More

    ಜಾಗತಿಕ ಮಟ್ಟದಲ್ಲಿ ಪ್ರಕಾಶಿಸುತ್ತಿದೆ ಭಾರತ

    ಯಾದಗಿರಿ: ಕೇಂದ್ರ ಸರ್ಕಾರದ ೯ ವರ್ಷಗಳ ಅವಧಿಯಲ್ಲಿ ದೇಶದ ಶ್ರೀಸಾಮಾನ್ಯನಿಗೆ ಅನುಕೂಲವಾಗುವಂತಹ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ ಎಂದು ರಾಯಚೂರು ಸಂಸದ ರಾಜಾ ಅಮರೇಶ್ವರ ನಾಯಕ ತಿಳಿಸಿದರು.

    ಬುಧವಾರ ನಗರದ ಸರ್ಕಾರಿ ಪದವಿ ಮಹಾವಿದ್ಯಾಲಯದಲ್ಲಿ ಕೇಂದ್ರ ಸಂವಹನ ಇಲಾಖೆ ಮತ್ತು ಕಲಬುರಗಿ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಸಹಯೋಗದಲ್ಲಿ ಹಮ್ಮಿಕೊಂಡ ಕೇಂದ್ರ ಸರ್ಕಾರದ ೯ ವರ್ಷಗಳ ಸೇವಾ ಸುಶಾಸನ, ಗರೀಬ್ ಕಲ್ಯಾಣ ಯೋಜನೆ ಹಾಗೂ ಏಕ್ ಭಾರತ-ಶ್ರೇಷ್ಠ ಭಾರತ, ಸ್ವಾತಂತ್ರ್ಯಅಮೃತ ಮಹೋತ್ಸವ ಕುರಿತ ಛಾಯಾಚಿತ್ರ ಪ್ರದರ್ಶನ ಉದ್ಘಾಟಿಸಿ ಮಾತನಾಡಿದರು.

    ಪೋಷಣ್ ಅಭಿಯಾನ, ವಿದ್ಯಾರ್ಥಿಗಳ ಉನ್ನತ ಶಿಕ್ಷಣ, ಹೆದ್ದಾರಿ ಅಭಿವೃದ್ಧಿ, ನೂತನ ರೈಲು ಮಾರ್ಗ ಹೀಗೆ ವಿವಿಧ ರಂಗದಲ್ಲಿ ದೇಶ ಇಂದು ಮುನ್ನುಗ್ಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಭಾರತ ಇಂದು ಪ್ರಕಾಶಿಸುತ್ತಿದ್ದು, ಜಾಗತಿಕ ಮಟ್ಟದಲ್ಲೂ ಮನ್ನಣೆ ಗಳಿಸಿದೆ. ಗ್ರಾಮೀಣ ಪ್ರದೇಶದಲ್ಲಿ ರಸ್ತೆ ಸೇರಿ ಮೂಲ ಸೌಕರ್ಯಕ್ಕೆ ಹೆಚ್ಚಿನ ಒತ್ತು ಕೊಡಲಾಗಿದೆ. ಜಿಲ್ಲೆ ನಾರಾಯಣಪುರ ಬಸವಸಾಗರ ಜಲಾಶಯಕ್ಕೆ ಅತ್ಯುನ್ನತ ತಂತ್ರಜ್ಞಾನದ ಸ್ಕಾಡಾ ಗೇಟ್ ಅಳವಡಿಕೆ ಐತಿಹಾಸಿಕ ಸಾಧನೆಯಾಗಿದೆ ಎಂದು ಹೇಳಿದರು.

    ಕೇಂದ್ರ ಸಂವಹನ ಇಲಾಖೆ ಕ್ಷೇತ್ರ ಪ್ರಚಾರ ಅಧಿಕಾರಿ ಶ್ರುತಿ ಮಾತನಾಡಿ, ಕೇಂದ್ರ ಸರ್ಕಾರದ ೯ ವರ್ಷಗಳ ಸಾಧನೆಯ ವಿವರವುಳ್ಳ ಈ ಛಾಯಾಚಿತ್ರ ಪ್ರದರ್ಶನವನ್ನು ವೀಕ್ಷಿಸಿ ಎಲ್ಲರೂ ಮಾಹಿತಿಯನ್ನು ಪಡೆಯಬೇಕು ಎಂದು ತಿಳಿಸಿದರು.

    ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ರಂಗೋಲಿ, ಚಿತ್ರಕಲೆ, ಭಾಷಣ ಸ್ವರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಪ್ರಾಚಾರ್ಯ ಡಾ.ಸುಭಾಶ್ಚಂದ್ರ ಕೌಲಗಿ, ಸಹಾಯಕ ಪ್ರಾಧ್ಯಾಪಕ ಡಾ.ದೇವಿಂದ್ರಪ್ಪ ಹಳಿಮನಿ, ವಾರ್ತಾ ಇಲಾಖೆ ಸಹಾಯಕ ನಿರ್ದೇಶಕ ಸುಲೈಮಾನ್ ನದಾಫ್, ರಾಘವೇಂದ್ರ ಭೀಮನಹಳ್ಳಿ, ಶಹನಾಜ್ ಬೇಗಂ, ನಾಗಪ್ಪ ಅಂಬಗೋಳ ಇದ್ದರು.

    ಆತ್ಮನಿರ್ಭರ ಭಾರತದ ಮೂಲಕ ಕೇಂದ್ರ ಸರ್ಕಾರ ಯುವಕರಿಗೆ ಸ್ವಾಭಿಮಾನದ ಜೀವನ ಕಲ್ಪಿಸಲು ಮುಂದಾಗಿದೆ. ರೈತ ಸಮ್ಮಾನ್, ಬೇಟಿ ಬಚಾವೋ ಬೇಟಿ ಪಡಾವೋ ಕಾರ್ಯಕ್ರಮ ಸಾಕಷ್ಟು ಜನಮನ್ನಣೆ ಗಳಿಸಿವೆ.
    | ರಾಜಾ ಅಮರೇಶ್ವರ ನಾಯಕ
    ರಾಯಚೂರು ಸಂಸದ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts