More

    ಜಾಗೃತಿಗೆ ಆರೋಗ್ಯ ಸಿಬ್ಬಂದಿ ಪುಸ್ತಕ ಬರೆಯಲಿ-ಸಾಹಿತಿ ಆನಂದ ಋಗ್ವೇದಿ ಹೇಳಿಕೆ

    ದಾವಣಗೆರೆ: ವೈದ್ಯಕೀಯ ಸಾಹಿತ್ಯದಲ್ಲಿ ವೈದ್ಯರ ಹೊರತಾಗಿ ಇತರೆ ಸಿಬ್ಬಂದಿಯ ಹೆಚ್ಚು ಕೃತಿಗಳು ಹೊರಬಂದಿಲ್ಲ. ಆರೋಗ್ಯ ಇಲಾಖೆ ತಾಂತ್ರಿಕ ಸಿಬ್ಬಂದಿ ಪುಸ್ತಕ ಬರೆದಲ್ಲಿ ಜಗತ್ತಿನ ಆರೋಗ್ಯಕ್ಕೆ ನೀಡುವ ದೊಡ್ಡ ತಿಳಿವಳಿಕೆ ಆಗಲಿದೆ ಎಂದು ಸಾಹಿತಿ ಆನಂದ ಋಗ್ವೇದಿ ಹೇಳಿದರು.

    ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ರೇಣುಕಾ ಪ್ರಕಾಶನ ಸಹಯೋಗದಲ್ಲಿ ಭಾನುವಾರ ಕುವೆಂಪು ಕನ್ನಡ ಭವನದಲ್ಲಿ, ನಿವೃತ್ತ ಹಿರಿಯ ಪ್ರಯೋಗಶಾಲಾ ತಂತ್ರಜ್ಞ ಡಿ.ಜಿ. ರೇವಣಸಿದ್ದಪ್ಪ ಅವರ ‘ಸಂಪಾದನ ಸೂಕ್ತಿಗಳು‘ ಕೃತಿ ಬಿಡುಗಡೆಗೊಳಿಸಿ ಮಾತನಾಡಿದರು.
    ಆರೋಗ್ಯ ಇಲಾಖೆ ದೇಹದ ಬೆನ್ನೆಲುಬು ಇದ್ದಂತೆ. ದಿನದ 24 ಗಂಟೆಯೂ ರೋಗಿಗಳ ಸೇವೆಯಲ್ಲಿ ನಿರತರಾಗಿರುವ ಆರೋಗ್ಯ ಸಿಬ್ಬಂದಿಗೆ ತಮ್ಮ ಹಾಗೂ ಕುಟುಂಬದವರ ಬಗ್ಗೆ ಯೋಚಿಸಲು ಸಮಯವಿರುವುದಿಲ್ಲ. ಕೋವಿಡ್ ಕಾಲದಲ್ಲಿ ಅವರು ಪಿಪಿಇ ಕಿಟ್ ಧರಿಸಿ ಸೇವೆ ನೀಡದೆ ಹೋಗಿದ್ದರೆ ಆರೋಗ್ಯ ಇಲಾಖೆಯ ಅಂಕಿ ಅಂಶಗಳನ್ನು ಕಾಣಲು ಸಾಧ್ಯವೇ ಇರಲಿಲ್ಲ ಎಂದರು.
    ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷ ಬಿ. ವಾಮದೇವಪ್ಪ, ಆರೋಗ್ಯ ಇಲಾಖೆಯಡಿ ಅನೇಕರು ಕೆಲಸ ಮಾಡುತ್ತಿದ್ದಾರೆ. ಅವರು ಬರೆದ ಕೃತಿಗಳು ಸಮಾಜದ ಆಸ್ತಿಯಾಗಿವೆ. ಅನುಭವದ ರೂಪಕವಾಗಿ ಹೊರತರಲಾದ ಸಂಪಾದನ ಸೂಕ್ತಿಗಳು ಕೃತಿಯು ಸಾಹಿತ್ಯ ಲೋಕಕ್ಕೆ ಕೈಗನ್ನಡಿಯಾಗಿದೆ ಎಂದರು.
    ಲೇಖಕ ಡಿ.ಜಿ. ರೇವಣಸಿದ್ದಪ್ಪ,ಕಸಾಪ ಮಾಜಿ ಜಿಲ್ಲಾಧ್ಯಕ್ಷ ಡಾ. ಎಚ್.ಎಸ್. ಮಂಜುನಾಥ ಕುರ್ಕಿ ಅಧ್ಯಕ್ಷತೆ ವಹಿಸಿದ್ದರು. ಸಾಹಿತಿ ಎಸ್. ಓಂಕಾರಯ್ಯ ತವನಿಧಿ, ಪ್ರಯೋಗಶಾಲಾ ತಂತ್ರಜ್ಞರ ಸಂಘದ ಅಧ್ಯಕ್ಷ ಕೆ.ಟಿ. ಮಹೇಶ್ ಇದ್ದರು. ಕೆ.ಯು. ನಿರಂಜನ ಪ್ರಾರ್ಥಿಸಿದರು, ಡಿ.ಕೆ. ಪರಮೇಶ್ವರ ಸ್ವಾಗತಿಸಿದರು, ಸಾಹಿತಿ ವೀರಭದ್ರಪ್ಪ ತೆಲಿಗಿ ಕಾರ್ಯಕ್ರಮ ನಿರೂಪಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts