More

    ಜೀವನ ಭದ್ರತೆಗೆ ಕೃಷಿ ಭೂಮಿ ನೀಡಿ

    ಹಗರಿಬೊಮ್ಮನಹಳ್ಳಿ: ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ತಾಲೂಕು ದೇವದಾಸಿ ಮಹಿಳೆಯರ ವಿಮೋಚನಾ ಸಂಘ ಸೋಮವಾರ ತಹಸಿಲ್ ಕಚೇರಿ ಮುಂದೆ ಧರಣಿ ನಡೆಸಿತು.

    ಸಂಘದ ರಾಜ್ಯ ಪ್ರ.ಕಾರ್ಯದರ್ಶಿ ಬಿ.ಮಾಳಮ್ಮ ಮಾತನಾಡಿ, ವಿಮುಕ್ತ ದೇವದಾಸಿಯರು ಸಮಾಜದ ಮುಖ್ಯವಾಹಿನಿಗೆ ಬರಲು ಜೀವನ ಭದ್ರತೆಗೆ, ಕುಟುಂಬದ ನಿರ್ವಹಣೆಗೆ ಕೃಷಿ ಯೋಗ್ಯ 5 ಎಕರೆ ಭೂಮಿ ಒದಗಿಸಬೇಕು. ತಾಲೂಕಿನಲ್ಲಿ 60 ರಿಂದ 80 ವಿಮುಕ್ತ ದೇವದಾಸಿಯರು ಇದ್ದಾರೆ.

    ವಲ್ಲಭಾಪುರ ಗ್ರಾಪಂ ವ್ಯಾಪ್ತಿಯ ಸರ್ವೇ ನಂ.167 ಬಿ/2 ಭೂಮಿಯಲ್ಲಿ ಒಂದು ಅಥವಾ ಎರಡು ಎಕರೆ ನೀಡುವಂತೆ ಫಾರ್ಮ್ ನಂ. 57ರ ಅಡಿಯಲ್ಲಿ 20ಕ್ಕೂ ಹೆಚ್ಚು ಮಹಿಳೆಯರು ಅರ್ಜಿ ಸಲ್ಲಿಸಿದ್ದಾರೆ.

    ಬಹುತೇಕರು ಎಸ್ಸಿ, ಎಸ್ಟಿ ಪಂಗಡಕ್ಕೆ ಸೇರಿದವರಾಗಿದ್ದು, ತಾಲೂಕಾಡಳಿತ ಪರಿಶೀಲಿಸಿ ಭೂಸ್ವಾಧೀನ ಪ್ರಕ್ರಿಯೆ ಮೂಲಕ ಅಗತ್ಯ ಕ್ರಮ ವಹಿಸಬೇಕಿದೆ. ಸಾಗುವಳಿ ಮಾಡಿದ ಭೂಮಿಗೆ ಪಟ್ಟಾ ನೀಡಬೇಕು. ದೇವದಾಸಿ ಪದ್ಧಿತಿ ಸಂಪೂರ್ಣ ತೊಲಗಿಸಬೇಕು ಎಂದರು.


    ತಾಲೂಕು ಘಟಕದ ಅಧ್ಯಕ್ಷೆ ಬಿ.ಮೈಲಮ್ಮ, ಕಾರ್ಯದರ್ಶಿ ಪಿ.ಚಾಂದಬೀ, ರೇಣುಕಮ್ಮ, ದುರುಗಮ್ಮ, ಗಂಗಮ್ಮ, ಸಿ.ಹುಲಿಗೆಮ್ಮ, ಮೈಲಮ್ಮ, ವಲ್ಲಭಾಪುರ ಹುಲಿಗೆಮ್ಮ, ಚೌಡಮ್ಮ, ಮಹೇಶ್ವರಿ, ಕರಿಯಮ್ಮ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts