಲ್ಲಾ ಸಂಚಾಲಕ ಶಶಾಂಕ್, ಯುವ ಮುಖಂಡರಾದ ಗಗನ್, ಷಣ್ಮುಖ, ರಾಕೇಶ್, ಕಿರಣ್, ಯಶ್ವಂತ್, ರವಿತೇಜ ಮತ್ತಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts